Sandalwood Leading OnlineMedia

ಇನ್ನೋವೇಟೀವ್ ಫಿಲ್ಮ್ ಸಿಟಿ ಈಗ `ಜಾಲಿವುಡ್’: ಎಲ್ಲಾ `ವುಡ್’ಗಳಿಗೆ ಚಿತ್ರೀಕರಣಕ್ಕೆ ಅದ್ಭುತ ಅವಕಾಶ ಕಲ್ಪಿಸಲಿದೆ ಈ ವಿನೂತನ ಸೃಷ್ಟಿ.

ಇದನ್ನೂ ಓದಿ:  ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಎನ್.ಎಮ್. ಸುರೇಶ್ ಆಯ್ಕೆ ; 120 ವೋಟ್ ಗಳಿಂದ ಗೆಲುವು

ಸ್ಯಾಂಡಲ್ವುಡ್, ಬಾಲಿವುಡ್ , ಮಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ರಾಜ್ಯಗಳ ಚಿತ್ರರಂಗವರು ಚಿತ್ರಿಕರಣ ನಡೆಸಲು ಅದ್ಭುತವಾದ ಲೊಕೇಶನ್ ಬಿಡದಿ ಬಳಿ ನಿರ್ಮಾಣವಾಗಿದೆ. ಅದೇ “ಜಾಲಿವುಡ್”.  ಈ ಹಿಂದೆ ಇನ್ನೋವೇಟೀವ್ ಫಿಲ್ಮ್ ಸಿಟಿ ಎಂದು ಗುರುತಿಸಿಕೊಂಡಿದ್ದ ಜಾಗವನ್ನು ಉದ್ಯಮಿ ಐಸಿರಿ ಗಣೇಶ್ ವಹಿಸಿಕೊಂಡು   “ಜಾಲಿವುಡ್” ಹೆಸರಲ್ಲಿ ಮರು ನಾಮಕರಣ ಮಾಡಿದ್ದಾರೆ. ಹಲವು ವಿಶೇಷಗಳಿಂದ ಕೂಡಿರುವ “ಜಾಲಿವುಡ್” ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ.

`ಜಾಲಿವುಡ್’ನಲ್ಲಿರುವ ಪ್ಲಾನೆಟ್ `ಜಾಲಿವುಡ್ ರೆಸ್ಟೋ ಬಾರ್’ ಅನ್ನು ಉದ್ಘಾಟಿಸುತ್ತಿರುವ ಖ್ಯಾತ ರ‍್ಯಾಪರ್, ನಟ ಚಂದನ್ ಶೆಟ್ಟಿ.

ಇದನ್ನೂ ಓದಿ:  ಟೀಸರ್ ನಲ್ಲೇ ಕುತೂಹಲದ ಅಲೆ ಎಬ್ಬಿಸಿದ “ಅಲೆಕ್ಸಾ” !

ಚಿತ್ರೀಕರಣಕಷ್ಟೇ ಅಲ್ಲ.  “ಜಾಲಿವುಡ್”,  ಬಿಡುವಿನ ಸಮಯ ಕಳೆಯಲು ಬಯಸುವ ಮಂದಿಗೆ ಸೂಕ್ತ ಸ್ಥಳ, ಆಟ, ಊಟ ಮನರಂಜನೆ ಸೇರಿದಂತೆ ಹತ್ತು ಹಲವು ಕ್ರೀಡೆಗಳು ಜನರನ್ನು ಕೈ ಬೀಸಿ ಕರೆಯುತ್ತಿದೆ. ಜೊತೆಗೆ ಮಿನಿ ಗೋವಾ ನಿರ್ಮಾಣ ಮಾಡಿದ್ದು ಗೋವಾಕ್ಕೆ ಹೋದರೆ ಜನರಿಗೆ ಯಾವ ಅನುಭವ ಸಿಗುತ್ತದೆಯೋ ಅದನ್ನು ಜಾಲಿವುಡ್ ನಲ್ಲಿ ಕಟ್ಟಿಕೊಡುವ ಕೆಲಸ ಮಾಡಲಾಗಿದೆ ಎಂದು ಜಾಲಿವುಡ್ ಕಮರ್ಷಿಯಲ್ ಪಾರ್ಟನರ್ ನವರಸನ್ ಮಾಹಿತಿ ಹಂಚಿಕೊಂಡರು.

 

ಇದನ್ನೂ ಓದಿ:  ಮರೀಚಿಕೆಯಾಗದ `ಮರೀಚಿ’ ಚಿತ್ರದ ಮೇಲಿನ ನಿರೀಕ್ಷೆ; ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದ `ಚಿನ್ನಾರಿ ಮುತ್ತ

” ಜಾಲಿವುಡ್” ಕಳೆದ ತಿಂಗಳು ಅದ್ದೂರಿಯಾಗಿ ಉದ್ಘಾಟನೆಯಾಗಿತ್ತು. ಈಗ ಪ್ರತಿನಿತ್ಯ 700 ರಿಂದ 800 ಮಂದಿ ಭೇಟಿ ನೀಡುತ್ತಿದ್ದಾರೆ‌.  ವಾರಾಂತ್ಯದಲ್ಲಿ ಈ ಸಂಖ್ಯೆ ಸಾವಿರ ಗಡಿ ದಾಟಲಿದೆ. ವಯಸ್ಕರಿಗೆ 999ರೂ, ಮಕ್ಕಳಿಗೆ 699 ಹಾಗು ಹಿರಿಯ ನಾಗರಿಕರಿಗೆ 599 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿದೆ. ಅಕ್ಟೋಬರ್ 15 ರ ತನಕ ಊಟವನ್ನು ಉಚಿತವಾಗಿ ನೀಡಲಾಗುವುದು. ಈಗಾಗಲೇ ಹಲವು ಕ್ರೀಡಾ ಚಟುವಟಿಕೆಗಳು ಅರಂಭವಾಗಿವೆ ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಕ್ರೀಡೆಗಳು ಪ್ರಾರಂಭವಾಗಲಿದೆ.

ಇದನ್ನೂ ಓದಿ:  ಟ್ರೇಲರ್ ಮೂಲಕ ಭರವಸೆ ಮೂಡಿಸಿದ `ಸೇನಾಪುರ’ದ ಹೊಸಬರ ಸೈನ್ಯ

“ಜಾಲಿವುಡ್” ನಲ್ಲಿ ಚಿತ್ರೀಕರಣ, ಪೋಟೋ ಶೂಟ್, ಕಾರ್ಪರೇಟ್ ಕಂಪನಿಯ ಪ್ರೋಗ್ರಾಮ್ ಗಳು, ಟಿವಿ ವಾಹಿನಿಯ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಬೃಹತ್ ಹಾಲ್ ಗಳಿವೆ. ಸರಿ ಸುಮಾರು 2 ,500 ಜನರ ಸಾಮರ್ಥ್ಯದ  ವೇದಿಕೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಕಣ್ಮನ ಸೆಳೆಯುವ ಎಲ್ ಇ ಡಿ ಫೌಂಟೇನ್ ಆಹ್ಲಾದಕರ ಅನುಭವವಾಗುವುದರಲ್ಲಿ ಸಂಶಯವೇ ಇಲ್ಲ. “ಜಾಲಿವುಡ್” ಗೆ ಬಂದವರು ದಿನ ಪೂರ ಮಕ್ಕಳು, ಕುಟುಂಬದೊಂದಿಗೆ ಕಾಲಕಳೆದು ಎಂಜಾಯ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಮನರಂಜನಾ ಪಾರ್ಕ್ ಎಲ್ಲರಿಗೂ ಇಷ್ಟವಾಗಲಿದೆ. ಅದಕ್ಕಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು “ಜಾಲಿವುಡ್” ಜನರಲ್ ಮ್ಯಾನೇಜರ್ ಬಷೀರ್ ತಿಳಿಸಿದರು.

ಇದನ್ನೂ ಓದಿಜನಪ್ರಿಯವಾಗುತ್ತಿದೆ “ಅರಸಯ್ಯನ ಪ್ರೇಮಪ್ರಸಂಗ”  ಚಿತ್ರದ  “ಅಯ್ಯಯ್ಯೋ ರಾಮ” ಹಾಡು .

ವೇಲ್ಸ್ ಸ್ಟುಡಿಯೋ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಜಾಲಿವುಡ್ ಕಳೆದ ಆಗಸ್ಟ್ 27ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡಿದೆ. ಇದೀಗ ಮುಂದಿನ ಅಕ್ಟೋಬರ್ 7 ರಿಂದ ಹೊಸ ವ್ಯವಸ್ಥೆಗಳು ಆರಂಭಗೊಳ್ಳಲಿದ್ದು, 3ಡಿ ಫೌಟೆನ್ ಶೋ ಹಾಗೂ ಶೂಟಿಂಗ್ ಸಲುವಾಗಿ ಎಸಿ ಫ್ಲೋರ್ ಗಳು ಮತ್ತು ಪಾರ್ಟಿ ಹಾಲ್ ತೆರೆದುಕೊಳ್ಳಲಿವೆ ಎಂದು ವೇಲ್ಸ್ ಸ್ಟುಡಿಯೋ ಸಂಸ್ಥೆಯ ವ್ಯವಸ್ಥಾಪಕ ಬಷಿರ್ ಹಾಗೂ ನಿರ್ಮಾಪಕ ನವರಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 

 

Share this post:

Related Posts

To Subscribe to our News Letter.

Translate »