Sandalwood Leading OnlineMedia

ಡಾ||ರಾಜ್ ನೆರಳಲ್ಲಿ “ಜೋಕರ್ ಆಕ್ಟರ್”

 

ಕನ್ನಡದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಅದರ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ “ಜೋಕರ್ ಆಕ್ಟರ್”. ಪ್ರಶಾಂತ್ ಮಯೂರ ನಿರ್ದೇಶನದ ಕಿರುಚಿತ್ರ ಇದು. ದುಡ್ಡು ತುಂಬಾ ಕೆಟ್ಟದು… ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು 33 ನಿಮಿಷಗಳಲ್ಲಿ ಕಿರುಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಕಲೆ, ಕೊಲೆ. ಹಣದ ಸುತ್ತಾ ನಡೆಯುವ ಕಥೆಯನ್ನು ಪ್ರಶಾಂತ್ ಮಯೂರ ಅವರು “ಜೋಕರ್ ಆಕ್ಟರ್” ಮೂಲಕ ಕಟ್ಟಿಕೊಟ್ಟಿದ್ದಾರೆ.

ಕಿರುಚಿತ್ರದ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ, ನಟ ನಿರ್ಮಾಪಕ ಪ್ರಶಾಂತ್ ಮಯೂರ, ನಾನು ಅಣ್ಣಾವ್ರ ಅಭಿಮಾನಿ. ಅಣ್ಣಾವ್ರ ಧ್ವನಿಯಿಂದ ಆರಂಭವಾಗಿ ಅಣ್ಣಾವ್ರ ಧ್ವನಿಯಿಂದ ಕಿರುಚಿತ್ರ ಪೂರ್ಣಗೊಳ್ಳಲಿದೆ. ಮಯೂರ ಟಾಕೀಸ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಕಿರುಚಿತ್ರವಿದು. ಸ್ನೇಹಿತರೆಲ್ಲಾ ಸೇರಿ ಸೀಮಿತ ಬಜೆಟ್ ನಲ್ಲಿ ಈ ಕಿರುಚಿತ್ರ ಮಾಡಿದ್ದೇವೆ. ಸಿಂಕ್ ಸೌಂಡ್ ನಲ್ಲಿ ಮಾಡಿರುವ ಕಿರುಚಿತ್ರ ಇದು ಎಂದರು. ಈ ಕಿರುಚಿತ್ರವನ್ನು ಯೂಟೂಬ್ ಚಾನೆಲ್ ನಲ್ಲಿ ಪ್ರಕಟಿಸಲಾಗುವುದು, ಕಿರುಚಿತ್ರ ಇಷ್ಟವಾದವರೂ ಕ್ಯೂ ಆರ್ ಕೋಡ್ ಮೂಲಕ ಕನಿಷ್ಠ 20 ರೂಪಾಯಿ ಪಾವತಿಸಬಹುದು. ಈ ಪ್ರಯೋಗ ಯಶಸ್ವಿಯಾದರೆ ಅನೇಕರು ಇಂತಹ ಪ್ರಯತ್ನಕ್ಕೆ ಮುಂದಾಗುತ್ತಾರೆ. ಕಿರುಚಿತ್ರ ಆದರೂ ಎಲ್ಲ ಯೋಜನೆಯಂತೆ ಮಾಡಿದ್ದೇವೆ. ಐದಾರು ದಿನದಲ್ಲಿ ಚಿತ್ರೀಕರಣ ಮಾಡಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ .ಈ ಕಿರು ಚಿತ್ರ ತೆಲುಗಿನಲ್ಲಿ ಬರುತ್ತಿದೆ. ತೆಲುಗಿನಲ್ಲಿ ಇದೇ 21 ರಂದು ವಾಹಿನಿಯಲ್ಲಿ ಬಿಡುಗಡೆ ಆಗಲಿದೆ,ಅಣ್ಣಾವ್ರು ಧ್ವನಿ ತೆಲುಗಿನಲ್ಲಿಯೂ ಇರಲಿದೆ ಎಂದರು ಪ್ರಶಾಂತ್ ಮಯೂರ. ಕಿರು ಚಿತ್ರದಲ್ಲಿ ಪ್ರಶಾಂತ್ ಮಯೂರ್ ಅವರ ನಟನೆ ಅದ್ಭುತವಾಗಿ ಮೂಡಿಬಂದಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಆಸ್ತಿಯಾಗಬಲ್ಲ ಸೂಚನೆ ನೀಡಿದ್ದಾರೆ.  ಜೋಕರ್   ಆಗಿಯೂ ಆಕ್ಟರ್  ಆಗಿಯೂ ಗಮನ ಸೆಳೆಯುತ್ತಾರೆ.

ನಟಿ ಯುಕ್ತ ಪರ್ವಿ ಮಾತನಾಡಿ, ಮೊದಲ ಬಾರಿಗೆ ಈ ಕಿರುಚಿತ್ರದಲ್ಲಿ ನಟಿಸಿದ್ದೆನೆ. ಹೊಸ ಪಯಣ. ಪ್ರಶಾಂತ್ ಅವರ ಕನಸಿನ ಯೋಜನೆ. ಇಡೀ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಚಿತ್ರೀಕರಣದ ಸಮಯದಲ್ಲಿ ಫ್ಯಾಮಿಲಿ ರೀತಿ ಇದ್ದೆವು. ಸಿಗರೇಟ್ ಸಿನಿಮಾಗಾಗಿ ಸೇವನೆ ಮಾಡಿದ್ದೇನೆ. ಯಾರೂ ಕೂಡ ಸಿಗರೇಟ್ ಸೇದ ಬೇಡಿ. ಸಿಗರೇಟ್ ಸೇದುವುದನ್ನು ಆರೇಳು ಟೇಕ್ ತೆಗೆದುಕೊಂಡಿದ್ದೇನೆ. ನಾನು ಕೂಡ ಪರ್ತಕರ್ತೆ ಕನ್ನಡದಲ್ಲಿ ಮೂರು ಚಿತ್ರ ಆಗಿ ಒಂದು ತಮಿಳು ಮತ್ತು ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ಸಹಕಲಾವಿದ ಶೈಲೇಶ್‌ ಮಾತನಾಡಿ, ಕಿರುಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗಲಿ. ಕಥೆ ಹೇಳುವಾಗಲೇ ವಿಭಿನ್ನ ಸೃಜನಾತ್ಮಕ ಪ್ರಯತ್ನ, ಡಿಫರೆಂಟ್ ಡೈಮೆನನ್ ನೀಡಿದ್ದಾರೆ. ನಿರ್ದೇಶಕ ಪ್ರಶಾಂತ್ ಮಯೂರ ಅವರಿಗೆ ಒಳ್ಳೆಯದಾಗಲಿ. ಸಿನಿಮಾ ಬರಲಿ ಎಂದು ಹಾರೈಸಿದರು.

ಮತ್ತೊಬ್ಬ ಕಲಾವಿದ ಮಧುಸೂದನ್ ಮಾತನಾಡಿ, ಅನೇಕ ಕಿರುಚಿತ್ರ ಮಾಡಿದ್ದೇನೆ. ಆದರೆ ಈ ಕಿರುಚಿತ್ರದ ಚಿತ್ರೀಕರಣ ಮಾಡುವಾಗ ಕಿರುಚಿತ್ರ ಅನ್ನಿಸಲೇ ಇಲ್ಲ. ಪ್ರಶಾಂತ್ ಅವರ ತಂಡ ಹಗಲು ರಾತ್ರಿ ಕೆಲಸ ಮಾಡಲಾಗಿದೆ. ಒಳ್ಳೆಯ ಚಿತ್ರ ಮಾಡಲಿ ಎಂದರು. ಉಗ್ರಂ ಸುರೇಶ್ ಮಾತನಾಡಿ ಸಿನಿಮಾ ಚಿತ್ರೀಕರಣ ಅನ್ನಿಸಿತ್ತು. ನಿರ್ದೇಶಕರ ಶ್ರಮ ಕಿರುಚಿತ್ರದಲ್ಲಿ ಎದ್ದು ಕಾಣುತ್ತದೆ ಎಂದು ಹೇಳಿದರು. ಛಾಯಾಗ್ರಾಹಕ ಪಾಂಡಿಯನ್ ಕುಪ್ಪನ್ ಮಾತನಾಡಿ, ಮಾತಿಗಿಂತ ಕೆಲಸ ಮಾತನಾಡಬೇಕು ಎನ್ನುವ ಉದ್ದೇಶ ನನ್ನದು. ತಮಿಳಿನಲ್ಲಿ ಎರಡು ಚಿತ್ರ ಮಾಡಿದ್ದೇನೆ ಎಂದರು.ರಿಶಾನ್ ಆದಿತ್ಯ ಸಂಗೀತ, ಉಜ್ವಲ್ ಗೌಡ ಸಂಕಲನ ಕಿರುಚಿತ್ರಕ್ಕಿದೆ.

 Ibbani Tabbida Ileyali review: ಬೆಳ್ಳಿತೆರೆಯಲ್ಲಿ ಬೆಳ್ಳಿಯಪ್ಪ `ಮ್ಯಾಜಿಕ್’

Share this post:

Related Posts

To Subscribe to our News Letter.

Translate »