Sandalwood Leading OnlineMedia

ವಿಜಯ ರಾಘವೇಂದ್ರ ಅಭಿನಯದ “ಜೋಗ್ 101” ಚಿತ್ರದ ಮೊದಲ ಹಾಡು ಬಿಡುಗಡೆ .

ನಿರ್ಮಾಪಕ & ಕ್ರಿಯೇಟಿವ್ ಡೈರೆಕ್ಟರ್ ರಾಘು ರವರ ಸೆವೆನ್ ಸ್ಟಾರ್ ಪಿಕ್ಚರ್ಸ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಹಾಗೂ ಕರ್ನಾಟಕದ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅಭಿನಯಯದ, ವಿಜಯ್ ಕನ್ನಡಿಗ ನಿರ್ದೇಶನದ, “ಜೋಗ್ 101” ಚಿತ್ರದ ಮೊದಲನೆಯ ಹಾಡು “ಮುಂಜಾನೆ ಮಂಜನ್ನು ” ಹಾಡಿನ ಲಿರಿಕಲ್ ವಿಡಿಯೋ ಸೆವೆನ್ ಸ್ಟಾರ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಅವಿನಾಶ್ ಆರ್ ಬಾಸೂತ್ಕರ್ ಅವರ ಸಂಗೀತ ನಿರ್ದೇಶನವಿರುವ ಈ ಹಾಡಿಗೆ ಡಾ.ವಿ.ನಾಗೇಂದ್ರಪ್ರಸಾದ್ ರವರ ಸಾಹಿತ್ಯವಿದ್ದು,
ಭಾರತದ ಸುಪ್ರಸಿದ್ಧ ಗಾಯಕ ರಘುದೀಕ್ಷಿತ್ ಹಾಡಿದ್ದಾರೆ ಹಾಗು ಈ ಹಾಡಿನ ಇಂಗ್ಲೀಷ್ ಭಾಷಾಂತರವನ್ನು ಸುಮನ್ ಜಾದೂಗಾರ್ ಮಾಡಿದ್ದಾರೆ.


ಇದನ್ನೂ ಓದಿ ಪ್ರಭುದೇವ-ಶಿವಣ್ಣ ಡ್ಯಾನ್ಸ್, ಉಪೇಂದ್ರ ಸಾಂಗ್: ಕರಟಕ ದಮನಕ ಹಾಡು ಇಂದು ರಿಲೀಸ್
ಈ ಹಾಡಿನ ಬಿಡುಗಡೆಯ ವಿಚಾರವನ್ನು ತಾವುಗಳು ದೃಶ್ಯ ಮಾಧ್ಯಮದಲ್ಲಿ ಅಥವಾ ಪತ್ರಿಕೆ ಮಾಧ್ಯಮದಲ್ಲಿ ಪ್ರಕಟಿಸಿ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ಕೋರಿಕೊಳ್ಳುತ್ತೇವೆ. ತಾವು
ಎಂದಿನಂತೆ ನಮ್ಮ ಜೊತೆಯಲ್ಲಿದ್ದು, ಈ ಹಾಡನ್ನಾ ಜನಸಾಮಾನ್ಯರಿಗೆ ಮುಟಿಸುವಲ್ಲಿ ಸಹಕರಿಸಿಬೇಕೆಂದು ಸೆವೆನ್ ಸ್ಟಾರ್ ಪಿಕ್ಚರ್ಸ್ ಸಂಸ್ಥೆಯವರು ವಿನಂತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ ರಜನಿಕಾಂತ ಅಭಿನಯದ ಲಾಲ ಸಲಾಮ್ ಮೊದಲ ದಿನದ ಪ್ರದರ್ಶನಕ್ಕೆ ಪ್ರೇಕ್ಷಕರಿಲ್ಲ..

ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ ‘ಶಾಖಾಹಾರಿ’ ಪ್ರೀ-ರಿಲೀಸ್ ಇವೆಂಟ್…,ಮಲೆನಾಡಿನ ಥ್ರಿಲ್ಲರ್ ಕಥೆಗೆ ಅಶ್ವಿನಿ-ಸುಕ್ಕ ಸೂರಿ ಸಾಥ್..

ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ “ಜೋಗ್ 101” ಚಿತ್ರದ ತಾರಾಬಳಗದಲ್ಲಿದ್ದಾರೆ.

Share this post:

Translate »