Sandalwood Leading OnlineMedia

ಶಾರುಕ್ ಖಾನ್ ‘ಜವಾನ್’ ಎಂಟ್ರಿಗೆ ಡೇಟ್ ಫಿಕ್ಸ್..ಸೆಪ್ಟಂಬರ್ 7ಕ್ಕೆ ವರ್ಲ್ಡ್ ವೈಡ್ ಕಿಂಗ್ ಖಾನ್ ಅಬ್ಬರ ಶುರು

ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಕಿಂಗ್ ಖಾನ್ ಶಾರುಕ್ ಖಾನ್ ಜವಾನ್ ಮೇಲೆ ಚಿತ್ರರಸಿಕರ ಚಿತ್ತ ನೆಟ್ಟಿದೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಜವಾನ್ ಚಿತ್ರ ಸೆಪ್ಟಂಬರ್ 7ಕ್ಕೆ ವಿಶ್ವಾದ್ಯಂತ ದರ್ಶನ ಕೊಡಲಿದೆ.

Exclusive Photos ; ವರುಣಾದಲ್ಲಿ ಸಿದ್ದರಾಮಯ್ಯನವರ ಪರ ಅಬ್ಬರದ ಪ್ರಚಾರ ಮಾಡಿದ ನಟ ಶಿವರಾಜ್ ಕುಮಾರ್

ಜವಾನ್ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿತ್ತು. ಇದೀಗ ಚಿತ್ರತಂಡ ಅಂತಿಮ ದಿನಾಂಕ ಘೋಷಿಸಿದ್ದು, ಎಸ್ ಆರ್ ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಪಕ್ಕ ಆಕ್ಷನ್ ಪ್ಯಾಕ್ಡ್ ಸಿನಿಮಾವಾಗಿರುವ ಜವಾನ್ ನಲ್ಲಿ ದಕ್ಷಿಣ ಭಾರತದ ಸಿನಿತಾರೆಯರ ದಂಡೇ ಇದೆ. ಶಾರುಕ್ ಗೆ ಮೊದಲ ಬಾರಿಗೆ ಜೋಡಿಯಾಗಿ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ, ಯೋಗಿಬಾಬು ಸೇರಿದಂತೆ ಹಲವರು ಬಣ್ಣ ಹಚ್ಚಿರುವ ಈ ಸಿನಿಮಾವನ್ನು ಗೌರಿ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಶಾರುಕ್ ಖಾನ್ ಒಡೆತನದ ರೆಡ್ ಚಿಲ್ಲೀಸ್  ಎಂಟರ್ ಟೈನ್ಮೆಂಟ್ ನಡಿ ಬರ್ತಿರುವ ಜವಾನ್ ಸಿನಿಮಾ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮಾತ್ರ ರಿಲೀಸ್ ಆಗ್ತಿದೆ.

 `ಡೇರ್ ಡೆವಿಲ್ ಮುಸ್ತಫಾ’ ರಿಲೀಸ್ ಗೆ ಡೇಟ್ ಫಿಕ್ಸ್;  `ಡಾಕ್ಟರ್ ಬ್ರೋ’ trailerಗೆ  ಪ್ರೇಕ್ಷಕ ಫಿದಾ!

ಕಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಅಟ್ಲಿ ಮೊದಲ ಬಾರಿಗೆ ಬಾಲಿವುಡ್ ಬಾದ್ ಷಾ ಶಾರುಕ್ ಗೆ ಆಕ್ಷನ್ ಕಟ್ ಹೇಳಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ವಿವಿದ ದೇಶದಲ್ಲಿ ಚಿತ್ರೀಕರಣ ನಡೆಸುತ್ತಿರುವ ಜವಾನ್ ಸಿನಿಬಳಗ ಶೀಘ್ರದಲ್ಲಿಯೇ ಟೀಸರ್ ಬಿಡುಗಡೆಗೆ ಪ್ಲಾನ್ ನಡೆಸುತ್ತಿದೆ.

 

Share this post:

Related Posts

To Subscribe to our News Letter.

Translate »