ಸ್ಯಾಂಡಲ್‌ವುಡ್‌ನಲ್ಲಿ`ಬಹದ್ದೂರ್’ `ಭರ್ಜರಿ’ `ಭರಾಟೆ’ `ಜೇಮ್ಸ್’ ನಂತಹ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ಚೇತನ್ ಕುಮಾರ್ `ಜೇಮ್ಸ್’ ಚಿತ್ರದ ನಂತರ ಈಗ ಹೊಸ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
ರೇಮೋ ಹೀರೋ ಇಶಾನ್‌ಗೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.
ರೆಮೋ’ ಚಿತ್ರಕ್ಕೆ ಇಶಾನ್ ನಾಯಕ. ಆ ಚಿತ್ರದ ಹಾಡುಗಳು, ಟೀಸರ್ ಎಲ್ಲರ ಗಮನ ಸೆಳೆದಿವೆ. ಈ ಕಾರಣದಿಂದ ಇಶಾನ್ ಅನೇಕರಿಗೆ ಪರಿಚಯ ಆಗಿದ್ದಾರೆ.
ಅವರ ನಟನೆಯ ಸಿನಿಮಾ ತೆರೆಗೆ ಬರುವುದಕ್ಕೆ ಮೊದಲೇ ಸ್ಟಾರ್ ನಿರ್ದೇಶಕನ ಜತೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ `ಜೇಮ್ಸ್’ ಚಿತ್ರದ ನಂತರ ಯಾವ ಹೊಸ ಸಿನಿಮಾನೂ ಘೋಷಣೆ ಮಾಡಿರಲಿಲ್ಲ. ಈಗ ನಿರ್ದೇಶಕ ಚೇತನ್ ವಿಭಿನ್ನ ಸಿನಿಮಾ ಮೂಲಕ ಸೌಂಡ್ ಮಾಡ್ತಿದ್ದಾರೆ.`ಜೇಮ್ಸ್’’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿತು. ಪುನೀತ್ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಫ್ಯಾನ್ಸ್ ಈ ಚಿತ್ರದ ಜತೆ ಭಾವನಾತ್ಮಕವಾಗಿ ಕನೆಕ್ಟ್ ಆದರು.
ಪುರಿ ಜಗನ್ನಾಥ್ ನಿರ್ದೇಶನದ `ರೋಗ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿರೋ ನಟ ಇಶಾನ್ ಸದ್ಯ `ರೇಮೊ’ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಈಗ ಹೊಸ ಸಿನಿಮಾಗಾಗಿ ಚೇತನ್ ಕುಮಾರ್‌ಗೆ ಜತೆಯಾಗಿದ್ದಾರೆ. ಚೇತನ್ ಮತ್ತು ಇಶಾನ್ ಕಾಂಬಿನೇಷನ್ ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಪಕ್ಕಾ ಮಾಸ್ ಜಾನರ್ ಕಥೆಯ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ.