Sandalwood Leading OnlineMedia

ಆಮೇಜಾನ್ ಪ್ರೈಮ್ ಪಾಲಾದ ಜಲಪಾತ.

 

– ಕನ್ನಡ ಸಿನಿಮಾಗಳಿಗೆ ಓ ಟಿ ಟಿ ವೇದಿಕೆ ತುಂಬಾ ಕಷ್ಟ ಸಾಧ್ಯ ಎನ್ನುವ ಪ್ರಸ್ತುತ ಸಂದರ್ಭದಲ್ಲಿ ಇಲ್ಲೊಂದು ಸಿನಿಮಾ ಆಮೇಜಾನ್ ಪ್ರೈಮ್ ಲ್ಲಿ ಬಿಡುಗಡೆಗೊಂಡು ಸಿನಿ ಪ್ರಿಯರ ಮನರಂಜಿಸುತ್ತಿದೆ.
ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು, ಶೃಂಗೇರಿ ಯ ರಂಗಕರ್ಮಿ , ಬಹುಮುಖ ಪ್ರತಿಭೆ ರಮೇಶ್ ಬೇಗಾರ್ ರಚಿಸಿ – ನಿರ್ದೇಶಿಸಿದ ಜಲಪಾತ 2023 ರಲ್ಲಿ ಬಿಡುಗಡೆ ಗೊಂಡು ಸದ್ದಿಲ್ಲದೇ ಹಲವು ವಿಕ್ರಮವನ್ನು ದಾಖಲಿಸಿದ ಪರಿಸರ ಕಾಳಜಿಯ ವಿಶಿಷ್ಟ ಸಿನಿಮಾ.

ಇದನ್ನೂ ಒದಿ ದಾಂಪತ್ಯ ಜೀವನ ಮುರಿದುಕೊಂಡ ಹೇಮ ಮಾಲಿನಿ ಪುತ್ರಿ ಇಶಾ ಡಿಯೋಲ್
ಪ್ರಮೋದ್ ಶೆಟ್ಟಿ ಕೆರಿಯರ್ ಬೆಸ್ಟ್ ಪಾತ್ರವೆಂದು ಮಾಧ್ಯಮ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದ ಜಲಪಾತ ದಲ್ಲಿ ಸಂಪೂರ್ಣ ಶೃಂಗೇರಿ, ತೀರ್ಥಹಳ್ಳಿ ಭಾಗದ ಹವ್ಯಾಸಿ ರಂಗಭೂಮಿ ಕಲಾವಿದ ರೇ ಬಣ್ಣ ಹಚ್ಚಿದ್ದರು. ಪದವಿಪೂರ್ವ ಖ್ಯಾತಿಯ ರಜನೀಶ್ ಮತ್ತು ನಾಗಶ್ರೀ ಬೇಗಾರ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರಗಳಲ್ಲಿ ರವಿಕುಮಾರ್ ಬಿ. ಎಲ್., ರೇಖಾ ಪ್ರೇಮ್ ಕುಮಾರ್, ವಿಶ್ವನಾಥ್, ನಯನ, ಸ್ವಾತಿ, ವೈಶಾಲಿ, ಸುನೀತಾ, ಸುರೇಶ್ ಎಂ ಆರ್, ಚಿದಾನಂದ ಹೆಗ್ಗಾರ್, ಕಾರ್ತಿಕ್ ಮೊದಲಾದವರಿದ್ದರು.

ಇದನ್ನೂ ಒದಿ ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ “ಬಲರಾಮನ ದಿನಗಳು” .

ಮಲೆನಾಡಿನ ತಂತ್ರಜ್ಞರೆ ಸೇರಿ ಮಾಡಿದ ಸಿನಿಮಾ ಕೂಡ ಇದಾಗಿತ್ತು. ಶಶಿರ – ಛಾಯಾಗ್ರಹಣ, ಅವಿನಾಶ್ -ಸಂಕಲನ, ಸಾದ್ವಿನಿ ಕೊಪ್ಪ – ಸಂಗೀತ ನಿರ್ದೇಶನ, ಅಭಿಷೇಕ್ ಹೆಬ್ಬಾರ್ – ಕಲಾ ನಿರ್ದೇಶನ ಮತ್ತು ವಿನು ಮನಸು ಅವರ ಹಿನ್ನಲೆ ಸಂಗೀತ ಹೊಂದಿರುವ ಜಲಪಾತ ಸಂಪೂರ್ಣ ಮಲೆನಾಡ ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿ ಯನ್ನು ಆಧರಿಸಿ ಸಿದ್ಧವಾದ ಕಂಟೆಂಟ್ ಸಿನಿಮಾ ಆಗಿದೆ.

ಇದನ್ನೂ ಒದಿ ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ “ಬಲರಾಮನ ದಿನಗಳು” .

ಮಲೆನಾಡ ಜ್ವಲಂತ ಪರಿಸರ ಸಂಬಂಧಿ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವಿನೂತನ ಶೈಲಿಯ ಜಲಪಾತ ಬೆಂಗಳೂರಲ್ಲಿ 50 ದಿನ ಪ್ರದರ್ಶನ ಕಂಡ ಹೆಗ್ಗಳಿಕೆ ಹೊಂದಿದೆ. ಸಿ ಕೇಂದ್ರ ಕೊಪ್ಪ ಮತ್ತು ಬಿ ಕೇಂದ್ರ ಚಿಕ್ಕಮಗಳೂರಲ್ಲಿ ಕೂಡ ಸತತವಾಗಿ 5 ವಾರ ಓಡಿದ ಕೀರ್ತಿ ಜಲಪಾತ ದ್ದು.

ಇದನ್ನೂ ಒದಿ ಸೌತ್ ಇಂಡಿಯಾ ಸೆಲೆಬ್ರಿಟಿಗಳಿಂದ ‘ಕೆಟಿಎಂ’ ಟ್ರೇಲರ್ ರಿಲೀಸ್.. ಫೆ.16ಕ್ಕೆ ತೆರೆಗೆ ಬರ್ತಿದೆ ದೀಕ್ಷಿತ್ ಸಿನಿಮಾ..
ಇದೀಗ ಆಮೇಜಾನ್ ಪ್ರೈಮ್ ಲ್ಲೂ ದಾಖಲೆ ಸಂಖ್ಯೆಯ ಸ್ಟ್ರಿಮ್ ಆಗುತ್ತಾ ಯಶಸ್ಸಿನ ಪ್ರಯಾಣ ಮುಂದುವರೆಸಿದೆ.ಈ ಯಶಸ್ಸಿಗಾಗಿ ರವೀಂದ್ರ ತುಂಬರಮನೆ ಮತ್ತು ರಮೇಶ್ ಬೇಗಾರ್ ಕನ್ನಡ ಜನತೆಗೆ ಕೃತಜ್ಞತೆ ಸಮರ್ಪಸಿದ್ದಾರೆ.ಸಂದೇಶಾ ತ್ಮಕ ಚಿತ್ರವೊಂದು ಸರ್ವ ವಿಧದಲ್ಲೂ ಯಶಸ್ಸು ದಾಖಲಿಸಿರುವುದು ನಿಜಕ್ಕೂ ಅಭಿನಂದನೀಯವಾಗಿದೆ.

Share this post:

Related Posts

To Subscribe to our News Letter.

Translate »