ಸ್ಯಾಂಡಲ್ವುಡ್ ನವರಸನಾಯಕ ಖ್ಯಾತಿಯ ನಟ ಜಗ್ಗೇಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಭಗವದ್ಗೀತೆ ಹಾಗೂ ಮೊಬೈಲ್ ಕುರಿತು ಬರೆದಿರುವ ಒಂದು ಸಂದೇಶದ ಇಮೇಜನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋ ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.
ಇದನ್ನೂ ಓದಿ:ಉತ್ತರಕಾಂಡಕ್ಕೆ ಬಹುಭಾಷಾ ತಾರೆ ಎಂಟ್ರಿ: `ವೀರವ್ವ’ಳಾಗಿ ಭಾವನಾ ಮೆನನ್
‘ಕರ್ಣ ಕೊಟ್ಟು ಕೆಟ್ಟ. ದುರ್ಯೋಧನ ಕೊಡದೇ ಕೆಟ್ಟ. ಧರ್ಮರಾಜ ಜೂಜಾಡಿ ಕೆಟ್ಟ. ದ್ರೌಪದಿ ನಕ್ಕು ಕೆಟ್ಟಳು. ಭೀಷ್ಮ ಮಾತನಾಡದೇ ಕೆಟ್ಟ. ಧೃತರಾಷ್ಟ್ರ ಮೌನ ವಹಿಸಿ ಕೆಟ್ಟ. ಶಕುನಿ ತಂತ್ರದಿಂದ ಕೆಟ್ಟ. ಕುಂತಿ ಮಂತ್ರದಿಂದ ಕೆಟ್ಟಳು. ಅಭಿಮನ್ಯು ಅರ್ಧವಿದ್ಯೆಯಿಮದ ಕೆಟ್ಟ. ಅಶ್ವತ್ಥಾಮ ಅವಿವೇಕತನದಿಂದ ಕೆಟ್ಟ. ಈ ಎಲ್ಲ ಕೆಟ್ಟವರ ಮಧ್ಯೆ ನಮಗೆ ಸಿಕ್ಕಿದ್ದು ಸುಂದರ ಮಹಾ ಭಾರತ. ಹಾಗೂ ಪ್ರೇರಕ ಭಗವದ್ಗೀತೆ. ಇವುಗಳನ್ನು ಸರಿಯಾಗಿ ಓದದೇ ಮೊಬೈಲ್ ಹುಚ್ಚಿನಿಂದನಾವು ಕೆಟ್ಟಿದ್ದೇವೆ…’
‘ಸತ್ಯ ಅಲ್ಲವೆ..!!, ಇಂದು ಮನುಷ್ಯ ಸ್ನೇಹ ಸಂಬಂಧ ಬಂಧು ಭ್ರಾತೃ ಮಡದಿ ಮಕ್ಕಳು ಸಮಾಜದಿಂದ ಮಾತಿಗೆ ಪ್ರತಿಯುತ್ತರ ಸಂತೋಷ ಸಿಗದ ಅನಾಥ..!!, ಆದರು ಮನುಷ್ಯ ಎಲ್ಲರು ನನ್ನವರೆ ನನ್ನಷ್ಟು ಸುಖಿ ಯಾರಿಲ್ಲಾ ಎಂದು ನಟಿಸಿ ಮುಖವಾಡ ಹಾಕಿ ಬದುಕಿ ಏಕಾಂತದಲ್ಲಿ ಕಣ್ಣೀರಿನ ಬಂಧುವಾಗಿ ಬದುಕುವ!! ವಾವ್ ಮನುಷ್ಯ ಸಂಬಂಧ ಹಾಳುಮಾಡಿದ ಅದ್ಭುತ ಮೊಬೈಲ್ ಸಾಮ್ರಾಜ್ಯ ಸುಖಿನೋಭವ!!..’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಹಲವರು ಹಲವು ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:ʻಕಾಗದʼದ ಮೇಲೆ ಪ್ರೀತಿಯ ಪದಗಳು : ಹೊಸ ಹೀರೋ ಆದಿತ್ಯಗೆ ಹೊಗಳಿಕೆಯ ಮಹಾಪೂರ