‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ರಾ.. ರಾ.. ರಕ್ಕಮ್ಮ ರಿಲೀಸ್ ಆಗಿ ಭಾರೀ ಮಟ್ಟದಲ್ಲಿ ವೈರಲ್ ಆಗಿದೆ. ಅದರಲ್ಲೂ ಈ ಹಾಡಿಗೆ ಸೆಲೆಬ್ರಿಟಿಗಳು ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಈ ಹಾಡಿ ಬಿಡುಗಡೆ ಆಗಿ, ಅಲ್ಲಿಯೂ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಅನೂಪ್ ಭಂಡಾರಿ ನಿರ್ದೇಶಿಸಿರುವ ವಿಕ್ರಾಂತ್ ರೋಣ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ರಾ.. ರಾ.. ರಕ್ಕಮ್ಮ ಹಾಡು ಎಲ್ಲೆಲ್ಲೂ ಸದ್ದು ಮಾಡುತ್ತಿದೆ.
ಅದರಲ್ಲೂ ಈ ಹಾಡಿಗೆ ಸೆಲೆಬ್ರಿಟಿಗಳು ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಈ ಹಾಡಿ ಬಿಡುಗಡೆ ಆಗಿ, ಅಲ್ಲಿಯೂ ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಹಾಡಿಗೆ ಮೊದಲ ಬಾರಿಗೆ ನಟ ಸುದೀಪ್ ರೀಲ್ಸ್ ಮಾಡುವ ಮೂಲಕ ಮತ್ತಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಹಾಡಿನಲ್ಲಿ ರಕ್ಕಮ್ಮನಾಗಿ ಹೆಜ್ಜೆ ಹಾಕಿರುವ ಶ್ರೀಲಂಕಾ ಬೆಡಗಿ ಜಾಕ್ವೆಲಿನ್, ಇದೀಗ ಅಭಿಮಾನಿಗಳ ಭೇಟಿಗೆ ಆಗಮಿಸಲಿದ್ದಾರಂತೆ. ಈ ಬಗ್ಗೆ ಟ್ವಿಟರ್‌ನಲ್ಲಿ ವಿಕ್ರಾಂತ್ ರೋಣ ತಂಡ ಟ್ವೀಟ್ ಮಾಡಿದೆ.
ಧನ್ಯವಾದ ಎಂದ ಜಾಕ್ವೆಲಿನ್ ಫರ್ನಾಂಡಿಸ್
‘’ನಮಸ್ಕಾರ ಎಲ್ಲರಿಗೂ.. ರಾ.. ರಾ.. ರಕ್ಕಮ್ಮ ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲಾ ಇನ್ಮೇಲೆ ಒಂದೇ ಹೆಸರು.. ವಿಕ್ರಾಂತ್ ರೋಣ’’ ಎಂದು ಕನ್ನಡದಲ್ಲೇ ವಿಡಿಯೋದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.
ಜೊತೆಗೆ, ‘’ನಮ್ಮ ಹಾಡು ‘ರಾ.. ರಾ.. ರಕ್ಕಮ್ಮ’ ನೋಡಿ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು. ಕಿಚ್ಚ ಸುದೀಪ್ ಅವರ ಜೊತೆ ಸಾಂಗ್ ಶೂಟಿಂಗ್ ಮಾಡಿದ ಅನುಭವ ಚೆನ್ನಾಗಿತ್ತು. ನೀವೆಲ್ಲರೂ ಹಾಡನ್ನ ಇಷ್ಟ ಪಟ್ಟಿರುವುದು ನನಗೆ ತುಂಬಾ ಖುಷಿಯಾಗಿದೆ. ನಾನು ಆದಷ್ಟು ಬೇಗ ಬೆಂಗಳೂರಿಗೆ ಬಂದು ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ. ಅಲ್ಲಿಯವರೆಗೂ ‘ರಾ.. ರಾ.. ರಕ್ಕಮ್ಮ’ ಹಾಡನ್ನ ಕೇಳುತ್ತಿರಿ’’ ಎಂದು ಜಾಕ್ವೆಲಿನ್ ಫರ್ನಾಂಡಿಸ್ ವಿಡಿಯೋದಲ್ಲಿ ಹೇಳಿದ್ದಾರೆ.
https://twitter.com/VikrantRona/status/1531565585070444545