Sandalwood Leading OnlineMedia

ಶಿವಣ್ಣ ಅಭಿನಯದ IV ರಿರ್ಟನ್ಸ್’ನಲ್ಲಿ ತಾಂತ್ರಿಕ ಮೋಡಿ 

ಕೆಲವೊಂದು ಸಿನಿಮಾಗಳು ಸೆಟ್ಟೇರುವುದಕ್ಕೂ ಮುನ್ನವೇ ಭರ್ಜರಿ ಸೌಂಡು ಮಾಡುತ್ತವೆ. ಮೇಕಿಂಗ್‌, ಬಜೆಟ್‌, ಬೃಹತ್‌ ತಾರಾಗಣ, ನೂರಾರು ದಿನಗಳ ಚಿತ್ರೀಕರಣ, ಸ್ಟಾರ್‌ ಮಟ್ಟದ ತಾಂತ್ರಿಕ ಬಳಗ… ಹೀಗೆ ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈಗ ‘ ಐವಿ ರಿರ್ಟನ್ಸ್’ ಸಿನಿಮಾ ಹೆಸರಾಂತ ತಾಂತ್ರಿಕ ಬಳಗದ ಕಾರಣದಿಂದ ಸುದ್ದಿಯಲ್ಲಿದೆ. ದೊಡ್ಮನೆ ಕುಡಿ ಲಕ್ಕಿ ಗೋಪಾಲ್ ಚೊಚ್ಚಲ ಪ್ರಯತ್ನದ ಐವಿ ರಿರ್ಟನ್ಸ್ ಸಿನಿಮಾದಲ್ಲಿ ಹೆಸರಾಂತ ಟೆಕ್ನಿಷಿಯನ್‌ ಕೆಲಸ ಮಾಡಲಿದ್ದಾರೆ. ಹೀಗಾಗಿ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ತಮಿಳಿನ ಹೆಸರಾಂತ ಸಂಗೀತ ನಿರ್ದೇಶಕ ಅಮ್ರಿಷ್ ಈ ಸಿನಿಮಾದ ಹಾಡುಗಳನ್ನು ಕಂಪೋಸ್‌ ಮಾಡಿದ್ದು, ರುಸ್ತುಂ, ಘೋಸ್ಟ್ ಚಿತ್ರದ ಖ್ಯಾತಿಯ ಮಹೇನ್ ಸಿಂಹ ಸಿನಿಮಾಟೋಗ್ರಫಿಯಲ್ಲಿ ಐವಿ ರಿರ್ಟನ್ಸ್ ಸಿನಿಮಾ ಮೂಡಿ ಬರಲಿದೆ. ಸೂರಿ ಅವರ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡಿರುವ ದೀಪು ಎಸ್ ಕುಮಾರ್ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ವಿದ್ಯಾಧರಣ್ ಕಥೆ, ಮಾಸ್ತಿ ಪಂಚಿಂಗ್ ಮಾತು, ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ರಂಗು ತುಂಬಲಿದೆ. ವೇಣುಗೋಪಾಲ್ ಅಸೋಸಿಯೇಟ್ ಡೈರೆಕ್ಟರ್ ಆಗಿ, ರೇಣುಕಾ ಪ್ರಸಾದ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ, ಮೈಸೂರು ರಮೇಶ್ ಪ್ರೊಡಕ್ಷನ್ ಮ್ಯಾನೇಜರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

 

ಇದನ್ನೂ ಓದಿಪ್ರೇಕ್ಷಕರ ಮನಗೆದ್ದ `ಕೆಟಿಎಮ್’ ಯುಗಳ ಗೀತೆ

1989 ರಲ್ಲಿ ಬಿಡುಗಡೆ ಆಗಿದ್ದ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಸಿನಿಮಾ ಶಿವರಾಜ್‌ಕುಮಾರ್‌ ಕರಿಯರ್‌ನಲ್ಲಿ ಅತ್ಯಂತ ವಿಶೇಷವಾಗಿತ್ತು. ಅವರು ತರಲೆ ಪೊಲೀಸ್‌ ಆಗಿ ನಟಿಸಿದ್ದ ಈ ಸಿನಿಮಾ ಆ ಕಾಲಕ್ಕೆ ಸೂಪರ್‌ ಡ್ಯೂಪರ್‌ ಹಿಟ್‌ ಆಗಿತ್ತು. ಈಗ ಅವರು ಮತ್ತೆ ಅಂತಹದ್ದೇ ಕಥೆಯೊಂದಿಗೆ ‘ಐವಿ ರಿಟರ್ನ್ಸ್’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 34 ವರ್ಷಗಳ ಹಿಂದೆ ದಿನೇಶ್‌ ಬಾಬು ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ‘ಐವಿ ರಿಟರ್ನ್ಸ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಸೋದರ ಸಂಬಂಧಿ ಲಕ್ಕಿ ಗೋಪಾಲ್‌ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಖಾಕಿ ಖದರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಮೈಲಾರಿ ಎಂ ಹಣ ಹಾಕುತ್ತಿದ್ದಾರೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಶೀಘ್ರದಲ್ಲೇ ಇನ್ಸ್ ಪೆಕ್ಟರ್ ವಿಕ್ರಂ ರಿಪೋರ್ಟಿಂಗ್ ಶುರು ಮಾಡಲಿದ್ದಾರೆ. ಅಂದರೆ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

 

Share this post:

Related Posts

To Subscribe to our News Letter.

Translate »