Sandalwood Leading OnlineMedia

ದರ್ಶನ್‌ಗೆ ತೊಂದರೆಯಾದಾಗ ಖುಷಿ ಪಡುವ ವ್ಯಕ್ತಿ ನಾನಲ್ಲ : ಸುದೀಪ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಹದಿನೇಳು ಮಂದಿಯ ಗ್ಯಾಂಗ್ ಅನ್ನೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪರ ವಕೀಲರು ಇನ್ನು ಜಾಮೀನಿಗೆ ಕೂಡ ಅರ್ಜಿ ಸಲ್ಲಿಕೆ ಮಾಡಿಲ್ಲ. ದರ್ಶನ್ ವಿಚಾರವಾಗಿ ಮಾತನಾಡಿರುವ ಕಿಚ್ಚ ಸುದೀಪ್ ಪೊಲೀಸರು ಸುಮ್ಮ ಸುಮ್ಮನೆ ಅರೆಸ್ಟ್ ಮಾಡಿರೋದಲ್ಲ ಎಂದಿದ್ದಾರೆ.

ನಟ ದರ್ಶನ್ ರೀತಿಯ ದೊಡ್ಡ ಸ್ಟಾರ್ ಅನ್ನು ಪೊಲೀಸರು ಸುಮ್ಮನೆ ಅರೆಸ್ಟ್ ಮಾಡಲು ಸಾಧ್ಯವಿಲ್ಲ. ಮೊದಲಿಗೆ ದರ್ಶನ್ ಈ ರೀತಿ ಮಾಡಿರಲು ಸಾಧ್ಯವಿಲ್ಲ ಅಂತ ನನಗೂ ಅನ್ನಿಸಿತ್ತು. ನನಗೂ ಪೊಲೀಸರು ಪರಿಚಯವಿದ್ದಾರೆ. ಸುಮ್ಮನೆ ಅಷ್ಟು ದೊಡ್ಡ ವ್ಯಕ್ತಿಯನ್ನು ಪೊಲೀಸರು ಕರೆದುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲ. ನನಗೆ ಆ ವಿಚಾರ ಒಂದು ರೀತಿಯ ಮೋಡ ಕವಿದ ವಾತಾವರಣವಾಗಿತ್ತು. ಏನು ಸತ್ಯ ಏನು ಸುಳ್ಳು ಎಂದು ತಿಳಿಯಲು ನ್ಯೂಸ್ ನೋಡುತ್ತಿದ್ದೆವು. ಒಂದಂತು ಸತ್ಯ. ಯಾರನ್ನ ಎಷ್ಟು ಇಷ್ಟ ಪಡುತ್ತೀರಿ..? ದ್ವೇಷ‌ ಮಾಡುತ್ತೀರಿ ಅನ್ನೋದು ಅವರವರ ವೈಯಕ್ತಿಕ ವಿಚಾರ. ಫೈಟ್ ಮಾಡ್ತೀವಿ, ಸ್ಪರ್ಧೆ ಇರುತ್ತದೆ. ಅದೆಲ್ಲವೂ ವೈಯಕ್ತಿಕವಾದದ್ದು.

ಆದರೆ ಆ ವ್ಯಕ್ತಿಗೆ ತೊಂದರೆಯಾಗ್ತಿದೆ ಎಂದರೆ ಖುಷಿ ಪಡುವ ವ್ಯಕ್ತಿ ನಾನಲ್ಲ. ನನಗೂ ನೋವಾಗಿದೆ. ನಮ್ಮ ಜೊತೆಗೆ ಮಾತನಾಡದಿದ್ದರೂ ಪರವಾಗಿಲ್ಲ, ಖುಷಿಯಾಗಿ ಓಡಾಡಿಕೊಂಡಿದ್ದರೆ ಸಾಕು ಅನ್ನಿಸುತ್ತೆ. ತೊಂದರೆ ಆದಾಗ ನನಗೂ ಅನ್ನಿಸಿದೆ ಯಾಕೆ ಬೇಕಿತ್ತು ಇದು ಅಂತ‌ ಎಂದು ಕಿಚ್ಚ ಸುದೀಪ್ ಬೇಸರ ಹೊರ ಹಾಕಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಅಂಬಿ-ವಿಷ್ಣು ಬಿಟ್ಟರೆ ಈ ಇಬ್ಬರ ಸ್ನೇಹವೇ ನೆಕ್ಸ್ಟ್ ಲೆವೆಲ್ ಗೆ ಇದ್ದದ್ದು. ಆದರೆ ಯಾವುದೋ ಕಾರಣಕ್ಕೆ ಆ ಸ್ನೇಹವೇ‌ ಮುರಿದು ಬಿದ್ದಿದೆ.

Share this post:

Related Posts

To Subscribe to our News Letter.

Translate »