ಗನ್ ಬ್ಯಾರಲ್ ನಿಂದ ಸಿಗರೇಟ್ ಹೊತ್ತಿಸಿ ಕೊಳ್ಳುವ ಯಶ್ ದೃಶ್ಯಕ್ಕೆ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದ್ದನ್ನು ಸ್ವಾಗತಿಸೋಣ. ಒಬ್ಬ ದೊಡ್ಡ * ಈ ರೀತಿಯಾಗೆಲ್ಲಾ ಮಾಡಿದರೆ ಅವರ ಅಭಿಮಾನಿಗಳು ಪ್ರಲೋಭನೆಗೆ ಒಳಗಾಗಬಹುದು ಎನ್ನುವುದು ಅವರ ಅಂಬೋಣ. ಅದೂ ನಿಜವೇ .!
ಆದರೆ ಈ ಸಾಮಾಜಿಕ ಸಂದೇಶಗಳಿಗಾಗಿ ಈ ಸಿನಿಮಾ ರಂಗದವರನ್ನೇ ಯಾಕೆ ಹಿಂಡುತ್ತಿದ್ದಾರೆ ಎನ್ನುವುದೇ ಪ್ರಶ್ನೆ… ಅದರಲ್ಲೂ ಧೂಮಪಾನದ ವಿಷಯದಲ್ಲಿ ಅತಾರ್ಕಿಕವಾಗಿ ಯೋಚಿಸಲಾಗುತ್ತದೆ.
ಸುಮ್ಮನೆ ಗಮನಿಸಿ!
ಒಂದು ಸಿನಿಮಾದಲ್ಲಿ ಮೂವರು ಕುಡಿದು ಸಿಗರೇಟು ಸೇದುತ್ತಾ ಹುಡುಗಿಯನ್ನು ಅತ್ಯಾಚಾರ ಮಾಡುತ್ತಾರೆ … ತೆರೆಮೇಲೆ ಈ ದೃಶ್ಯಾವಳಿಯ ಜತೆಗೆ ಧೂಮಪಾನ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಸಂದೇಶ ಮೂಡುತ್ತದೆ
ಹಾಗಾದರೆ ಅತ್ಯಾಚಾರ …?
ಇದರರ್ಥವೇನು ?
ಅತ್ಯಾಚಾರ ಮಾಡಬಹುದು ! ಆದರೆ ಧೂಮಪಾನ / ಮದ್ಯಪಾನ ಮಾಡಬಾರದು ಎಂದರ್ಥವೇ ? ಅಥವಾ ಧೂಮಪಾನ ಮದ್ಯಪಾನ ಮಾಡಿ ರೇಪ್ ಮಾಡಬಾರದು ಎಂದರ್ಥವೇ ?
ಮತ್ತೊಂದು ಸಿನಿಮಾದಲ್ಲಿ ಸಿಗರೇಟು ಸೇದುತ್ತಾ ವ್ಯಕ್ತಿಯೊಬ್ಬನನ್ನು ಕೊಲೆಗೈಯಲಾಗುತ್ತಿದೆ. ಪರದೆಯ ಮೇಲೆ ಮತ್ತದೇ ಸಂದೇಶ : ಧೂಮಪಾನ ಆರೋಗ್ಯಕ್ಕೆ ಹಾನಿಕರ.
ಹಾಗಾದರೆ ಕೊಲೆ ಮಾಡುವುದು …?
ಹಾಗೆಯೇ
ದೃಶ್ಯದ ಹಿಂದೆ ಬೀದಿ ನಾಯಿಯೊ ಹಸುವು ಹಾದು ಹೋದರೆ ಪ್ರಾಣಿ ದಯಾ ಸಂಘದವರು ಸ್ಪಷ್ಟೀಕರಣ, ದಾಖಲಾತಿ, ಮಾಲೀಕರ ಅನುಮತಿ ಪತ್ರ , ಚಿತ್ರೀಕರಣ ಸ್ಥಳದಲ್ಲಿದ್ದ ಪಶು ವೈದ್ಯರು ತುರ್ತು ಚಿಕಿತ್ಸಾ ವಾಹನ ಇತ್ಯಾದಿಗಳ ದಾಖಲೆ ಕೇಳುತ್ತಾರೆ ..
ಬೀದಿ ನಾಯಿ ಹಸು ಹಿಂದೆ ಹಾದು ಹೋದರೆ ಅವುಗಳಿಗೆ ಇಂತಹ ದಾಖಲೆಗಳನ್ನು ಒದಗಿಸುವುದಾದರೂ ಹೇಗೆ ..?
ಇಷ್ಟಕ್ಕೂ ದೂರದಲ್ಲೆಲ್ಲೋ ಕುಳಿತ ಪ್ರಾಣಿದಯಾ (?) ಸಂಘದವರು ಈ ಒಂದು ಪತ್ರಕ್ಕೆ ಅರ್ಧ ಲಕ್ಷದವರೆಗೆ ಖರ್ಚು ಮಾಡಿಸುತ್ತಾರೆ.
ಅವರ ಒಂದು ಪತ್ರಕ್ಕೆ ಅದ್ಯಾಕೆ ಅಷ್ಟೊಂದು ಶುಲ್ಕ ತೆಗೆದುಕೊಳ್ಳುತ್ತಾರೆ. …?
ಆ ಒಂದು ಪತ್ರ ಅದೇಗೆ ಪ್ರಾಣಿಗಳ ಹಿತ ಕಾಯುತ್ತದೆ ಎಂಬುದನ್ನು“ಹರಿಯಾಣ “ ವಾಸಿಗಳೇ ಹೇಳಬೇಕು!
ಇದರಿಂದ ಅಂತಹ ಹೆಚ್ಚೇನೂ ಉಪಕಾರ ಪ್ರಾಣಿಗಳಿಗೆ ಆಗುವುದಿಲ್ಲ.
ಬದಲಿಗೆ ಅಪಾಯವು ಹೆಚ್ಚಾಗುತ್ತದೆ.
ಚಿತ್ರೀಕರಣ ಸ್ಥಳದಲ್ಲಿ ಹಿಂದೆ ಮುಂದೆ ಬೀದಿ ನಾಯಿ ಕಂಡರೆ ಅದನ್ನು ಓಡಿಸಬೇಕಾಗುತ್ತದೆ
ಓಡಿಸಲು ಅಸ್ತ್ರ ಬಳಸಬೇಕಾಗುತ್ತೆ
ಕಲ್ಲು ಹೊಡೆಯಬೇಕಾಗುತ್ತದೆ ..
ಇಂತಹ ಸಂಗತಿಗಳಿಂದಾಗಿ ವಿನಾಕಾರಣ ಅವರೇ ಹಿಂಸೆಗೆ ಅನುವು ಮಾಡಿಕೊಟ್ಟಂತಾಯಿತು ಅಲ್ಲವೇ …?
