ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಅರ್ಜುನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಶ್ವರ್ಯಾ ಅರ್ಜುನ್ ತಮಿಳಿನ ನಟ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರನ್ನು ಮದುವೆಯಾಗಿದ್ದಾರೆ. ಜೂನ್ 10ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಟಿ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಮದಿವೆಯಲ್ಲಿ ಬ್ಯೂಟಿಫುಲ್ ಆಗಿ ಕಂಗೊಳಿಸಿರುವ ಐಶ್ವರ್ಯಾ ಅರ್ಜುನ್, ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟಿದ್ದಾರೆ. ಉಮಾಪತಿ ರಾಮಯ್ಯ ಅವರು ಪಂಚೆ ಶರ್ಟ್ ಶಲ್ಯ ಧರಿಸಿದ್ದರು. ಇವರು ಅಪ್ಪಟ ಸೌತ್ ಇಂಡಿಯನ್ ಜೋಡಿಯಾಗಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ನಟಿ ಮದುವೆಯ ಫೋಟೋಸ್ ಶೇರ್ ಮಾಡಿ 10.06.2024 ಎಂದಷ್ಟೇ ಬರೆದಿದ್ದಾರೆ.
ಇಷ್ಟೇ ಅಲ್ಲದೆ ಉಂಗುರು ಹುಡುಕುವ ಶಾಸ್ತ್ರದ ಫೋಟೋವನ್ನು ಕೂಡಾ ನಟಿ ಶೇರ್ ಮಾಡಿದ್ದಾರೆ. ತುಂಬಾ ಸಿಂಒಲ್ ಆಗಿದ್ದ ಡಿಸೈನ್ನಲ್ಲಿ ಅವರು ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅರ್ಜುನ್ ಸರ್ಜಾ ಕುಟುಂಬ ಸದ್ಯ ಮದುವೆಯ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಜೋಡಿಯ ಕ್ಯೂಟ್ ಫೋಟೋಸ್ ಎಲ್ಲೆಡೆ ವೈರಲ್ ಆಗುತ್ತಿವೆ.