Sandalwood Leading OnlineMedia

ಯಶಸ್ವಿಯಾದ ದ್ವಿತೀಯ `ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’: ಅದ್ಭುತ ಪ್ರತಿಭೆಗಳಿಗೆ ವೇದಿಕೆಯಾಯ್ತು ಅಪರೂಪದ ಸಮಾರಂಭ

 

ಬರೀ ದಕ್ಷಿಣದ ಬೆಂಗಳೂರು, ಮೈಸೂರಿಗಷ್ಟೇ ಸೀಮಿತವಾಗಿದ್ದ ಚಲನಚಿತ್ರಗಳಿಗೆ ಸಂಬ0ಧಿಸಿದ ಚಟುವಟಕೆಗಳು, ಈಗ ಉತ್ತರ ಕರ್ನಾಟಕಕ್ಕೂ ಪಸರಿಸಿದೆ. ಸತತ 2 ನೇ ಬಾರಿಗೆ ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಇದೇ ಡಿಸೆಂಬರ್ 8 ರಿಂದ 10ರವರೆಗೆ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಈ ಯಶಸ್ಸಿನ ಖ್ಯಾತಿ ನವಕರ್ನಾಟಕ ಚಲನಚಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎ.ಮುಮ್ಮಿಗಟ್ಟಿಮತ್ತು ತಂಡಕ್ಕೆ ಸಲ್ಲಬೇಕು. ಕೊರೊನಾದಿಂದ ನಲುಗಿ ಹೋಗಿದ್ದ ಚಿತ್ರರಂಗಕ್ಕೆ ಡಾ.ಎಂ.ಎ.ಮುಮ್ಮಿಗಟ್ಟಿ ಸಾರಥ್ಯದ ದ್ವಿತೀಯ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ -೨೦೨೨ ನವ ಉತ್ಸಾಹವನ್ನು ನೀಡಿವುದರ ಜೊತೆಗೆ, ಕರ್ನಾಟಕದ ಪ್ರತಿಭೆಗಳನ್ನು ಗುರತಿಸುವ ಗುರುತರವಾದ ಕೆಲಸವನ್ನು ಮಾಡಿದೆ.

 

 

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ಗೌರಿ” ಚಿತ್ರಕ್ಕೆ ಚಾಲನೆ

 

 

ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ನಟಿ ಭವ್ಯಾ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಸುನೀಲ ಪುರಾಣಿಕ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಎಮ್.ಎ.ಮುಮ್ಮಿಗಟ್ಟಿ, ಉದ್ಯಮಿ ವಿಜೇತ ಸೈಗಲ್, ಡಾ.ಕಲ್ಮೇಶ ಹಾವೇರಿಪೇಟ, ವಿಶ್ವನಾಥ ಪಲ್ಲೇದ್ ಸೇರಿದಂತೆ ಸಿನಿಮಾ ರಂಗದ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.  ಇನ್ನು, ಈ ಕಾರ್ಯಕ್ರಮ `ಚಿತ್ತಾರ’ ಪತ್ರಿಕೆಯ ಸಹಯೋಗದೊಂದಿಗೆ ನೆರವೇರಿತು.

 

 

  `Vijayanand’ Movie Review : A story worth telling, a movie worth watching

 

 

ಮಹಾಮಾರಿ ಕೊರೊನಾ ವೈರಸ್ ಕಾಟದಿಂದ ಕಳೆದ ವರ್ಷ ಅವಳಿನಗರದಲ್ಲಿ ಜರುಗಿದ ಪ್ರಥಮ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಯಶಸ್ವಿಯಾಗಿದ್ದರೂ ಸಹ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಡಿಮೆಯಾಗಿತ್ತು. ಆದರೆ ಈಗ ಆ ಭಯ ದೂರವಾಗಿ ಈ ಬಾರಿ ಚಲನಚಿತ್ರೋತ್ಸವಕ್ಕೆ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೂರದ ಬೆಂಗಳೂರಿನಲ್ಲೇ ನಡೆಯುವ ಇಂತಹ ಪ್ರದರ್ಶನಗಳು ಉತ್ತರ ಕರ್ನಾಟಕ ಭಾಗದಲ್ಲಿ ಇನ್ನು ಮುಂದೆ ಪ್ರತಿವರ್ಷ ಇಂತಹ ಪ್ರದರ್ಶನಗಳು ನಡೆಯಲಿವೆ, ಇದು ಒಳ್ಳೆಯ ಬೆಳವಣಿಗೆ, ಈ ಸಿನಿಮಾ ಹಬ್ಬವನ್ನು ಹುಬ್ಬಳ್ಳಿ – ಧಾರವಾಡ ಅವಳಿನಗರ ಸೇರಿದಂತೆ ಈ ಭಾಗದ ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಗುರುರಾಜ ಹೂಗಾರ, ಸದಸ್ಯರು, ನವಕರ್ನಾಟಕ ಚಲನಚಿತ್ರ ಅಕಾಡೆಮಿ, ಮಾಧ್ಯಮ ಸಲಹೆಗಾರ

 

 

ಸೆಟ್ಟೇರಿತು ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ

 

 

ಪ್ರಶಸ್ತಿ ಬಾಚಿಕೊಂಡ ‘ಮಾತಂಗಿ ದೀವಟಿಗೆ’ ಚಲನಚಿತ್ರ

ದೇಶಮಾನೆ ಕ್ರಿಯೇಷನ್ಸ್ ನಿರ್ಮಾಣದ ಡಾ. ಸಮತಾ ದೇಶಮಾನೆ ರಚಿಸಿದ ಕನ್ನಡದ ಮೊದಲ ಮಹಿಳಾ ದಲಿತ ಆತ್ಮಕಥೆ ಆಧರಿಸಿದ ನಿರ್ಮಿಸಿರುವ ಸಿನಿಮಾ ಮಾತಂಗಿ ದೀವಟಿಗೆ. ನವ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆಗೊಂಡು, ಈ ಚಿತ್ರಕ್ಕೆ ಸಾಹಿತ್ಯ ಬರೆದ ಡಾ.ಸಮತಾ ದೇಶಮಾನೆ ಅವರು ಅತ್ಯುತ್ತಮ ಸ್ಟೋರಿ ರೈಟರ್ ಪ್ರಶಸ್ತಿ ಪಡೆದುಕೊಂಡರು. ೧೩ ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಹಿತ ಇನ್ನೂ ಹಲವಾರು ರಾಜ್ಯ, ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಲನಚಿತ್ರ ಪ್ರದರ್ಶನಗೊಂಡು ಭೇಷ್ ಎನ್ನಿಸಿಕೊಂಡು ಅತ್ಯುತ್ತಮ ಚಲನಚಿತ್ರ ಎಂಬ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

 

 

ನಟ ದೇವರಾಜ್ ಅವರಿಂದ ಬಿಡುಗಡೆಯಾಯಿತು “ಪ್ರಜಾರಾಜ್ಯ”ಚಿತ್ರದ ಟೀಸರ್

‘ಮಾತ0ಗಿ ದೀವಟಿಗೆ’ ಆತ್ಮಕೃತಿಯಲ್ಲಿ ಕಲಬುರಗಿ ಮೂಲದ ಅವರ ಕುಟುಂಬ ಶಿಕ್ಷಣಕ್ಕಾಗಿ ಪಟ್ಟ ಕಷ್ಟ, ಪರಿಣಾಮವಾಗಿ ದೇಶಮಾನೆ ಕುಟುಂಬದ ಮಕ್ಕಳು ಇಂದು ಮಾಡಿರುವ ಸಾಧನೆ ಇವುಗಳನ್ನು ಕಟ್ಟಿಕೊಡಲಾಗಿದೆ. ಜಿ.ವೈ ಪದ್ಮ ನಾಗರಾಜು ನಿರ್ಮಾಣದ ಚಲನಚಿತ್ರಕ್ಕೆ ಮಂಜು ಪಾಂಡುಪುರ ನಿರ್ದೇಶಿಸಿದ್ದಾರೆ. ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ನೀಡಿದ್ದು, ಸಂಕಲನ ಮನೋಜ್, ಚಿತ್ರಕಥೆ -ಸಂಭಾಷಣೆ ಜೆ.ಎಂ ಪ್ರಹ್ಲಾದ, ಈ ದಲಿತ ಆತ್ಮಕಥೆಯ ಪ್ರದಾನ ಪಾತ್ರದಲ್ಲಿ ನಾಟಕಕಾರ ಡಾ.ಡಿ.ಎಸ್ ಚೌಗಲೆ, ರಂಗಭೂಮಿ, ಚಲನಚಿತ್ರ ಕಲಾವಿದೆ ಹನುಮಕ್ಕ ಮರಿಯಮ್ಮನಹಳ್ಳಿ, ಶ್ರೀನಿವಾಸ ಪ್ರಭು, ಮುರಳೀಧರ ಕೌಶಿಕ್, ಪ್ರಜ್ಞಾಸಿಂಗ್, ಸುರೇಶ, ಲಕ್ಷ್ಮೀ ಶ್ರೀನಿವಾಸ, ಕಲಬುರಗಿಯ ಪ್ರಭಾಕರ್ ಜೋಶಿ, ಮಠಪತಿ, ರೇಖಾ ಪಾಟೀಲ್, ವಿಜಯಲಕ್ಷ್ಮೀ ಪಾಟೀಲ ಇನ್ನಿತರ ಕಲಾವಿದರು ಈ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.

 

 

   ಸಾಯಿಧರಮ್ ತೇಜ್ ಅಭಿನಯದ ‘ವಿರೂಪಾಕ್ಷ’ ಚಿತ್ರದ ಟೈಟಲ್​ ಗ್ಲಿಂಪ್ಸ್​ ಬಿಡುಗಡೆ

 

ಪ್ರತಿಭೆಗಳಿಗೆ ವೇದಿಕೆಯಾದ ಚಲನಚಿತ್ರೋತ್ಸವ.

ಈ ಬಾರಿ ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಸಾಕಷ್ಟು ಪ್ರತಿಭಾವಂತರಿಗೆ, ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. `ರಾಜಿ’ ಕನ್ನಡ ಚಲನಚಿತ್ರಕ್ಕೆ ಹಿರಿಯ ನಟ ರಾಘವೇಂದ್ರ ರಾಜಕುಮಾರ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, `ಮನ್ ತ್ರೀ ಹ್ಯಾಂಡ್ನಮ್ ಸೋಲ್ಡ್’ ಚಿಕ್ಕಮಕ್ಕಳ ಚಲನಚಿತ್ರಕ್ಕೆ ಅಶೋಕ ತತ್ವಮಸಿ ಅವರಿಗೆ ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ, `ನಾನ್ಯಾರು?’ ಚಲನಚಿತ್ರಕ್ಕೆ ಕುಮಾರ ಬೇಂದ್ರೆ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, `ಮನಸ್ಸುನೊಂದು’ (ದಿ ನೋಬಲ್ ಮ್ಯಾನ್) ತೆಲುಗು ಭಾಷೆಯ ಚಲನಚಿತ್ರಕ್ಕೆ ಶ್ರೀ ವೀರಪ್ರತಾಪ ಕೊರಕೊಂಡ ಹಮ್ಮಿರಗೋಪಾಲ ಅವರಿಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, `ತಲೆದಂಡ’ ಚಲನಚಿತ್ರಕ್ಕೆ ಡಾ.ಹೇಮಾಮಾಲಿನಿ ಕೃಪಾಕರ ಅವರಿಗೆ ಅತ್ಯುತ್ತಮ ಪರಿಸರ ಪ್ರಶಸ್ತಿ, `ಚಾಂಪಿಯನ್’ ಚಲನಚಿತ್ರಕ್ಕೆ ಸಚಿನ್ ಧನಫಾಲ ಅವರಿಗೆ ಚೊಚ್ಚಲ ಚಲನಚಿತ್ರ ಪ್ರಶಸ್ತಿ, `ಕಲಿವೀರ’ ಚಿತ್ರಕ್ಕೆ ವಿಕ್ರಂ&ಟೀಮ್‌ಗೆ ಬೆಸ್ಟ್ ಆ್ಯಕ್ಷನ್ ಫಿಲ್ಮ್ ಪ್ರಶಸ್ತಿ, ಇದೇ ಚಲನಚಿತ್ರದ ನಾಯಕ ನಟ ಏಕಲವ್ಯ ಅವರಿಗೆ ಬೆಸ್ಟ್ ಹಿರೋ ಅವಾರ್ಡ್, `ಕಾಕ್‌ಟೇಲ್’ ಚಿತ್ರದ ನಾಯಕ ನಟ ಎರೇನ್‌ಕೇಶವ ಅವರಿಗೆ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ, `ಮಿಸ್ ನಂದಿನಿ’ ಚನಚಿತ್ರದ ನಟನೆಗೆ ಪ್ರಿಯಾಂಕ ಉಪೇಂದ್ರ ಅವರಿಗೆ ಅತ್ಯುತ್ತಮ ಚಲನಚಿತ್ರ ನಟಿ ಪ್ರಶಸ್ತಿ, `ಕೆಜಿಎಫ್ -೨’ ಚಿತ್ರದ ಸಂಭಾಷಣೆಗಾರ ಕಿನ್ನಾಳ ರಾಜ್ ಅವರಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ, `ಹುಬ್ಬಳ್ಳಿ ಡಾಬಾ’ ಚಿತ್ರದ ಪೂಜಾ ಗಾಂಧಿ ಅವರಿಗೆ ಉತ್ತಮ ಕಳನಾಯಕಿ ಅವಾರ್ಡ್, `ಸಾವಿತ್ರಿಬಾಯಿ ಪುಲೆ’ ಚಿತ್ರದ ನಟನೆಗೆ ಹಿರಿಯ ನಟಿ ತಾರಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ, `ಹಿಟ್ಲರ್’ ಚಲನಚಿತ್ರದ ಶಶಿಕುಮಾರ್ ರಾಮನಾಥಪುರ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, `ಚಾಣಾಕ್ಷ’ ಚಲನಚಿತ್ರದ ನಟನೆಗೆ ಅಭಯ ವೀರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ, `ಉಗ್ರವತಾರ’ ಚಲನಚಿತ್ರದಲ್ಲಿನ ನಟನೆಗೆ ಗಿರಿಜಾ ಪರಶುರಾಮ ಸಿದ್ದಿಗೆ ಬೆಸ್ಟ್ ಸಿಂಗರ್ ಅವಾರ್ಡ್,  `ಕ್ಯಾಂಪಸ್ ಕ್ರಾಂತಿ’ ಚಲನಚಿತ್ರಕ್ಕೆ ಸಂತೋಷ ಕುಮಾರ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, `ಮಾತಂಗಿ ದೀವಟಿಗೆ’ ಚಲನಚಿತ್ರಕ್ಕೆ ಪ್ರೋ . ಸಮತಾ ದೇಶಮಾನೆಗೆ ಬೆಸ್ಟ್ ಸ್ಟೋರಿ ರೈಟರ್ ಅವಾರ್ಡ್, `ಸಯ್ಯೋತಾ’ ಚಲನಚಿತ್ರಕ್ಕೆ ಶಿವಕುಮಾರ್ ಅರಾಧ್ಯಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ. `ಡೊಳ್ಳು’ ಚಿತ್ರಕ್ಕೆ ಸಾಗರ ಪುರಾಣಿಕಗೆ ಅತ್ಯುತ್ತಮ ಜಾನಪದ ಚಲನಚಿತ್ರ ಪ್ರಶಸ್ತಿ, `ಪ್ರೇಮನ್’ ಚಲನಚಿತ್ರದ ರಾಧಾಕೃಷ್ಣನ್ ಬಸುರಗೆ ಬೆಸ್ಟ್ ಮ್ಯೂಸಿಕ್ ಅವಾರ್ಡ್, `ಮಾನ’ ಚಲನಚಿತ್ರಕ್ಕೆ ಹಿರಿಯ ನಟಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪ್ರಧಾನಮಾಡಲಾಗಿದೆ.

 

 

  ಕಲರ್ ಫುಲ್ ಕರುನಾಡ ಸಂಭ್ರಮಕ್ಕೆ ತೆರೆ- ಗೆಲುವು ಕನ್ನಡ ಗೆಳೆಯರ ಬಳಗದಿಂದ ಚಿರು ಸರ್ಜಾಗೆ ಮರಣೋತ್ತರ ‘ಕನ್ನಡ‌ ಕಲಾ ಭೂಷಣ’ ಪ್ರಶಸ್ತಿ

 

 

Share this post:

Related Posts

To Subscribe to our News Letter.

Translate »