ಯುವನಿವರ್ಸಲ್ ಸ್ಟಾರ್, ಉಳಗನಾಗನ್ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್ -2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಲವು ಶೇಡ್ ನಲ್ಲಿ ಕಮಲ್ ಕಮಾಲ್ ಮಾಡಿದ್ದು, ಶಂಕರ್ ಟೇಕಿಂಗ್ ಮತ್ತೊಮ್ಮೆ ಒಳ್ಳೆ ಮಾರ್ಕ್ಸ್ ಸಿಗಲಿದೆ. 1996 ರ ಬ್ಲಾಕ್‌ಬಸ್ಟರ್ “ಇಂಡಿಯನ್” ಸಿನಿಮಾದ ಮುಂದುವರೆದ ಭಾಗವಾಗಿರುವ “ಇಂಡಿಯನ್ 2” ನಲ್ಲಿ ಸೇನಾಪತಿಯಾಗಿ ಕಮಲ್ ಹಾಸನ್ ಮರಳಿದ್ದಾರೆ.ರಾಷ್ಟ್ರವನ್ನು ಕಾಡುತ್ತಿರುವ ವ್ಯವಸ್ಥಿತ ಭ್ರಷ್ಟಾಚಾರ, ನಿರುದ್ಯೋಗ, ಸಮಾಜವನ್ನು ಪೀಡಿಸುವ ಅಭಿವೃದ್ಧಿಯ ಕೊರತೆಯ ಸಮಸ್ಯೆಗಳ ವಿರುದ್ಧ ಕಮಲ್ ಹಾಸನ್ ಸೇನಾಪತಿಯಾಗಿ ಸಮರ ಸಾರಿದ್ದಾರೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್ ಜೊತೆಗೆ ದೇಶಭಕ್ತಿಯ ಕಥೆ ಹೇಳುವ ಇಂಡಿಯನ್ ಸೀಕ್ವೆಲ್ ನಲ್ಲಿ ದೊಡ್ಡ ತಾರಾಬಳಗವೇ ಇದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.
‘ಚೌಕಿದಾರ್’ನಿಗೆ ಸಿಕ್ಕಳು ಚೌಕಿದಾರಿ! ಪೃಥ್ವಿಗೆ ಧನ್ಯ ಜೋಡಿ
ಕಮಲ್ ಹಾಸನ್ ಜೊತೆಗೆ ಸಿದ್ದಾರ್ಥ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಜಯರಾಮ್, ಬ್ರಹ್ಮಾನಂದಂ, ಬಾಬಿ ಸಿಂಹ, ಸಮುದ್ರಕನಿ ಮತ್ತು ನೆಡುಮುಡಿ ವೇಣು ಹಲವರು ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಿಸಿರುವ ಇಂಡಿಯನ್ 2 ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್ ಕೂಡ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.