Sandalwood Leading OnlineMedia

ಮಾಡದ ತಪ್ಪಿಗೆ ಜೈಲಿನಲ್ಲಿದ್ದೇನೆ, ಸ್ನೇಹಿತ ರಾಕೇಶ್‌ ಬಳಿ ಸೋನು ಗೌಡ ಕಣ್ಣೀರು

ಬೆಂಗಳೂರು: ಬಾಲಕಿ ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿರುವ ಸೋನು ಗೌಡ ಅವರನ್ನು ಸ್ನೇಹಿತ ನಟ ರಾಕೇಶ್ ಅಡಿಗ ಅವರು ಭೇಟಿಯಾಗಿ, ನೋವಿನಲ್ಲಿರುವ ಸ್ನೇಹಿತೆಗೆ ದೈರ್ಯ ತುಂಬಿದ್ದಾರೆ.ನಂತರ ಮಾಧ್ಯಮದವರ ಜತೆ ಮಾತನಾಡಿದ ರಾಕೇಶ್ ಅವರು,  ಸೋನು ತುಂಬಾ ನೋವಿನಲ್ಲಿದ್ದಾಳೆ. ಅವಳ ಜತೆ ಮಾತನಾಡಿ ದೈರ್ಯತುಂಬಿದ್ದೇನೆ. ‘ಮಾಡದ ತಪ್ಪಿಗೆ ಜೈಲಿನಲ್ಲಿದ್ದೇನೆ. ನಾನು ಮಾಡಿದ ತಪ್ಪೇನು ಎಂದು ಗೊತ್ತಾಗ್ತಿಲ್ಲ’ ಎಂದು ಸೋನು ಕಣ್ಣೀರು ಹಾಕಿದಳು.

ಈ  ಪ್ರಕರಣ ಇಷ್ಟೊಂದು ಗಂಭೀರವಾಗುತ್ತದೆ ಎಂದು ತಿಳಿದಿರಲಿಲ್ಲ. ಇದರಲ್ಲಿ ಸೋನುದು ಏನು ತಪ್ಪಿಲ್ಲ. ಯಾಕೆಂದರೆ ಅವಳು ತನ್ನ ವಿಡಿಯೋದಲ್ಲಿ ಬಾಲಕಿ ಎಲ್ಲ ವಿಚಾರವನ್ನು ಹಂಚಿಕೊಂಡುತ್ತಲೇ ಬಂದಿದ್ದಾಳೆ. ಇನ್ನೂ ಬಾಲಕಿಯ ಪೋಷಕರನ್ನು ಭೇಟಿಯಾದೆ. ಅವರು ತುಂಬಾನೇ ಪಾಸಿಟಿವ್ ಆಗಿಯೇ ಇದ್ದಾರೆ.  ದುಡ್ಡಿನ ವ್ಯವಹಾರದ ಬಗ್ಗೆ ಬಾಲಕಿಯ ಪೋಷಕರಲ್ಲಿ ಕೇಳಿದೆ. ಅವರು ನಮ್ಮ ಹಾಗೂ ಸೋನು ಮಧ್ಯೆ ಯಾವುದೇ ದುಡ್ಡಿನ ವ್ಯವಹಾರ ನಡೆದಿಲ್ಲ. ಮಾಧ್ಯಮಗಳು ಪ್ರಶ್ನಿಸುವಾಗ ಭಯದಲ್ಲಿ ಆ ರೀತಿ ಹೇಳಿದ್ದೇವೆ ಎಂದರು.

ಮಗು ಅಕ್ಕನೇ ಬೇಕು ಅಂತಾ ಹೇಳುತ್ತಿದ್ದಾಳೆ. ಸೋನು ಹೊರಗಡೆ ಬಂದ್ಮೇಲೆ ಮಗು ಅಕ್ಕನೇ ಬೇಕು ಅಂತಾ ಕೇಳಿದ್ರೆ ಅವಳ ಜತೆನೆ ಬಿಟ್ಟು ಹೋಗುತ್ತೇವೆ ಎಂದು ಪೋಷಕರು ನನ್ನ ಬಳಿ ಹೇಳಿಕೊಂಡರು.ಬಾಲಕಿಯ ವಿಚಾರದ ಬಗ್ಗೆ ಅಮ್ಮನಿಗೆ , ಪೋಷಕರಿಗೆ ಹಾಗೂ ಕುಟುಂಬದವರಿಗೆ ಯಾವುದೇ ಸಮಸ್ಯೆಯಿಲ್ಲ. ಇಲ್ಲಿ ಸಮಸ್ಯೆ ಇರುವುದು ಮೂರನೇ ಪಾರ್ಟಿಯವರಿಗೆ ಅವರು ದೂರನ್ನು ನೀಡಿರುವುದು. ನನಗೆ ಮಕ್ಕಳ ರಕ್ಷಣೆ ಬಗ್ಗೆ ತೆಗೆದುಕೊಂಡಿರುವ ಕಾನೂನಿನ ಬಗ್ಗೆ ತುಂಬಾನೇ ಗೌರವಿದೆ ಎಂದು ಪ್ರತಿಕ್ರಿಯಿಸಿದರು.

Share this post:

Related Posts

To Subscribe to our News Letter.

Translate »