Sandalwood Leading OnlineMedia

ವಿಭಿನ್ನ ಶೀರ್ಷಿಕೆಯ “ಇಡ್ಲಿ ‌ವಡೆ ಸಾಂಬರ್” ಚಿತ್ರಕ್ಕೆ ಚಾಲನೆ

“ಇಡ್ಲಿ ವಡೆ ಸಾಂಬರ್” ದಕ್ಷಿಣ ಭಾರತೀಯರ ಅಚ್ಚುಮೆಚ್ಚಿನ ತಿನಿಸು. ಈಗ ಇದೇ ಶೀರ್ಷಿಕೆಯಲ್ಲಿ ಚಿತ್ರವೊಂದು ಬರುತ್ತಿದೆ. ಇತ್ತೀಚಿಗೆ “ಇಡ್ಲಿ ವಡೆ ಸಾಂಬರ್” ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿಪುರದ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಆರಂಭ ಫಲಕ ತೋರಿದರು. ಅನಂತಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಫ್ಲವರ್ ನಾಗರಾಜ್ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರತಂಡದ ಸದಸ್ಯರು ಹಾಗೂ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
 
 
 
ತೆಲುಗಿನ “ವೀಡಾ” ಚಿತ್ರದ ಖ್ಯಾತಿಯ ಸುಧೀರ್ ಈ ಚಿತ್ರದ ನಾಯಕರಾಗಿದ್ದು, ಇವರೊಂದಿಗೆ ರಾಜಾರ್ಜುನ್ ಹಾಗೂ ಗಿಚ್ಚಿ ಗಿಲಿ ಗಿಲಿ ಪ್ರಶಾಂತ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪರ್ಣ‌ ಮಲ್ಲಿಕ್ ಹಾಗೂ ಚಂದನ ಜಾನಕಿ ಈ ಚಿತ್ರದ ನಾಯಕಿಯರು. ರಾಜಾ ನಾಯಕ್,‌ ಅಶೋಕ್ ರಾಜ್, ಜಯಪಾಲ್ ತಾರಾಬಳಗದಲ್ಲಿದ್ದಾರೆ.ರಾಜಾರ್ಜುನ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಆರಂಭ “ಇಡ್ಲಿ ವಡೆ ಸಾಂಬರ್” ಮೂಲಕ ಆರಂಭವಾಗುತ್ತದೆ. ಗೋವಾ ತನಕ ಜರ್ನಿ ಮುಂದುವರೆಯುತ್ತದೆ. ಎಂ.ಜಿ.ಸ್ಟುಡಿಯೋ ಮತ್ತು ಹೇಮಲತ.ಬಿ ಈ ಚಿತ್ರದ ನಿರ್ಮಾಪಕರು. ಮಹೇಶ್ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್. ಧನ್ಪಾಲ್ ಛಾಯಾಗ್ರಹಣ, ಆಲೆನ್ ಕ್ಲಾರೆನ್ಸ್ ಕ್ರಾಸ್ತಾ ಸಂಗೀತ ನಿರ್ದೇಶನ ಹಾಗೂ ಅರವಿಂದ್ ರಾಜ್ ಮತ್ತು ಶ್ರೀಜವಳಿ ಅವರ ಸಂಕಲನ ಈ ಚಿತ್ರಕ್ಕಿದೆ.
 

Share this post:

Related Posts

To Subscribe to our News Letter.

Translate »