ಬೆಂಗಳೂರು: ಅಭಿಮಾನಿಗಳು ಕಾಯುತ್ತಿದ್ದಂತ ಬಹುನಿರೀಕ್ಷಿತ ಫಸ್ಟ್ ಲಾಂಚ್ ಆಗಿದೆ. ಫಸ್ಟ್ ಲುಕ್ ವಿಭಿನ್ನವಾಗಿದ್ದು, ಉಪೇಂದ್ರ ಮತ್ತೆ ತಲೆಗೆ ಹುಳ ಬಿಟ್ಟಿದ್ದಾರೆ. ಇಂದು ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ದಿಗ್ಗಜರು ಭಾಗಿಯಾಗಿದ್ದರು.
ಈ ವೇಳೆ ಮೊದಲು ಮಾತನಾಡಿದ ನಿರ್ಮಾಪಕ ಶ್ರೀಕಾಂತ್, ನಾನು ಶಿವಣ್ಣನ ಅಭಿಮಾನಿಯಾಗಿ ಓಂ ಸಿನಿಮಾ ನೋಡಿದ್ದೆ. ಅದೇ ಸಿನಿಮಾ ನೋಡಿ ಉಪೇಂದ್ರ ಅವರ ಜೊತೆಗೆ ಒಂದು ಸಿನಿಮಾ ಮಾಡಿದ್ದೀವಿ ಅಂದರೆ ಅದು ಶಿವಣ್ಣ ಮತ್ತು ಗೀತಕ್ಕ ಆಶೀರ್ವಾದ ಎಂದರು. ಇದೇ ವೇಳೆ ಅಲ್ಲು ಅರವಿಂದ್ ಅವರ ಸರಳತೆಯನ್ನು ಹೊಗಳಿದ್ದಾರೆ.
ವೇಣು ಲಹರಿ ಮಾತನಾಡಿ, ರಾತ್ರಿ, ಹಗಲು ತುಂಬಾ ಕಷ್ಟಪಟ್ಟಿದ್ದಾರೆ. ಸಿನಿಮಾ ಎಂದರೆ ಬರೀ ದುಡ್ಡು ಖರ್ಚು ಮಾಡುವುದಲ್ಲ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಶಿವಣ್ಣ ಸಾಹೇಬ್ರೇ ನೀವೇ ಚಿನ್ನ. ಬಂಗಾರದಂತ ಮನುಷ್ಯರು ನೀವೂ ಎಂದು ಶಿವಣ್ಣ ಅವರನ್ನು ಹೊಗಳಿದ್ದಾರೆ.
ರೀಷ್ಮಾ ನಾಣಯ್ಯ ಮಾತನಾಡಿ, ಯುಐ ನನ್ನ ಕರಿಯರ್ ನಲ್ಲಿ ಒಂದು ಸ್ಪೆಷಲ್ ಸಿನಿಮಾ. ಉಪೇಂದ್ರ ಸರ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಅವರ ಡೈರೆಕ್ಷನ್ ಸಿನಿಮಾಗಾಗಿ ಸಾಕಷ್ಟು ಜನ ಕಾಯ್ತಾ ಇದ್ದರು. ಈಗ ನಾನು ಕೂಡ ಯುಐ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಬೇಕೆಂದು ಕಾಯುತ್ತಾ ಇದ್ದೀನಿ ಎಂದಿದ್ದಾರೆ.
ಕನ್ನಡದಲ್ಲಿಯೇ ಎಲ್ಲರಿಗೂ ನಮಸ್ಕಾರ ಹೇಳಿದ ಅಲ್ಲು ಅರವಿಂದ್, ಉಪೇಂದ್ರ ಅವರ ಕುಟುಂಬದಲ್ಲಿ ಒಬ್ಬರಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೀನಿ. ಈ ಸಿನಿಮಾದಲ್ಲಿ ಯೂನಿವರ್ಸ್ ಇಂಟೆಲಿಜೆನ್ಸ್ ಇದೆ ಅಂತ ಅನ್ನಿಸ್ತಾ ಇದೆ ಎಂಬ ಕ್ಲೂ ಬಿಟ್ಟು ಕೊಟ್ಟಿದ್ದಾರೆ.
ಪ್ರಿಯಾಂಕ ಉಪೇಂದ್ರ ಮಾತನಾಡಿ, ನಾನು 24 ವರ್ಷದಿಂದ UI ಒಳಗೆ ಇದ್ದೀನಿ. ತುಂಬಾ ಖುಷಿ ಆಗ್ತಾ ಇದೆ. ಕ್ರಿಯೇಟಿವ್ ಎನರ್ಜಿ ಇದೆ ಅವರಲ್ಲಿ. ಒಬ್ಬ ಡೈರೆಕ್ಟರ್ ಆಗಿ ಅವರು ಸಖತ್ ಎಂಜಾಯ್ ಮಾಡುತ್ತಾ ಇದ್ದರು. ನಂಗೆ ತುಂಬಾ ಭಯ ಆಗುತ್ತಾ ಇತ್ತು. ಆ ಟೀಸರ್ ನೋಡಿ. ಬಿಕಾಸ್ ತುಂಬಾ ನಿರೀಕ್ಷೆ ಇತ್ತು. ಈಗ ಫಸ್ಟ್ ಲುಕ್ ಬಿಟ್ಟಿದ್ದಾರೆ. ಖುಷಿ ಆಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.