ಕನ್ನಡ ಚಿತ್ರರಂಗದ ಅದ್ಭುತ ನಟಿ ಪ್ರೇಮಾ ಹಲವು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಜಿ ಕನ್ನಡದ ಮಹಾನಟಿ ರಿಯಾಲಿಟಿ ಶೋ ತೀರ್ಪುಗಾರ್ತಿ ಆಗಿದ್ದಾರೆ. ಪ್ರೇಮಾ ಅವರು ಇಂಡಸ್ಟ್ರಿಯಲ್ಲಿ ಹೆಚ್ಚು ಕಾಣಿಸಿಕೊಳ್ಳದೆ ಇದ್ದಾಗ ಅವರ ಆರೋಗ್ಯದ ಬಗ್ಗೆ ಹಲವು ವದಂತಿಗಳು ಹರಿದಾಡಿದ್ದವು. ಅದಕ್ಕೆಲ್ಲಾ ಉತ್ತರ ನೀಡಿದ್ದಾರೆ ನಟಿ ಪ್ರೇಮಾ.
ಇದನ್ನೂ ಓದಿ :ದಪ್ಪ ಆಗಿದ್ದೀನಿ ಅಂದ್ರೆ ಯಾರದ್ದೋ ಜೊತೆಗೆ ಮಜಾ ಮಾಡ್ತಿದ್ದೀನಿ ಅಂದಿದ್ರು : ಜನರ ಮಾತಿಗೆ ನೀತೂ ಕಣ್ಣೀರು
ನನ್ನ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳು ಹೊರ ಬಂತು. ನಾನು ನಿರೀಕ್ಷೆ ಮಾಡಿದ್ದು ನನಗೆ ಸಿಕ್ಕಿಲ್ಲ ಅಂದಾಗ ನಾನು ಡಿಪ್ರೆಶನ್ಗೆ ಜಾರಿದೆ ಅನ್ಸುತ್ತೆ. ಎಲ್ಲಾ ಹೆಣ್ಣು ಮಕ್ಕಳಿಗೂ ಹಾಗೆ ಆಗುತ್ತದೆ. ನನಗೆ ಅಬಾರ್ಷನ್ ಆಯ್ತು ಆಸ್ಪತ್ರೆಯಲ್ಲಿದ್ದೆ ಇದೇ ಕಾರಣ ಆಯ್ತು ನಾನು ಡಿಪ್ರೆಶನ್ಗೆ ಜಾರಲು.
ಇದನ್ನೂ ಓದಿ:ದಪ್ಪ ಆಗಿದ್ದೀನಿ ಅಂದ್ರೆ ಯಾರದ್ದೋ ಜೊತೆಗೆ ಮಜಾ ಮಾಡ್ತಿದ್ದೀನಿ ಅಂದಿದ್ರು : ಜನರ ಮಾತಿಗೆ ನೀತೂ ಕಣ್ಣೀರು
ಮಗಳು ಕಳೆದುಕೊಂಡೆ ಅನ್ನೋ ನೋವು ಇತ್ತು ಸೆಂಟಿಮೆಂಟ್ ಅನ್ನೋದು ಎಲ್ಲರಿಗೂ ಇರುತ್ತದೆ ಅದಕ್ಕೆ ಕೊರಗಿ ಕೊರಗಿ ನಾನು ಡಿಪ್ರೆಶನ್ಗೆ ಜಾರಿದೆ.ಪ್ರೇಮಾಳಿಗೆ ಕ್ಯಾನ್ಸರ್ ಎಂದು ಹಬ್ಬಿಸಿದ್ದರು …ತಂದೆ ತಾಯಿ ದೇವರ ಆಶೀರ್ವಾದಿಂದ ನಾನು ಬೇಗ ಅದರಿಂದ ಹೊರ ಬಂದಿರುವೆ.
ಇದನ್ನೂ ಓದಿ :ದ್ವಾರಕೀಶ್ ಬಯಸಿದಂತೆ ಬಂದಿದೆ ಸಾವು..!
25 ವರ್ಷಗಳಿಂದ ವೈದ್ಯರು ಪರಿಚಯ ಇದ್ದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಂಡೆ. ಮನೆಯಲ್ಲಿದ್ದರೆ ಗುಣ ಆಗುವುದಿಲ್ಲ ಅನ್ನೋ ಕಾರಣಕ್ಕೆ ಹೊರ ಬರಲು ಬಂದೆ ಹೀಗಾಗಿ ಹೊರಗೆ ಕಾಣಿಸಿಕೊಳ್ಳಲು ಶುರು ಮಾಡಿದೆ’ ಎಂದು ಪ್ರೇಮಾ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ :ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದ ಸೆಲೆಬ್ರಿಟಿಗಳು..
ನನಗೆ ಧ್ಯಾನ ತುಂಬಾ ಸಹಾಯ ಮಾಡಿತ್ತು. ನನ್ನ ಸ್ನೇಹಿತರು Osho ಸಂಸ್ಥೆಗೆ ಕರೆದುಕೊಂಡು ಹೋದರು ಆ ಸಮಯದಲ್ಲಿ ನಾನು ಆಶ್ರಮ ಸೇರಿಕೊಂಡೆ ಎಂದು ಅನೇಕರು ಹೇಳಲು ಶುರು ಮಾಡಿದ್ದರು. ನಾಲ್ಕು ದಿನ ಕ್ಯಾಂಪ್ ಮುಗಿಸಿಕೊಂಡು ಬಂದೆ ಈಗ ಮನೆಯಲ್ಲಿ ಯೋಗ ಮಾಡುವೆ ಎಂದು ಪ್ರೇಮಾ ಹೇಳಿದ್ದಾರೆ.