ಜೀ ಕನ್ನ ಡದಲ್ಲಿ ಪ್ರಸಾರವಾಗುತ್ತಿದ್ದ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ವೈಮನಸ್ಸು ಉಂಟಾದ ಕಾರಣಕ್ಕೆ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ರನ್ನು ತಂಡದಿಂದ ಕೈ ಬಿಡಲಾಗಿದೆ. ಈ ಮಧ್ಯೆ ಆರ್ಯವರ್ಧನ್ ಪಾತ್ರಕ್ಕೆ ಹೊಸ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ನಿರ್ದೇಶಕ ಅನೂಪ್ ಭಂಡಾರಿ ಅವರಿಗೂ ಆಫರ್ ಹೋಗಿತ್ತು ಎನ್ನಲಾಗಿತ್ತು. ಈ ವಿಚಾರದ ಬಗ್ಗೆ ಅನೂಪ್ ಭಂಡಾರಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
ವಿಭಿನ್ನ ಪ್ರೇಮಕಥೆ ಇಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ಮೊದ ಮೊದಲು ಟಿಆರ್ ಪಿ ರೇಟ್ ನಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಕುಸಿತ ಕಂಡಿತ್ತು. ಇದಕ್ಕೆ ನಟ ಅನಿರುದ್ಧ್ ಕಾರಣ ಎಂದು ಧಾರಾವಾಹಿ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್ ದೂರು ನೀಡಿದ್ದರು.