ಶಿವಮೊಗ್ಗ ಲೋಕಸಭಾ ಕಣದಲ್ಲಿ ಬಿಸಿಲಿನ ನಡುವೆಯೂ ಭರ್ಜರಿ ಪ್ರಚಾರ ನಡೆಯುತ್ತಿದೆ. ಅದರಲ್ಲೂ ಪತ್ನಿಯನ್ನ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಂತೆ ಇರುವ ಡಾ.ಶಿವರಾಜ್ ಕುಮಾರ್ ಹಗಲಿರುಳು ಎನ್ನದೇ ಪತ್ನಿಯ ಪರ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ನಿನ್ನೆಯಷ್ಟೇ ರಾಹುಲ್ ಗಾಂಧಿ ಕೂಡ ಬಂದು ಗೀತಕ್ಕ ಪರವಾಗಿ ಪ್ರಚಾರ ಮಾಡಿ ಹೋಗಿದ್ದಾರೆ.
ಇದನ್ನೂ ಓದಿ :ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಗೋವಾದಲ್ಲಿ ಮೋಜಿನ ಪ್ರವಾಸ ಮಾಡಿದ್ದಾರೆ
ಶಿವಮೊಗ್ಗದಲ್ಲಿ ನಡೆದ ಬೃಹತ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದರು. ಕಾಂಗ್ರೆಸ್ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ , ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ದುನಿಯಾ ವಿಜಯ್ ಕೂಡ ಇದ್ದರು. ಈ ಸಮಯದಲ್ಲಿ ಮಾತನಾಡಿದ ಶಿವಣ್ಣ, ನಾನು ರಾಹುಲ್ ಗಾಂಧಿ ಅವರ ಮನುಷ್ಯತ್ವಕ್ಕೆ ಅಭಿಮಾನಿ ಎಂದರು. ಅವರ ದೈಹಿಕ ಸಾಮರ್ಥ್ಯ ನೋಡಿದರೆ ಖುಷಿ ಎನ್ನಿಸುತ್ತದೆ.
ಇದನ್ನೂ ಓದಿ :‘ಅರ್ಜುನ’ನ ಸಮಾಧಿಗೆ ಯಾರು ದಿಕ್ಕು ದೆಸೆ ಇಲ್ಲ : ಅರ್ಜುನನ ಆಸರೆಗೆ ‘ಡಿ’ ಬಾಸ್ ಮನವಿ
ಏಕೆಂದರೆ ದೇಶದ ನಾಯಕರಾದವರು ಮೊದಲು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೈಹಿಕ ಸದೃಢತೆ ಕಾಪಾಡಿಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನು ನೋಡಿದಾಗ ದೈಹಿಕವಾಗಿ ಸದೃಢತೆ ಹೊಂದಿದವರು ದೇಶವನ್ನೂ ಇದೇ ರೀತಿ ಇಟ್ಟುಕೊಳ್ಳುತ್ತಾರೆ ಅನ್ನಿಸುತ್ತದೆ. ರಾಹುಲ್ ಗಾಂಧಿ ಕೂಡ ಪ್ರಧಾನಿಯಾದರೆ ದೇಶವನ್ನು ಫಿಟ್ ಆಗಿಯೇ ಇಡಬಲ್ಲರು ಎಂದು ಡಾ. ಶಿವರಾಜ್ ಕುಮಾರ್ ಹೇಳಿದರು.
ಇದನ್ನೂ ಓದಿ :ಮೃಣಾಲ್ ಠಾಕೂರ್
ಇನ್ನು ಈ ಬಾರಿ ಗೀತಾ ಶಿವರಾಜ್ಕುಮಾರ್ ಗೆಲ್ಲಲೇಬೇಕೆಂದು ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಒಂದಾಗಿದ್ದಾರೆ. ಗೀತಕ್ಕ ಪರವಾಗಿ ನಟ-ನಟಿಯರು ಪ್ರಚಾರದಲ್ಲಿ ತೊಡಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಅವರ ಎದುರಾಳಿಯಾಗಿ ಗೀತಕ್ಕ ನಿಂತಿದ್ದಾರೆ. ಅದರ ಜೊತೆಗೆ ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಈಶ್ವರಪ್ಪ ಕೂಡ ಕಣದಲ್ಲಿದ್ದಾರೆ.