Left Ad
"ಹಂಟರ್" ಆದ ನಿರಂಜನ್ ಸುಧೀಂದ್ರ - Chittara news
# Tags

“ಹಂಟರ್” ಆದ ನಿರಂಜನ್ ಸುಧೀಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ‌ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ “ಹಂಟರ್” ಚಿತ್ರದ ಚಿತ್ರೀಕರಣ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು “ಹಂಟರ್” ಬಗ್ಗೆ ಮಾತನಾಡಿದರು.ನಮ್ಮ ತ್ರಿವಿಕ್ರಮ್ ಸಿನಿಮಾಸ್ ಲಾಂಛನದಲ್ಲಿ  “ಹಂಟರ್” ಸಿನಿಮಾ ನಿರ್ಮಾಣವಾಗುತ್ತಿದೆ.  ನಿರಂಜನ್ ಸುಧೀಂದ್ರ ಈ ಚಿತ್ರದ ನಾಯಕ. ಸೌಮ್ಯ ಮೆನನ್ ನಾಯಕಿ. ಕಬೀರ್ ಬೇಡಿ, ಸುಮನ್, ಶರತ್ ಕುಮಾರ್, ಸಾಧುಕೋಕಿಲ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಪ್ಪತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನವೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ತ್ರಿವಿಕ್ರಮ್ ಸಾಫಲ್ಯ ತಿಳಿಸಿದರು.

 *’ರಂಗು ರಗಳೆ’ಗೆ ಮುಹೂರ್ತದ ಸಂಭ್ರಮ…ಇದು ಜಾಕ್ ನಿರ್ದೇಶನದ ಮಲ್ಟಿಸ್ಟಾರ್ ಸಿನಿಮಾ*

“ಸೀಜರ್” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ “ಹಂಟರ್”. ಇದೊಂದು ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್. ಈ ಚಿತ್ರಕ್ಕಾಗಿ ಎಪ್ಪತ್ತೈದು ಕೆಜಿ ತೂಕವಿದ್ದ ನಿರಂಜನ್, ಮತ್ತಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಗಣೇಶ್ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ. ಕಬೀರ್ ಬೇಡಿ, ಸುಮನ್, ಶರತ್ ಕುಮಾರ್  ಅವರಂತಹ ಕಲಾವಿದರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಚಂದನ್ ಶೆಟ್ಟಿ ” ಹಂಟರ್ ” ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.  ಜೂನ್ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಲಿದೆ ಎನ್ನುತ್ತಾರೆ ನಿರ್ದೇಶಕ ವಿನಯ್ ಕೃಷ್ಣ.ಈ ಚಿತ್ರ ಫೈಟ್ ನೊಂದಿಗೆ ಶುರುವಾಗಿ ಫೈಟ್ ನಲ್ಲೇ ಮುಕ್ತಾಯವಾಗುತ್ತದೆ. ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ನಾನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲೇ ಅದ್ದೂರಿ ಸಿನಿಮಾ ಇದು ಎಂದರೆ ತಪ್ಪಾಗಲಾರದು. ಉತ್ತರ ಹಾಗೂ ದಕ್ಷಿಣ ಭಾರತದ ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ ಎಂದು ನಾಯಕ ನಿರಂಜನ್ ಸುಧೀಂದ್ರ ತಿಳಿಸಿದರು.

`Shivaji Surathkal-2’ Review: ನೀ `ಮಾಯಾವಿ’ಯೊಳಗೋ.. `ಮಾಯಾವಿ’ ನಿನ್ನೋಳಗೋ!

ನಾನು ಹೆಡ್ ಕಾನ್ಸ್‌ಟೇಬಲ್ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಹಾಗೂ ಶರತ್ ಕುಮಾರ್ ಬಹಳ ದಿನಗಳ ನಂತರ ಒಟ್ಟಾಗಿ ಅಭಿನಯಿಸುತ್ತಿದ್ದೇವೆ ಎಂದು ನಟ ಸುಮನ್ ಹೇಳಿದರು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು.   ನನ್ನ ಪಾತ್ರ ಚೆನ್ನಾಗಿದೆ. ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು ನಟ ಶರತ್ ಕುಮಾರ್. ನಾನು ಮೂಲತಃ ಕೇರಳದವಳು. ಕನ್ನಡದಲ್ಲಿ ಮೊದಲ ಚಿತ್ರ ಎನ್ನುತ್ತಾರೆ ನಾಯಕಿ ಸೌಮ್ಯ ಮೆನನ್.  ಛಾಯಾಗ್ರಹಕ ಜೈ ಆನಂದ್ ಸಹ “ಹಂಟರ್” ಬಗ್ಗೆ ಮಾತನಾಡಿದರು.

 

Spread the love
Translate »
Right Ad