Sandalwood Leading OnlineMedia

 ‘ಹುಲಿಯಾ’ : ತೂತುಮಡಿಕೆ ಡೈರೆಕ್ಟರ್ ಹೊಸ ಪ್ರಯತ್ನ  

ಹುಲಿಯಾ ಎಂದ ತೂತುಮಡಿಕೆ ಡೈರೆಕ್ಟರ್  50ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಂದ ಚಂದ್ರಕೀರ್ತಿ ಹೊಸ ಸಿನಿಮಾದ ಟೈಟಲ್ ರಿಲೀಸ್. ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗುವುದು ಹೊಸತೆನಲ್ಲ. ಈಗ ಡೈನಾಮಿಕ್ ಸ್ಟಾರ್ ದೇವರಾಜ್ ನಟನೆಯಹುಲಿಯಾ ಶೀರ್ಷಿಕೆ ಮರುಬಳಕೆ ಮಾಡಿಕೊಂಡು ಹೊಸ ಚಿತ್ರವೊಂದು ತಯಾರಾಗುತ್ತಿದೆ. ತೂತುಮಡಿಕೆ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ಯುವ ನಿರ್ದೇಶಕ ಕಂ ನಟ ಚಂದ್ರಕೀರ್ತಿ ಎರಡನೇ ಹೆಜ್ಜೆಗೆ ಹುಲಿಯಾ ಎಂಬ ಟೈಟಲ್ ಇಡಲಾಗಿದೆ. ದೇವರಾಜ್ ಅವರ ಆಶೀರ್ವಾದೊಂದಿಗೆ ಶುರುವಾಗುತ್ತಿರುವ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಪೋಸ್ಟರ್ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಂದ ಏಕಕಾಲಕ್ಕೆ ಬಿಡುಗಡೆಯಾಗಿದೆ.

 

 `ಕಾಂತಾರ-2’ನಲ್ಲೂ ಸಪ್ತಮಿ?!

ಸಿಲಿಕಾನ್ ಸಿಟಿ, ಕಿಸ್, ಮೂಕವಿಸ್ಮಿತ, ಬೆಂಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಚಂದ್ರಕೀರ್ತಿ ತೂತುಮಡಿಕೆ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಮೊದಲ ಚಿತ್ರದಲ್ಲಿಯೇ ಗಮನಸೆಳೆದಿದ್ದ ಅವರಿಗೆ ಹುಲಿಯಾ ಮೂಲಕ ಲವ್ ಹಾಗೂ ಆಕ್ಷನ್ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರನ್ನು ರಂಜಿಸಲು ಅಣಿಯಾಗುತ್ತಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಚಂದ್ರಕೀರ್ತಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಹುಲಿಯಾ ಪೋಸ್ಟರ್ ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ತೂತುಮಡಿಕೆ ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್, ಮಧು ರಾವ್ ಹಾಗೂ ವಸಂತ್ ವಲ್ಲಭ್ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಸ್ವಾಮಿನಾಥನ್ ಆರ್ ಕೆ ಸಂಗೀತ, ಭಜರಂಗಿ, ವೇದ ಹಾಗೂ ಬೆಲ್ ಬಾಟಂ ಸಂಭಾಷಣೆಗಾರ ರಘು ನಿಡುವಳ್ಳಿ ಮಾತು ಚಿತ್ರಕ್ಕಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿರುವ ಹುಲಿಯಾ ಚಿತ್ರತಂಡ ಶೀಘ್ರದಲ್ಲಿ ಉಳಿದ ತಾಂತ್ರಿಕ ಹಾಗೂ ತಾರಾಬಳಗ ಬಗ್ಗೆ ಮಾಹಿತಿ ನೀಡಲಿದೆ.

Share this post:

Related Posts

To Subscribe to our News Letter.

Translate »