ಗಣ್ಯರು ಮೆಚ್ಚಿದ “ಹುಲಿ ಬೇಟೆ”
ಚಂದನವನಕ್ಕೆ ಯುವ ಉತ್ಸಾಹಿ ತಂಡ ಹುಲಿಬೇಟೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ರಾಜ್‌ಬಹದ್ದೂರು ರವರ ನಿರ್ದೇಶನದಲ್ಲಿ ಯುವ ನಾಯಕ ವಿಶ್ವ ರವರು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಭೂಗತ ಲೋಕದ ಜೊತೆಗೆ ನವಿರಾದ ಪ್ರೇಮಾ ಕಥಾಹಂದರ ಹೊಂದಿರುವ ಚಿತ್ರದ ಟೀಸರ್ ಇತ್ತೀಚೆಗೆ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಚಿನ್ನೇ ಗೌಡ್ರು, ಸಾ.ರಾ.ಗೋವಿಂದು, ಕನ್ನಡ ಚನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಪ್ರವೀಣ್ ಮುಂತಾದ ಗಣ್ಯಾತಿಗಣ್ಯರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಚಿತ್ರದಲ್ಲಿ ನಾಯಕ ವಿಶ್ವ ರವರ ಜೊತೆ ರೋಹಿಣಿ ನಾಯಕಿಯಾಗಿ ತೆರೆಹಂಚಿಕೊOಡಿದ್ದಾರೆ, ಇನ್ನುಳಿದಂತೆ ಮಾಸ್ಟರ್ ಆನಂದ್, ಬಾಬುಖಾನ್, ಗಣೇಶ್ ವಿಹಾನ್, ಶಶಿ, ಹೇಮಾಗೌಡ, ಗಿಲ್ಲಿ ವೆಂಕಟೇಶ್ ಮುಂತಾದವರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಧನಪಾಲ್ ರವರ ಛಾಯಾಗ್ರಹಣ, ಹರ್ಷವರ್ಧನ್ ರವರ ಸಂಗೀತ ಈ ಚಿತ್ರಕ್ಕಿದೆ.
ಟೀಸರ್ ಮೂಲಕ ಕುತೂಹಲ ಮೂಡಿಸಿರುವ ಚಿತ್ರ ಶೀಘ್ರದಲ್ಲೆ ಬಿಡುಗಡೆಯಾಗಲಿದೆ.