`ಹಾಸ್ಟೆಲ್ ಹುಡುಗರ’ ನಾನಾ ಅವತಾರ ಸಿನಿಮಾ ರಿಲೀಸ್‌ಗೂ ಮುನ್ನವೇ ವಿಭಿನ್ನ ಪ್ರೋಮೋಗಳ ಮೂಲಕವೇ ಯುವ ಪೀಳಿಗೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನೇನು ಬಿಡುಗಡೆಯಾಗ ತಮ್ಮ `ರಮ್ಯ’ ಚೈತ್ರಕಾಲ ಶುರುವಾಗುತ್ತದೆ ಅನ್ನುವಷ್ಟರಲ್ಲಿ, ಸಿನಿಮಾ ಕೋರ್ಟಿನ ಮೆಟ್ಟಿಲಿನಲ್ಲೇ ನಿರ್ಧಾರವಾಗಿತ್ತು! ಹೀಗೆ, ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈಗ ಸಿನಿಮಾ ರಿಲೀಸ್ ಆಗಿ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಿದ್ದರೆ, ಈ `ಹಾಸ್ಟೆಲ್ ಹುಡುಗರು’ ಮಾಡಿರುವ ಮೋಡಿಯಾದರೂ ಏನು? `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟೈಟಲ್‌ನಲ್ಲೇ ಚಿತ್ರದ ಒನ್‌ಲೈನ್ ಸ್ಟೋರಿ ಗೊತ್ತಾಗಿಬಿಡುತ್ತದೆ. ಇದು ಹಾಸ್ಟೆಲ್ ಹುಡುಗರ ಕಥೆ-ವೈಥೆ-`…’, ಎಂಬುದು ಕ್ಲಿಯರ್ ಆಗುತ್ತದೆ. ಕಾಲೇಜ್ ಜೀವನ ಹೊಸ್ತಿಲಲ್ಲಿ. ಬಾಯ್ಸ್ ಹಾಸ್ಟೆಲ್‌ಗಳಲ್ಲಿ ಏನೆಲ್ಲ ತರಲೆ, ತುಂಟಾಟಗಳು ಇರುತ್ತವೋ, ಅವೆಲ್ಲವನ್ನೂ ಪೋಣಿಸಿ ಒಂದು ಚಿತ್ರಕಥೆ ಮಾಡಲಾಗಿದೆ. ಇಲ್ಲಿನ `ಹಾಸ್ಟೆಲ್ ಹುಡುಗರು’ ಒಬ್ಬರಿಗಿಂತ ಒಬ್ಬರು ಭಿನ್ನ. ಪ್ರತಿಯೊಂದು ಪಾತ್ರಗಳೂ ಒಂದು ಕಥೆ ಹೇಳುತ್ತವೆ. ಒಂದೇ ರಾತ್ರಿ ನಡೆಯುವ ಈ ಕಥೆಯಲ್ಲಿನ `ಡೆಡ್ ಬಾಡಿ’ ಡ್ರಾಮಾ ಹಲವು ಲೇಯರ್‌ನಲ್ಲಿ ಪ್ರೇಕ್ಷಕರನ್ನು ತಲುಪುತ್ತದೆ. ಸಂಭಾಷಣೆಗಳು ನಗಿಸುತ್ತಲೇ ಜೀವನದ ಗಂಭೀರತೆ ಬಗ್ಗೆ ಎಚ್ಚರಿಸುತ್ತದೆ. ಒಂದು ರೀತಿಯಲ್ಲಿ ಓಶೋ ರಜನೀಶ್ ಮಾತಿನಂತೆ! ಸಿನಿಮಾದೊಳಗೆ ಒಂದು ಸಿನಿಮಾ ತೋರಿಸಿರುವ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ, `ಶಾರ್ಟ್’ಫಿಲ್ಮ್ ಸಾಹಸವನ್ನೇ ಬೇಸ್ ಆಗಿಟ್ಟುಕೊಂಟು `ಲಾಂಗ್’ ಸಿನಿಮಾ ಮಾಡಿದ್ದಾರೆ.
ಇದನ್ನೂ ಓದಿ ಅಭಿಷೇಕ್ ಬಚ್ಚನ್ ಸಿನಿಮಾಕ್ಕೆ ಗುಡ್ ಬೈ ಹೇಳ್ತಾರಾ! ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ!?
ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಚಿತ್ರದ ತುಂಬಾ ನೂರಕ್ಕೂ ಹೆಚ್ಚು ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಧಾರಳವಾಗಿ ಬಳಸಿರುವ ಪಂಚ್‌ಗಳು ಕಥೆಯನ್ನು ಎಲ್ಲೂ ಪಂಚರ್ ಮಾಡದೆ ಪ್ರೇಕ್ಷಕರನ್ನು ರಂಜಿಸುತ್ತದೆ. ಗಂಭೀರವಾದ ಕಥೆ, ಗಂಭೀರವಾದ ಪಾತ್ರಗಳಿಲ್ಲ ಆದರೆ ಜೀವನದ ಗಂಭೀರವಾದ ಅಂಶ ಇದೆ. ಲಾಜಿಕ್ ಇಲ್ಲದೆ ಮ್ಯಾಜಿಕ್ ಮಾಡಲು ಹೊರಟ್ರಾ ನಿತಿನ್ ಕೃಷ್ಣಮೂರ್ತಿ? ಎಂಬ ಪ್ರಶ್ನೆಗೆ `ದೇವರ’ ಮೊರೆ ಹೋಗಿ ಸಮರ್ಥವಾದ ಉತ್ತರ ನೀಡಿದ್ದಾರೆ. ಅಷ್ಟೂ ಕಲಾವಿರನ್ನು ತನಗೆ ಬೇಕಾದಂತೆ ದುಡಿಸಿಕೊಂಡಿರುವ ನಿತಿನ್, ಯಾವೂ ಪಾತ್ರವಾಗಿ ಸೈ ಅನ್ನಿಸಿಕೊಂಡಿದ್ದಾರೆ. ತೆರೆಮೇಲಿನ `ಹಾಸ್ಟೆಲ್ ಹುಡುಗರ’ TOM&JERRY ಆಟದಲ್ಲಿ ಪ್ರೇಕ್ಷಕನ್ನೂ ಭಾಗಿಯಾಗಿಸಿದ್ದು ನಿಜಕ್ಕೂ ಮೆಚ್ಚಲೇ ಬೇಕಾದ ಅಂಶ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ.. ಪಾತ್ರಗಳು ಸಿನಿಮಾದಲ್ಲಿ ಬೇಕಿತ್ತಾ? ಆ ಪಾತ್ರಗಳನ್ನೂ ಹೊಸಬರೆ ಮಾಡಬಹುದಿತ್ತಲ್ಲಾ? ಅಂದುಕೊಳ್ಳುವಷ್ಟರ ಮಟ್ಟಿಗೆ ಹೊಸ ಹುಡುಗರು ಅಚ್ಚರಿಯಾಗುವಂತೆ ನಟಿಸಿದ್ದಾರೆ. ಪಂಚಿ0ಗ್ ಸಂಭಾಷಣೆ, `ಪ್ರೇಕ್ಷಕರ ನಗುವೇ ಪರಮ ಧರ್ಮ’ ಎಂಬ0ತೆ ಬರೆದಿರುವ ಚಿತ್ರಕಥೆ ಚಿತ್ರದ ಜೀವಾಳ. ಕನ್ನಡದಲ್ಲಿ ಡಾರ್ಕ್ ಕಾಮಿಡಿ ಹ್ಯೂಮರ್ ಜಾನರ್‌ನಲ್ಲಿ ಇಂತಹದೊ0ದು ಚಿತ್ರ ಅಪರೂಪದ್ದು. ಯೂತ್ಸ್ಗೇ ಸಾಕಷ್ಟು ಕನೆಕ್ಟ್ ಆಗುವ `ಹಾಸ್ಟೆಲ್ ಹುಡುಗರ’ ಸಾಹಸ ಮೆಚ್ಚಲೇ ಬೇಕು.
ಇದನ್ನೂ ಓದಿ ದೊಡ್ಡ ಸ್ಟಾರ್ ಗಳಿಗೆ ನಾನು ಸಿನಿಮಾ ಮಾಡೋಲ್ಲ : ಕಾರಣ ಕೊಟ್ಟ ರಾಜ್ ಬಿ ಶೆಟ್ಟಿ.
ರಮ್ಯಾ ತೆರೆಯ ಮೇರೆ ರಮ್ಯವಾಗಿ ಕಂಗೊಳಿಸಿ `ಹಾಸ್ಟೆಲ್ ಹುಡುಗರ’ ನಿರೀಕ್ಷೆಯನ್ನು ಸರಿದೂಗಿಸಿದ್ದಾರೆ. ದಿಗಂತ್ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ, ವಾರ್ಡನ್ ಪಾತ್ರ ಮಾಡಿರುವ ಮಂಜುನಾಥ್ ನಾಯಕ್ `ಹೆಣ’ಕ್ಕೆ ಜೀವ ತುಂಬಿ ನಟಿಸಿದ್ದಾರೆ! ಶಾರ್ಟ್ ಫಿಲ್ಮ್ ಮಾಡಲು ಹೋಗಿ, `ಲಾಂಗ್’ ಪ್ರಾಬ್ಲೆಮ್ನಲ್ಲಿ ಸಿಲುಕಿಕೊಳ್ಳುವ ಅಜಿತ್ ಪಾತ್ರದಲ್ಲಿ ಪ್ರಜ್ವಲ್ ಪ್ರಜ್ವಲಿಸಿದ್ದಾರೆ. ನಟ ಚೇತನ್ ದುರ್ಗ ಅವರ ಕಾಮಿಡಿ ಟೈಮಿಂಗ್‌ರಿ ಸಿನಿಮಾದ ಚೇತನ. ಶ್ರೀವತ್ಸ, ತೇಜಸ್, ರಾಕೇಶ್.. ಹೀಗೆ ಸಾಕಷ್ಟು ನಟರು ಸಣ್ಣ ಪಾತ್ರವಾದರೂ `ದೊಡ್ಡ’ ಇಂಪ್ಯಾಕ್ಟ್ ಮಾಡುತ್ತಾರೆ. ಅಭಿದಾಸ್ ಮತ್ತು ಅರ್ಚನಾ ದೃಶ್ಯಗಳನ್ನು ಅಷ್ಟು ಸಿರೀಯಸ್ ಆಗದೆ ತೆಗೆದುಕೊಳ್ಳದೇ ನೋಡಿದರೆ ಮಜ ನೀಡುತ್ತದೆ. `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಡೆಡ್‌ಬಾಡಿ ಡ್ರಾಮಾ ಕಥೆ ಒಂದೇ ಜಾಗದಲ್ಲೇ, ರಾತ್ರಿಯಲ್ಲೇ ನಡೆಯುವುದರಿಂದ .ಛಾಯಾಗ್ರಾಹಕನಿಗೆ ನಿಜಕ್ಕೂ ಒಂದು ಸವಾಲೇ ಸರಿ. `ಲೆನ್ಸ್’ ಮಾಂತ್ರಿಕ ಅರವಿಂದ್ ಕಶ್ಯಪ್ ರಾತ್ರಿಯಲ್ಲೂ `ಹಾಸ್ಟೆಲ್ ಹುಡುಗರ’ರಿಗೆ ಸೂರ್ಯ ತೋರಿಸಿದ್ದಾರೆ! ಹಾಗೆಯೇ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತವು `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಹೆಚ್ಚು ನೋಡೆಬಲ್ ಮಾಡಿದೆ. ಒಟ್ಟಿನಲ್ಲಿ, ರಿಲೀಸ್ ಮೊದಲು, ರಿಲೀಸ್ ನಂತರವೂ ಸಾಕಷ್ಟು ಸೌಂಡ್ ಮಾಡುತ್ತಿರುವ `ಹಾಸ್ಟೆಲ್ ಹುಡುಗರು’ ಚಿತ್ರಮಂದಿರಕ್ಕೆ ಪ್ರೇಕ್ಷಕ ಬರುವುದಿಲ್ಲ ಎಂಬುದನ್ನು ಸುಳ್ಳು ಮಾಡುತ್ತಿದ್ದಾರೆ. ಓಟಿಟಿಗೂ ಕಾಯದೇ ಥೀಯೆಟರ್‌ನಲ್ಲೇ ನೋಡಿ, ಕಾರಣ ಸಿನಿಮಾದ ಸೌಂಡ್ ಡಿಸೈನ್ ಅದ್ಭುತವಾಗಿದ್ದು, ಹೊಸ ಅನುಭವ ನೀಡುತ್ತದೆ. ಡೋಂಟ್ ಮಿಸ್ ದಿಸ್ `ಅನುಭವ’!
by B.NAVEEN KRISHNA