ಕನ್ನಡದಲ್ಲಿ ಈಗ ಬಹಳ ಟ್ರೆಂಡಿಂಗ್ ನಲ್ಲಿರುವ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಇದರ ಪ್ರೊಮೊಗಳ ಸದ್ದನ್ನು ಕೇಳಲಾಗುತ್ತಿಲ್ಲಾ, ಪ್ರೊಮೊಗಳನ್ನು ಮಾಡಿರುವ ಕಂಟೆAಟ್‌ನೆಲ್ಲಾ ಎತ್ತಿಕೊಂಡರೆ ಇನ್ನೊಂದು ಸಿನಿಮಾನೇ ಮಾಡಬಹುದಿತ್ತೇನೋ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಈ ಚಿತ್ರವನ್ನು ಜನರ ಮನ ಮಾನಸದಿಂದ ಮರೆಯದಂತೆ ಮಾಡಲು ಈ ಚಿತ್ರದ ಪ್ರಮೊಷನ್ ವಿಡೀಯೊಗಳು ಒಂದರ ಹಿಂದೊAದು ಬರುತ್ತಿವೆ. ವಿಭಿನ್ನ ರೀತಿಯ ಪ್ರೊಮೊ ಪ್ಯಾಕಡ್ ಪ್ರಮೋಷನ್ ಮಾಡುತ್ತಿರುವ ಚಿತ್ರ ತಂಡ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು
ಈ ಸಿನಿಮಾ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಹಾಸ್ಟೆಲ್ ಹುಡುಗರು ಚಿತ್ರದಲ್ಲಿ ಒಂದು ವಿಶೇಷತೆ ಇದೆ. ಈ ಸಿನಿಮಾವನ್ನು ವೆರಿಟೆ (ಇಟಲಿಯನ್) ಸಿನಿಮಾ ಮೇಕಿಂಗ್ ಸ್ಟೈಲ್ ನಲ್ಲಿ ಚಿತ್ರ ನಿರ್ಮಿಸಿದ್ದಾರೆ. ಇದೊಂದು ದೃಶ್ಯದಲ್ಲೆ ಮುಚ್ಚಿದ ಸತ್ಯವನ್ನು ತೊರಿಸುವ ಕೆಲಸ , ಇದು ಇಟಾಲಿಯನ್ ಸ್ಟೈಲ್ ನಲ್ಲಿ ತಯಾರಾದ ಸಿನಿಮಾ. ಕನ್ನಡದಲ್ಲಿ ಪ್ರಥಮ ಪ್ರಯತ್ನ. ಈ ಟೆಕ್ನೋ ಒಂಥರಾ ಅಕ್ಷರಗಳು ಎದ್ದು ಕಾಣಲಿ ಅಂತಾ ಹೈಲೈನರ್ ಬಳಸುತ್ತೀವಲ್ಲಾ ಆ ತರಹದ್ದು ಇರಬಹುದು ಅಂದ್ಕೊಳ್ಳಿ. ಹೀಗೆ ಒಳಗೆ ಏನೋ ಇದೆ, ಅನ್ನೋ ಹಾಗೆ ಸೀಕ್ರೆಟ್ ಇಟ್ಟುಕೊಂಡಿದ್ದಾರೆ. ನಾವಂದುಕೊAಡAತೆ ಸಿನಿಮಾ ಇರೋದಿಲ್ಲಾ.
ಈ ಚಿತ್ರದಲ್ಲಿ ಇರುವ ಕಲಾವಿದರ ದಂಡು ಮತ್ಯಾವ ಚಿತ್ರದಲ್ಲೂ ಕಾಣಸಿಗೊಲ್ಲವೇನೊ, ಸುಮಾರು ಸಾವಿರ ಜನರು ಒಟ್ಟಿಗೆ ನಟಿಸಿರೊ ಚಿತ್ರ. ಇದಕ್ಕಾಗಿ ಒಟ್ಟು ೬೦೦೦ ದಿಂದ ೭೦೦೦ ಜನರ ಆಡಿಷನ್ ಮಾಡಲಾಗಿದ್ದು. ಸರಿ ಸುಮಾರು ೩೦೦ ಮಂದಿ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ. ಡಬ್ಬಿಂಗ್ ಗೆ ಅಂದಾಜು ೯೨ ದಿನ ತೆಗೆದುಕೊಂಡಿದ್ದು, ಬರೊಬ್ಬರಿ ೬೦ ದಿನ ಸೌಂಡ್ ಡಿಸೈನ್‌ಗೆ ಸಮಯ ತೆಗೆದುಕೊಂಡಿದೆ. ಸರಿ ಸುಮಾರು ೬೦೦ ಸೌಂಡ್ ಟ್ರ‍್ಯಾಕ್ ಇದೆ, ಇದೊಂದು ಕ್ಡಾಟ್ಲೆ ಹುಡುಗರ ದೃಶ್ಯ ಕಾವ್ಯವೇ ಎನ್ನಬಹುದು.ಸಿನಿಮಾ ಕಥೆ ಬಗ್ಗೆ ಹೆಚ್ಚು ಹೇಳದ ನಿರ್ದೇಶಕ ನಿತಿನ್, ಹಾಸ್ಟೆಲ್‌ನಲ್ಲಿ ಒಂದು ರಾತ್ರಿ ನಡೆಯುವ ಕಥೆ ಎಂದು ಸುಳಿವು ಬಿಟ್ಟು ಕೊಟ್ಟರು. ಒಟ್ಟಾರೆ ಈ ಸಿನಿಮಾ ನೀವು ಅವರ ಪ್ರೊಮೊದಲ್ಲಿ ನೊಡಿರುವುದಕಿಂತ ಒಂದ್ ಲೆವೆಲ್ ಬೇರೆತರಹಾನೆ ಮಾಡಿದ್ದಾರೆ ಹೊಸ ಉತ್ಸಾಹಿ ಹುಡುಗರು.
ಪ್ರೊಮೊಗಳ ಮೂಲಕ ಪ್ರಾಮಿಸ್ ಮಾಡಿದ ಚಿತ್ರತಂಡ
ಸಾವಿರ ಕಲಾವಿದರ ದಂಡು ಕಟ್ಟಿಕೊಂಡು ಸಿನಿಮ ಮಾಡುವಾಗ ಸಿನಿಮಾ ಶೂಟಿಂಗ್ ಲೇಟ್ ಆಗುತಿತ್ತು ಜನರು ಹಾಸ್ಟೆಲ್ ಹುಡುಗರನ್ನಾ ಮರೆತುಹೊಗಬಾರದೆಂದು ಆಗಾಗ ಚಿತ್ರತಂಡ ಒಂದೊAದು ವಿಭಿನ್ನ ಪ್ರೊಮೊಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಸಿನಿಮಾ ಬಗೆಗಿನ ಕುತೂಹಲವನ್ನು ಹೆಚ್ಚಿಸುತ್ತಾ ಹೊದರು ಈ ಹಾಸ್ಟೆಲ್ ಹುಡುಗರು . ಇವರ ಪ್ರೊಮೊಗೆ, ಪ್ರೊಮೊಗಳ ಕಂಟೆAಟ್‌ಗೆ ದೊಡ್ಡ ದೊಡ್ಡ ಸ್ಟಾರ್ ಗಳೇ ಸಾಥ್ ನೀಡಿದ್ದು ವಿಶೇಷ. ಈ ಚಿತ್ರದ ಮೊದಲ ಪೊಸ್ಟರ್ ಕರ್ನಾಟಕ ರತ್ನ ಡಾ// ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು, ತದನಂತರ ಸ್ಟಾರ್ ನಟರುಗಳಾದ ಕಿಚ್ಚ ಸುದೀಪ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ , ವಿಭಿನ್ನ ರೀತಿಯ ಪ್ರೊಮೊಗಳಲ್ಲಿ ಹಾಸ್ಟೆಲ್ ಹುಡುಗರ ತಂಡ ಹೊಸ ಹೊಸ ಆಲೋಚನೆಗಳೊಂದಿಗೆ ಜನರಿಗೆ ತಲುಪಿಸುವಲ್ಲಿ. ಯಶಸ್ವಿಯಾಗಿದ್ದಾರೆ.
ಉತ್ಸಾಹಿ ತಂಡಕ್ಕೆ ಜೊತೆಯಾದ ಪ್ರೊತ್ಸಾಹಿ ಸ್ಟಾರ್‌ಗಳು
ಸ್ಯಾಂಡಲ್‌ವುಡ್ ಕ್ವೀನ್ ಮೋಹಕ ತಾರೆ ರಮ್ಯರವರ ಕಮ್‌ಬ್ಯಾಕ್‌ಗಾಗಿ ಕಾಯುತ್ತಿದ್ದ ಸಿನಿರಸಿಕರಿಗೆ, ಬಹಳ ವರ್ಷಗಳನಂತರ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸಿನಿಮಾದ ಒಂದು ಜನರೇಷನ್ನಿನ ಕಲಾವಿದರು ಹಾಸ್ಟಲ್ ಹುಡುಗರ ಜೊತೆ ಬಂದು ಹೋಗಲಿದ್ದಾರೆ. ಹುಡುಗರ ಜೊತೆ ವಿಶೇಷ ಪಾತ್ರಗಳಲ್ಲಿ ರಮ್ಯಾ, ರಿಷಬ್ ಶೆಟ್ಟಿ, ದಿಗಂತ್, ಲೂಸಿಯಾ ಪವನ್ ಕುಮಾರ್, ಶೈನ್ ಶೆಟ್ಟಿ ಇನ್ನೂ ಹಲವು ಕಲಾವಿದರ ದಂಡೇ ಇದೆ. ಈ ಚಿತ್ರದಲ್ಲಿ ನಟಿಸಿರುವ ಎಲ್ಲರು ರಂಗಭೂಮಿ ಹಿನ್ನೆಲೆಯಿಂದ ಬಂದಿರುವವರೆ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ ನಿರ್ಮಾಣದ ಹೊರೆಯನ್ನು ವರುಣ್, ಪ್ರಜ್ವಲ್, ಅರವಿಂದ್ ರವರುಗಳು ಹೊತ್ತಿದ್ದಾರೆ, ಸಂಗೀತ ಅಜನೀಶ್ ಲೊಕನಾಥ್ ನೀಡಿದ್ದಾರೆ. ಚಿತ್ರ ಜುಲೈ ೨೧ ರಂದು ಚಿತ್ರಮಂದಿರಕ್ಕೆ ಬರಲಿದೆ. ಹಾಸ್ಟೆಲ್ ಹುಡುಗರು ಬರೀ ಕ್ವಾಟ್ಲೇ ಮಾಡೊಕೆ ಬರ್ತಾಇಲ್ಲಾ ಏನೊ ವಿಷಯ ತರ್ತಾ ಇರೊದಂತು ಗ್ಯಾರಂಟಿ ಏನು ಅಂತಾ ನೊಡಬೇಕಷ್ಟೆ .