ಬೆಂಗಳೂರು: ಆಕ್ಷನ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಧ್ರುವ ಸರ್ಜಾ ಮತ್ತು ನಿರ್ದೇಶಕ ನರ್ತನ್ ಜೊತೆಯಾದರೆ ಹೇಗಿರುತ್ತದೆ? ಹೀಗೊಂದು ಸುದ್ದಿ ಇದೀಗ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.ಧ್ರುವ ಸರ್ಜಾ ನಾಯಕರಾಗಿ, ನರ್ತನ್ ನಿರ್ದೇಶನದ ಸಿನಿಮಾಗೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಲಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.
ಈ ಮೊದಲು ನರ್ತನ್, ಯಶ್19 ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಯಶ್ ತಮ್ಮ ಮುಂದಿನ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಮಾಡುತ್ತಿದ್ದಾರೆ. ಇದೀಗ ನರ್ತನ್ ಆಕ್ಷನ್ ಥ್ರಿಲ್ಲರ್ ಕತೆಯೊಂದನ್ನು ಧ‍್ರುವಗಾಗಿ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಧಿಕೃತ ಸುದ್ದಿ ಬಂದಿಲ್ಲ. ಆದರೆ ಇದುವರೆಗೆ ಬಿಗ್ ಬಜೆಟ್ ಮಾಸ್ ಸಿನಿಮಾಗಳನ್ನು ನಿರ್ಮಿಸುವ ಮೂಲಕ ದೇಶದಾದ್ಯಂಥ ಗಮನ ಸೆಳೆದಿರುವ ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡಿದರೂ ಅಚ್ಚರಿಯಿಲ್ಲ.