ಅಪ್ಪಟ ಕನ್ನಡದ ಸಿನಿಮಾ ‘ಕಾಂತಾರ’ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ನಟನೆ-ನಿರ್ದೇಶನಕ್ಕೆ ಭಾಷೆಯ ಭೇದ ಭಾವ ಮರೆತು ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ 400 ಕೋಟಿ ರೂಪಾಯಿ ಕಲೆ ಹಾಕಿತ್ತು. ಅದೇ ಜೋಷ್‌ನಲ್ಲಿ ‘ಕಾಂತಾರ’ ಪ್ರೀಕ್ವೆಲ್ ಮಾಡುವುದಕ್ಕೆ ರಿಷಬ್ ಶೆಟ್ಟಿ ಮುಂದಾಗಿದ್ದರು. ಹೊಂಬಾಳೆ ಫಿಲ್ಮ್ಸ್ ‘ಕಾಂತಾರ’ ಅದ್ಯಾಯ 1 ಸಿನಿಮಾ ನಿರ್ಮಾಣ ಮಾಡುತ್ತಿದೆ. ಕುತೂಹಲ ಏನು ಅಂದರೆ, ‘ಕಾಂತಾರ’ಗೂ ಮುನ್ನ ಏನಾಗಿತ್ತು ಅನ್ನೋದನ್ನೇ ರಿಷಬ್ ಶೆಟ್ಟಿ ಹೇಳುವುದಕ್ಕೆ ಹೊರಟಿದ್ದಾರೆ. ಈಗಾಗಲೇ ‘ಕಾಂತಾರ’ದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದೇ ದಿನ (ನವೆಂಬರ್ 27) ಆನೆಗುಡ್ಡೆ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತ ಕಂಡಿದೆ.
ಇದನ್ನೂ ಓದಿ ‘ಒಂದೇ ಒಂದು ಕಾಲ್’: ಧನ್ವೀರ್, ಅಭಿ, ಚಿಕ್ಕಣ್ಣಗೆ ದರ್ಶನ್ ಹೀಗೆ ಯಾಕೆ ಹೇಳಿದ್ರು…
‘ಕಾಂತಾರ’ ಅಧ್ಯಾಯ 1 (Kantara 2) ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಸೇರಿದಂತೆ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಪತ್ನಿ ಹಾಗೂ ಆತ್ಮೀಯರೊಂದಿಗೆ ಆನೆಗುಡ್ಡೆ ದೇವಸ್ಥಾನಕ್ಕೆ ಬಂದು ‘ಕಾಂತಾರ’ ಸಿನಿಮಾಗೆ ಮುಹೂರ್ತ ಮಾಡಿದ ಬಳಿಕ ರಿಷಬ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ ಮತ್ತೆ ಕನ್ನಡಿಗರ ಮನಗೆದ್ದ ಪೂಜಾ ಗಾಂಧಿ: ಕನ್ನಡದಲ್ಲಿಯೇ ಬರೆದು ಮದುವೆಗೆ ಆಹ್ವಾನಿಸಿದ ಮುಂಗಾರು ಮಳೆ ನಟಿ!
“ಕಾಂತಾರ ಬಳಿಕ ಮುಂದುವರೆದ ಪಯಣ” ‘ಕಾಂತಾರ’ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿತ್ತು. ಇದೇ ಜೋಷ್‌ನಲ್ಲಿಯೇ ‘ಕಾಂತಾರ’ಗೂ ಮುನ್ನ ಏನಾಗಿತ್ತು ಅನ್ನೋದನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಹೀಗಾಗಿ ಇದು ‘ಕಾಂತಾರ’ ಸಿನಿಮಾದ ಮುನ್ನುಡಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. “ಕಾಂತಾರ ಅಧ್ಯಾಯ ಒಂದನ್ನು ಶುರು ಮಾಡಿದ್ದೇವೆ. ಎರಡನ್ನು ನೀವು ನೋಡಿದ್ದೀರಿ. ತುಂಬಾ ಅದ್ಭುತವಾದಂತಹ ಆಶೀರ್ವಾದ ಮಾಡಿ, ಸಿನಿಮಾವನ್ನು ದೊಡ್ಡ ಹಿಟ್ ಮಾಡಿದ್ರಿ. ಸಕ್ಸಸ್ ಅನ್ನು ಸಪೂರ್ಣ ಕನ್ನಡಿಗರಿಗೆ ಅರ್ಪಿಸುವುದಕ್ಕೆ ಇಷ್ಟ ಪಡುತ್ತೇನೆ. ಮುಂದುವರೆದ ಪಯಣ.. ಆದರೆ, ಕಾಂತಾರದ ಮುನ್ನುಡಿಯನ್ನು ಹೇಳುವುದಕ್ಕೆ ಹೊರಟಿದ್ದೀವಿ. ಹಿಂದೆ ಏನು ನಡೀತು ಅನ್ನೋದನ್ನು ಹೇಳುತ್ತಿದ್ದೇವೆ.” ಎನ್ನುತ್ತಾರೆ ರಿಷಬ್. “ರಾಜ್ಯದ ಬೇರೆ ಭಾಗದ ಕಲಾವಿದರು ಇರ್ತಾರೆ” “ಮಾತಿಗಿಂತ ಕೆಲಸ ಮುಖ್ಯ ಅಂತ ನಂಬಿದ್ದೀನಿ. ಚಿಕ್ಕದೊಂದು ತುಣುಕು ಹಾಗೂ ಪೋಸ್ಟರ್ ಬಿಟ್ಟಿದ್ದೀವಿ. ಸದ್ಯಕ್ಕೆ ನನ್ನ ಮಾತ್ರ ಕಾಸ್ಟ್ ಮಾಡಿಕೊಂಡಿದ್ದೇನೆ. ಕನ್ನಡದ ಕಲಾವಿದರು ಗಳಿಗೆ ಪ್ರಥಮ ಆದ್ಯತೆ. ಯಾಕಂದ್ರೆ, ಕಾಂತಾರ ಕನ್ನಡ ಸಿನಿಮಾ ಅಂತಾನೇ ಮಾಡಿದ್ದೆವು. ಕರ್ನಾಟಕದ ಬೇರೆ ಬೇರೆ ಭಾಗದ ಕಲಾವಿದರನ್ನು ಹುಡುಕುತ್ತಿದ್ದೇವೆ. ಡಿಸೆಂಬರ್‌ನಲ್ಲಿ ಸಿನಿಮಾ ಶುರುವಾಗಲಿದೆ.” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ ಕುತೂಹಲ ಮೂಡಿಸಿದೆ ಅದಿತಿ ಪ್ರಭುದೇವ – ಪವನ್ ತೇಜ ಅಭಿನಯದ “ಅಲೆಕ್ಸಾ” ಟ್ರೇಲರ್
“ಟೆಕ್ನಿಕಲ್ ಟೀಮ್ ಬದಲಾವಣೆ ಇಲ್ಲ” “ಅಜನೀಶ್ ಅವರು ಮ್ಯೂಸಿಕ್ ಮಾಡುತ್ತಿದ್ದಾರೆ. ಟೆಕ್ನಿಕಲ್ ಟೀಮ್ ಯಾರೂ ಬದಲಾಗುವುದಿಲ್ಲ. ಅರವಿಂದ್ ಕಶ್ಯಪ್ ಅವರು ಸಿನಿಮ್ಯಾಟೋಗ್ರಫಿ ಮಾಡುತ್ತಿದ್ದಾರೆ. ಅನಿರುದ್ಧ್ ಮಹೇಶ್, ಶೈಲೇಂದ್ರ ಕೋ ರೈಟರ್‌ಗಳಾಗಿ ಬರೆಯುತ್ತಿದ್ದಾರೆ. ಆರ್ಟಿಸ್ಟ್‌ಗಳು ಒಂದಿಷ್ಟು ಜನ ಹೊಸಬರು ಬರುತ್ತಾರೆ. ಮತ್ತೊಂದಿಷ್ಟು ಜನ ಹಳಬರೇ ಇರುತ್ತಾರೆ.” ಎಂದು ಟೆಕ್ನಿಕಲ್ ಟೀಮ್ ಅನ್ನು ರಿವೀಲ್ ಮಾಡಿದ್ದಾರೆ. “ಆನೆಗುಡ್ಡೆ ನಂಬಿದಂತಹ ದೇವರು” “ಆನೆಗುಡ್ಡೆ ನಮ್ಮ ಪ್ರೊಡಕ್ಷನ್ ಹೌಸ್ ವಿಜಯ್ ಕಿರಗಂದೂರು ನಂಬಿದಂತಹ ದೇವರು. ನಮಗೆ ಆನೆಗುಡ್ಡೆ ಲಕ್ಕಿ ಮತ್ತೆ ನಂಬಿದಂತಹ ದೇವರು ಕೂಡ. ಅವರು ಬೆಂಗಳೂರಿನಲ್ಲಿದ್ದರು. ಯಾವಾಗಲೂ ಇಲ್ಲಿಗೆ ವಿಸಿಟ್ ಮಾಡುತ್ತಿದ್ದರು. ಹಾಗಾಗಿ ಲಾಸ್ಟ್ ಟೈಮ್ ಕೂಡ ಇಲ್ಲೇ ಮುಹೂರ್ತ ಮಾಡಿದ್ದೆವು. ಸೇಮ್ ಅದೇ ರೂಟ್‌ನಲ್ಲಿ ಹೀಗುತ್ತಿದ್ದೇವೆ. ಗಣಪತಿ ಆಶೀರ್ವಾದ ತೆಗೆದುಕೊಂಡು ಕೆಲಸ ಶುರು ಮಾಡುತ್ತಿದ್ದೇವೆ.” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.