`ಲಕ್ಷ್ಮಣ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಮೂಡಿಸಿರುವ ಯುವನಟ ಅನೂಪ್ ರೇವಣ್ಣ. ‘ಹೈಡ್ ಅಂಡ್ ಸೀಕ್’ ಸಿನಿಮಾ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿರುವ ಅನೂಪ್ ರೇವಣ್ಣ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಅನೂಪ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂತಸದ ದಿನದಂದೇ ಹೈಡ್ ಅಂಡ್ ಸೀಕ್ ಚಿತ್ರತಂಡ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿ ಚಿತ್ರದ ನಾಯಕ ನಟನಿಗೆ ಶುಭಕೋರಿದೆ.
ಸಿಎಂ ಬೊಮ್ಮಾಯಿಯಿಂದ ರೈತನ ಬದುಕು, ಬವಣೆಯ ‘ಕಾಸಿನಸರ’ ಆಡಿಯೋ ಬಿಡುಗಡೆ
ಪುನೀತ್ ನಾಗರಾಜು ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ ಹೈಡ್ ಅಂಡ್ ಸೀಕ್. ಚಿತ್ರದಲ್ಲಿ ಅನೂಪ್ ರೇವಣ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಧನ್ಯಾ ರಾಮ್ ಕುಮಾರ್ ನಟಿಸಿದ್ದಾರೆ. ಹುಟ್ಟುಹಬ್ಬದ ದಿನವೇ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರದಲ್ಲಿ ಸ್ಪೆಶಲ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ಅನೂಪ್ ರೇವಣ್ಣ. ‘ಕಬ್ಜ’ ಹಾಗೂ ‘ಹೈಡ್ ಅಂಡ್ ಸೀಕ್’ ಎರಡೂ ಚಿತ್ರಗಳು ಸ್ಪೆಶಲ್ ಸಿನಿಮಾಗಳಾಗುತ್ತವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಅನೂಪ್.
‘ಹೈಡ್ ಅಂಡ್ ಸೀಕ್’ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಪುನೀತ್ ನಾಗರಾಜು, ವಸಂತ್ ರಾವ್ ಎಂ.ಕುಲ್ಕರ್ಣಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರ್ತಿದ್ದು, ರಿಜೋ ಪಿ ಜಾನ್ ಛಾಯಾಗ್ರಾಹಣ, ಸ್ಯಾಂಡಿ ಅದ್ದಾನ್ಕಿ ಸಂಗೀತ ನಿರ್ದೇಶನ, ಮಧು ತುಂಬಕೆರೆ ಸಂಕಲನ ‘ಹೈಡ್ ಅಂಡ್ ಸೀಕ್’ ಚಿತ್ರಕ್ಕಿದೆ.