Sandalwood Leading OnlineMedia

ಈ ವಾರ ‘ಯುಐ’ ಜೊತೆಗೆ ಬಿಡುಗಡೆ ಆಗಲಿರುವ ಬಹುನಿರೀಕ್ಷಿತ ಚಿತ್ರಗಳ ಪಟ್ಟಿ ಇಲ್ಲಿದೆ.

ಚಿತ್ರಮಂದಿರಗಳಲ್ಲಿ ‘ಪುಷ್ಪ’ರಾಜ್ ದರ್ಬಾರ್ ಕಮ್ಮಿ ಆಗುವ ಮುನ್ನ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬರ್ತಿದೆ. ಹಾಲಿವುಡ್, ಸ್ಯಾಂಡಲ್‌ವುಡ್‌, ಟಾಲಿವುಡ್, ಕಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಚಿತ್ರಗಳಿಗೆ ಇದೇ ಶುಕ್ರವಾರ ಬಿಡುಗಡೆ ಭಾಗ್ಯ ಸಿಗುತ್ತಿದೆ. ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಮುಂದಿನ ವಾರವೇ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಬಾಲಿವುಡ್‌ನ ‘ಬೇಬಿಜಾನ್’ ಸಿನಿಮಾ ತೆರೆಗಪ್ಪಳಿಸಲಿದೆ. ಒಟ್ಟಾರೆ ಇನ್ನೊಂದು ವಾರ ಸಿನಿರಸಿಕರಿಗೆ ಹಬ್ಬವೇ ಸರಿ.

                 ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ‘ಯುಐ’ ಚಿತ್ರಕ್ಕೆ  ಡಬಲ್ ಕ್ಲೈಮ್ಯಾಕ್ಸ್! ಏನಂದ್ರು ಬುದ್ದಿವಂತ?

1. ಯುಐ  / ಭಾರೀ ನಿರೀಕ್ಷೆ ಹುಟ್ಟಾಕ್ಕಿರುವ ‘ಯುಐ’ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರ್ತಿದೆ. 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಬಹಳ ದಿನಗಳ ಬಳಿಕ ಉಪ್ಪಿ ಆಕ್ಷನ್ ಕಟ್ ಹೇಳಿರುವುದು ಕುತೂಹಲ ಮೂಡಿಸಿದೆ.

2. ವಿಡುತಲೈ /  ವೆಟ್ರಿಮಾರನ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ‘ವಿಡುತಲೈ’ ಚಿತ್ರ 10 ವರ್ಷಗಳ ಹಿಂದೆ ಹಿಟ್ ಆಗಿತ್ತು. ಇದೀಗ ಅದರ ಸೀಕ್ವೆಲ್ ಬರ್ತಿದೆ. ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮಿಳು ಹಾಸ್ಯನಟ ಸೂರಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಇದು. ಶುಕ್ರವಾರವೇ ಈ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ನೋಡುಗರ ಗಮನ ಸೆಳೆದಿದೆ. ಈ ಬಾರಿ ವೆಟ್ರಿಮಾರನ್ ಹೇಗೆ ಜಾದೂ ಮಾಡುತ್ತಾರೆ ಕಾದು ನೋಡಬೇಕಿದೆ.

3. ಬಚ್ಚಲ ಮಲ್ಲಿ /  ತೆಲುಗಿನಲ್ಲಿ ಸುಬ್ಬು ಮಂಗಲದೇವಿ ನಿರ್ದೇಶನದ ‘ಬಚ್ಚಲ ಮಲ್ಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಲ್ಲರಿ ನರೇಶ್, ಅಮೃತಾ ಅಯ್ಯರ್, ಹರಿತೇಜಾ, ಸಾಯಿ ಕುಮಾರ್ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಹಳ್ಳಿ ಹಿನ್ನೆಲೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು.

4. ಮುಫಾಸಾ- ದ ಲಯನ್ ಕಿಂಗ್ ಹಾಲಿವುಡ್‌ನಲ್ಲಿ ಬಹಳ ಕುತೂಹಲ ಮೂಡಿಸಿರುವ ‘ಮುಫಾಸಾ: ದ ಲಯನ್ ಕಿಂಗ್’ ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಭಾರತದ ಭಾಷೆಗಳಿಗೆ ಚಿತ್ರ ಡಬ್ ಆಗಿ ಬರ್ತಿದೆ. ಸ್ಟಾರ್ ನಟರು ಚಿತ್ರದ ಪಾತ್ರಗಳಿಗೆ ಧ್ವನಿಯಾಗಿದ್ದಾರೆ. ಬ್ಯಾರಿ ಜೆಂಕಿನ್ಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ.

5. ಮಾರ್ಕೊ /  ಮಲಯಾಳಂನಲ್ಲಿ ಉನ್ನಿ ಮುಕುಂದನ್ ನಟನೆಯ ಆಕ್ಷನ್ ಥ್ರಿಲ್ಲರ್ ‘ಮಾರ್ಕೊ’ ಸಖತ್ ಸದ್ದು ಮಾಡ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅನೀಫ್ ಅದೇನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಾಜು 30 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪಾತ್ರಕ್ಕಾಗಿ ದೇಹ ಹುರಿಗಟ್ಟಿ ಖಡಕ್ ಲುಕ್‌ನಲ್ಲಿ ಮುಕುಂದನ್ ಅಬ್ಬರಿಸಿದ್ದಾರೆ.

 

 

 

Share this post:

Translate »