ವಾರದಕ್ಕೂ ಮೊದಲೇ ದೊಡ್ಡ ಸಿನಿಮಾಗಳ ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದೆ. ನಿಮಗೆ ಬೇಕಾದ ಶೋ, ಬೇಕಾದ ಸೀಟ್ ಕಾಯ್ದಿರಿಸಿ ಸಿನಿಮಾ ನೋಡುವ ಅವಕಾಶ ಈಗ ಸಿಗುತ್ತಿದೆ. ಬೇಡ ಎಂದರೆ ಟಿಕೆಟ್ ರದ್ದು ಮಾಡುವ ಅವಕಾಶವೂ ಇದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಎನ್ನುವುದು ಸಿನಿಮಾ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತಂದಿದೆ. ಜನ ಈಗ ಟಿಕೆಟ್‌ಗಾಗಿ ಕ್ಯೂ ನಿಲ್ಲುವುದು ಕಮ್ಮಿ ಆಗಿದೆ. ಸ್ಟಾರ್ ನಟರ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್‌ಗಳಂತೂ ಬಹುತೇಕ ಬುಕ್‌ಮೈ ಶೋನಲ್ಲೇ ಸೋಲ್ಡೌಟ್ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Max Movie Review: ತಲೆಗೆ ಹೊಕ್ಕಿದ ಬೋಧನೆಯ `ಹುಳ’ಕ್ಕೆ ರಂಜನೆಯ ಲಸಿಕೆ!
ಈ ವರ್ಷ ಕನ್ನಡ ಚಿತ್ರಗಳು ತಕ್ಕಮಟ್ಟಿಗೆ ಸಾಧನೆ ಮಾಡಿದೆ. ವರ್ಷದ ಮೊದಲಾರ್ಧ ನಿರಾಸೆ ಮೂಡಿಸಿದರೂ ದ್ವಿತಿಯಾರ್ಧ ನಾಲ್ಕೈದು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ವರ್ಷಗದ ಕೊನೆಗೆ ಬಂದಿರುವ ‘ಯುಐ’ ಹಾಗೂ ‘ಮ್ಯಾಕ್ಸ್’ ಚಿತ್ರಗಳು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ‘ಮ್ಯಾಕ್ಸ್’ ರಿಲೀಸ್ ಬೆನ್ನಲ್ಲೇ ಈ ವರ್ಷ ಬುಕ್‌ಮೈ ಶೋನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಿಂದ ಯಾವ ಕನ್ನಡ ಸಿನಿಮಾ ಮೊದಲ ಸ್ಥಾನಕ್ಕೇರಿದೆ ಎನ್ನುವುದು ಗೊತ್ತಾಗಿದೆ.
‘ಮ್ಯಾಕ್ಸ್’ ಬರುವವರೆಗೂ ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್ ‘ಯುಐ’ ಎನ್ನುವಂತಿತ್ತು. ಆದರೆ ‘ಮ್ಯಾಕ್ಸ್’ ಬಂದು ಆ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದಾನೆ. ಕ್ರಿಸ್‌ಮಸ್ ರಜೆ ಚಿತ್ರಕ್ಕೆ ವರದಾನವಾಗಿದೆ. ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಇನ್ನು ಈ ವರ್ಷ ಪ್ರೀ ಸೇಲ್ಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿ ಮುಂದೆ ಇದೆ ಓದಿ.
ಭೈರತಿ ರಣಗಲ್ / ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನವೆಂಬರ್ 15ಕ್ಕೆ ತೆರೆಗೆ ಬಂದಿತ್ತು. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಅಷ್ಟೇನು ಚೆನ್ನಾಗಿ ಇರಲಿಲ್ಲ. ಆದರೆ ಸಿನಿಮಾ ರಿಲೀಸ್ ಬಳಿಕ ದಿಢೀರನೆ ಹೆಚ್ಚಾಗಿತ್ತು. 8 ಸಾವಿರ ಟಿಕೆಟ್ ಮಾತ್ರ ಮುಂಗಡ ಬುಕ್ಕಿಂಗ್ ಆಗಿತ್ತು.
ಬಘೀರ / ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಬಘೀರ’ ಸಿನಿಮಾ ಕೂಡ ಈ ವರ್ಷ ಗೆದ್ದು ಬೀಗಿದೆ. ಶ್ರೀಮುರಳಿ ಆಕ್ಷನ್ ಧಮಾಕ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ 11 ಸಾವಿರಕ್ಕೂ ಟಿಕೆಟ್ ಮಾರಾಟವಾಗಿತ್ತು.
ಯುವ / ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವ’ ಸಿನಿಮಾ ಈ ವರ್ಷ ಸದ್ದು ಮಾಡಿತ್ತು. ಅಣ್ಣಾವ್ರ ಮೊಮ್ಮಗನಿಗೆ ಭರ್ಜರಿ ಸ್ವಾಗತವೇ ಸಿಕ್ಕಿತ್ತು. ಯುವ ಬೆಳ್ಳಿಪರದೆಗೆ ಬರುವ ಮುನ್ನ 13 ಸಾವಿರಕ್ಕೂ ಅಧಿಕ ಟಿಕೆಟ್ ಮೊದಲೇ ಮಾರಾಟವಾಗಿತ್ತು.
ಭೀಮ / ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿ ‘ಭೀಮ’ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಹೀಗೆ ಬಂದು ಹಾಗೆ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. 24 ಸಾವಿರಕ್ಕೂ ಅಧಿಕ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿತ್ತು.
ಮಾರ್ಟಿನ್ / ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ‘ಮಾರ್ಟಿನ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ಗೊತ್ತೇಯಿದೆ. ಆದರೂ ಧ್ರುವ ಫ್ಯಾನ್ಸ್ ಸಿನಿಮಾ ನೋಡಲು ಉತ್ಸುಕತೆ ತೋರಿದ್ದರು. ಚಿತ್ರದ 45 ಸಾವಿರ ಟಿಕೆಟ್ ಮೊದಲೇ ಬುಕ್ ಆಗಿತ್ತು.
ಯುಐ / ಈ ವರ್ಷದ ದೊಡ್ಡ ಓಪನಿಂಗ್ ಅದು ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಚಿತ್ರದ್ದು. ಕಳೆದ ವಾರವಷ್ಟೇ ಸಿನಿಮಾ ರಿಲೀಸ್ ಆಗಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು ಸಾಗುತ್ತಿದೆ. 98 ಸಾವಿರ ಟಿಕೆಟ್‌ಗಳು ಮೊದಲ ಪ್ರದರ್ಶನಕ್ಕಿಂತ ಮುನ್ನ ಬುಕ್ ಆಗಿತ್ತು. ಮ್ಯಾಕ್ಸ್ ವರ್ಷದ ಕೊನೆಗೆ ಬಂದು ‘ಮ್ಯಾಕ್ಸ್’ ಸಿನಿಮಾ ಗೆದ್ದಿದೆ. ಬೆಳ್ಳಂ ಬೆಳಗ್ಗೆ ಮೊದಲ ಪ್ರದರ್ಶನ ಆರಂಭಕ್ಕೂ ಮುನ್ನ 1 ಲಕ್ಷದ 10 ಸಾವಿರ ಟಿಕೆಟ್ ಬುಕ್ ಆಗಿತ್ತು. ಆ ಮೂಲಕ ವರ್ಷದ ಕೊನೆಗೆ ಬಂದು ‘ಮ್ಯಾಕ್ಸ್’ ಮೊದಲ ಸ್ಥಾನಕ್ಕೇರಿದೆ. ಕಿಚ್ಚ ದರ್ಬಾರ್ ಶುರುವಾಗಿದೆ.