ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.
Send “Chittara” on WhatsApp to 73 5365 5365 or click the link 👉 http://wame.pro/chittara to cast your vote!
ಐಪಿಎಲ್ ಬಂದರೆ ಸಾಕು ಸಿನಿಮಾಗಳನ್ನು ಬಿಡುಗಡೆ ಮಾಡಲು ಅನೇಕರು ಹಿಂದೇಟು ಹಾಕುತ್ತಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯಲ್ಲಿ ಕೂಡ ಬಿಡುಗಡೆ ವಿಚಾರದಲ್ಲಿ ಕವಡೆ ಹಾಕುವರ ಸಂಖ್ಯೆಯೇ ಹೆಚ್ಚಿದೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ಐಪಿಎಲ್ ಸಮಯದಲ್ಲಿ ಕೂಡ ತಮ್ಮ ಚಿತ್ರವನ್ನು ರಿಲೀಸ್ ಮಾಡುವ ಭಂಡ ಧೈರ್ಯ ಮಾಡುತ್ತಾರೆ. ವಿಶೇಷ ಅಂದರೆ ಹೀಗೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದಾಗ ಚಿತ್ರ ಚೆನ್ನಾಗಿದ್ದಾಗ ಪ್ರೇಕ್ಷಕರು ಆ ಚಿತ್ರದ ಕೈ ಬಿಟ್ಟಿಲ್ಲ. ಐಪಿಎಲ್ ಜ್ವರ ನೆತ್ತಿಗೇರಿದ್ದರೂ ಕೂಡ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ನೋಡಿದ್ದಾರೆ. ಗೆಲ್ಲಿಸಿದ್ದಾರೆ. ಆ ಪೈಕಿ ಕೆಲ ಉದಾಹರಣೆಗಳು ಇಲ್ಲಿವೆ.
ಪೀಕು ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್ ಅಭಿನಯದ ಪೀಕು ಚಿತ್ರ 2015ರಲ್ಲಿ ಬಿಡುಗಡೆಯಾಗಿತ್ತು. ಐಪಿಎಲ್ ಸೀಸನ್ 8ರ ಸಮಯದಲ್ಲಿ ತೆರಗೆ ಬಂದ ಈ ಚಿತ್ರ ನೂರು, ಇನ್ನೂರು, ಮುನ್ನೂರು ಕೋಟಿಯನ್ನು ಗಳಿಸದಿದ್ದರೂ ಕೂಡ ಗೆಲುವನ್ನು ಕಂಡಿತ್ತು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಚಿತ್ರ ಹತ್ ಹತ್ರ ₹80 ಕೋಟಿಯನ್ನು ಗಳಿಸಿತ್ತು. ಕೇಸರಿ ಅಕ್ಷಯ್ ಕುಮಾರ್ ಗೆ ಅದೃಷ್ಟ ಈಗ ಕೈ ಕೊಟ್ಟಿದೆ. ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ. ಆದರೆ ಹಿಂದೊಮ್ಮೆ ಅಕ್ಕಿ ಬಾಲಿವುಡ್ ಪಾಲಿಗೆ ಲಕ್ಕಿಯಾಗಿದ್ದರು. ಇವರು ಮುಟ್ಟಿದ್ದೆಲ್ಲವು ಚಿನ್ನವಾಗುತ್ತಿದ್ದ ಕಾಲ ಅದು. ಆ ಕಾಲದಲ್ಲಿ 2019ರ ಐಪಿಲ್ ಶುರುವಾಗಲು ಇನ್ನೇನು ಎರಡೇ ದಿನ ಬಾಕಿ ಇತ್ತು. ಆಗ ಕೇಸರಿ ಚಿತ್ರ ಬಿಡುಗಡೆಯಾಗಿತ್ತು. ಐಪಿಎಲ್ ಅಬ್ಬರದ ನಡುವೆಯೇ ಮೊದಲ ವಾರ ₹40 ಕೋಟಿಯನ್ನು ಗಳಿಸಿದ್ದ ಕೇಸರಿ ಆ ನಂತರ ₹207.09 ಕೋಟಿ ಹಣವನ್ನು ಕೊಳ್ಳೆ ಹೊಡೆದಿತ್ತು.
ಕೆಜಿಎಫ್- 2 ಯಶ್ ಅವರಿಗೆ ಹೆಸರು ಹಣ ಮತ್ತು ಕೀರ್ತಿಯನ್ನು ನೀಡಿದ ಕೆಜಿಎಫ್ ಚಿತ್ರದ ಎರಡನೇ ಭಾಗ ಕೂಡ ಐಪಿಎಲ್ ಸಮಯದಲ್ಲಿಯೇ ಬಿಡುಗಡೆಯಾಗಿತ್ತು. ಐಪಿಎಲ್ ರೋಚಕ ಹಂತ ತಲುಪಿದ್ದ ಸಮಯದಲ್ಲಿ ಏಪ್ರಿಲ್ 14ರಂದು ಬಿಡುಗಡೆಯಾಗಿದ್ದ ಈ ಚಿತ್ರ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿತ್ತು. ಕೇವಲ ಭಾರತದಲ್ಲಿಯೇ ₹817 ಕೋಟಿಯನ್ನು ಗಳಿಸಿತ್ತು.
ಕೆಜಿಎಫ್- 2 ಯಶ್ ಅವರಿಗೆ ಹೆಸರು ಹಣ ಮತ್ತು ಕೀರ್ತಿಯನ್ನು ನೀಡಿದ ಕೆಜಿಎಫ್ ಚಿತ್ರದ ಎರಡನೇ ಭಾಗ ಕೂಡ ಐಪಿಎಲ್ ಸಮಯದಲ್ಲಿಯೇ ಬಿಡುಗಡೆಯಾಗಿತ್ತು. ಐಪಿಎಲ್ ರೋಚಕ ಹಂತ ತಲುಪಿದ್ದ ಸಮಯದಲ್ಲಿ ಏಪ್ರಿಲ್ 14ರಂದು ಬಿಡುಗಡೆಯಾಗಿದ್ದ ಈ ಚಿತ್ರ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿತ್ತು. ಕೇವಲ ಭಾರತದಲ್ಲಿಯೇ ₹817 ಕೋಟಿಯನ್ನು ಗಳಿಸಿತ್ತು.
ಕೇವಲ ಈ ಚಿತ್ರಗಳು ಮಾತ್ರವಲ್ಲ ಐಪಿಎಲ್ ಸಮಯದಲ್ಲಿ ವಿಕ್ಕಿ ಡೋನರ್, ಪ್ಯಾರ್ ಕಾ ಪಂಚನಾಮ, ತನು ವೆಡ್ಸ್ ಮನು, ಹೌಸ್‌ಫುಲ್ 2, ಇಷ್ಕ್‌ಜಾದೆ, ಚಿತ್ರಗಳು ಕೂಡ ಬಿಡುಗಡೆಗೊಂಡಿವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸಿವೆ. ಮತ್ತೊಂದು ಕಡೆ ಫ್ಯಾನ್, ತಶನ್, ಗೋ ಗೋವಾ ಗ್ವಾನ್ ಅಂತಹ ಸ್ಟಾರ್‌ಗಳ ಚಿತ್ರಗಳು ಕೂಡ ಐಪಿಎಲ್ ಸಮಯದಲ್ಲಿ ಬಿಡುಗಡೆಗೊಂಡು ಸೋತು ಹೋಗಿವೆ. ಇನ್ನು ಕೇವಲ ಭಾರತೀಯ ಚಿತ್ರಗಳು ಮಾತ್ರವಲ್ಲ ಐಪಿಎಲ್ ಸಮಯದಲ್ಲಿ ಬಂದ ಹಾಲಿವುಡ್ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ನೋಡಿದ್ದಾರೆ. ಚಿತ್ರವನ್ನು ಗೆಲ್ಲಿಸಿದ್ದಾರೆ. ಇದಕ್ಕೆ ಅವೆಂಜರ್ಸ್ ಎಂಡ್ ಗೇಮ್ ಒಂದು ಉದಾಹರಣೆ. ಐಪಿಎಲ್ ಸೀಸನ್ 12ರ ಸಮಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದರು. ಪರಿಣಾಮ ಕೇವಲ ಭಾರತದಲ್ಲಿಯೇ ಈ ಚಿತ್ರ ₹373 ಕೋಟಿ ರೂಪಾಯಿಯನ್ನು ಗಳಿಸಿತ್ತು.
ಇನ್ನು ಕನ್ನಡದಲ್ಲಿ ಈ ವಾರ ಮನದ ಕಡಲು ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ಮಾತು ಸುಳ್ಳಾಗಿಸುವ ಜವಾಬ್ಧಾರಿ ಈಗ ಯೋಗರಾಜ್ ಭಟ್ ಅವರ ಮೇಲೀದೆ. ಪರಭಾಷಾ ಚಿತ್ರಗಳ ಹಾವಳಿ ನಡುವೆ ಮನದ ಕಡಲು ಪ್ರೇಕ್ಷಕರನ್ನು ತಲುಪಬೇಕಿದೆ. ಇದರ ನಡುವೆ ಐಪಿಎಲ್ ಅಬ್ಬರ ಬೇರೆ. ಕೇವಲ ಈ ಎರಡು ಚಿತ್ರಗಳು ಮಾತ್ರವಲ್ಲ ಈ ಬಾರಿ ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಕೆಲವರು ರಿಸ್ಕ್ ತೆಗೆದುಕೊಂಡಿದ್ದಾರೆ. ಐಪಿಎಲ್ ನಡುವೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ವೀರ್ ಧೀರ ಶೂರನ್, ಯೆಝು ಕಡಲ್ ಯೆಝು ಮಾಲಾ, ಪೂಚಂಡಿ, ಓಂ ಕಾಳಿ ಜೈ ಕಾಳಿ ಹೀಗೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಐಪಿಎಲ್ ನಡುವೆ ಪ್ರೇಕ್ಷಕರ ಗಮನ ಸೆಳೆಯಲು ಚಿತ್ರತಂಡಗಳು ನಾನಾ ಕಸರತ್ತನ್ನು ಕೂಡ ಮಾಡುತ್ತಿವೆ. ಈ ಎಲ್ಲ ಚಿತ್ರಗಳ ಪೈಕಿ ಈ ಬಾರಿ ಐಪಿಎಲ್‌ಗೆ ಸೆಡ್ಡು ಹೊಡೆದು ಯಾರು ಅತ್ಯಧಿಕ ಹಣವನ್ನು ಗಳಿಸುತ್ತಾರೆ, ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.