ನಟ ಎಂ.ಕೆ.ಮಠ ಅವರ ಕಷ್ಟಕ್ಕೆ ಸ್ಪಂದಿಸಿದ ನವರಸನಾಯಕ ಜಗ್ಗೇಶ್
ಇತ್ತೀಚೆಗೆ ಮಠ ಗುರುಪ್ರಸಾದ್ ಅವರ ನಿರ್ದೇಶನದ ರಂಗನಾಯಕ ಚಿತ್ರದಲ್ಲಿ ಅಭಿನಯಿಸುತ್ತಿದ್ದ ಎಂ.ಕೆ.ಮಠ ಅವರಲ್ಲಿ ಅವರ ಮನೆ ಪರಿಸ್ಥಿಯನ್ನು ಅರಿತ ಜಗ್ಗೇಶ್ ರವರು ತಮ್ಮಿಂದಾದ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದ್ದರು. ಕೊಟ್ಟ ಮಾತಿಗೆ ತಪ್ಪದ ಜಗ್ಗೇಶ್ ಅವರು ರಂಗನಾಯಕ ಚಿತ್ರದ ಚಿತ್ರೀಕರಣ ಮುಗಿಸಿ ಹೋದಮೇಲೆ ಎಂ.ಕೆ.ಮಠ ಅವರ ಮನೆಯ ಕೆಲಸ ಮುಂದುವರೆಸಲು 50 ಸಾವಿರ ರುಪಾಯಿಗಳ ಧನ ಸಹಾಯ ಮಾಡಿ ನೆರವಾಗಿದ್ದಾರೆ.