ಪ್ಯಾರಲಲ್ ಲೈಫ್ ಪರಿಕಲ್ಪನೆಯಡಿಯಲ್ಲಿ, ಅನೂಹ್ಯ ಮತ್ತು ಕುತೂಹಲಕರವಾದ ಪ್ರೇಮಕಥೆಯನ್ನು, ಥ್ರಿಲ್ಲರ್ ಮಾದರಿಯಲ್ಲಿ ಹೆಣೆದಿರುವ ಚಿತ್ರವೇ ಹೆಜ್ಜಾರು.
ಅಭಿಷೇಕ್ ಆಳ್ವ ಮತ್ತು ಲಿಯೊನಿಲ್ಲ ಶ್ವೇತ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ ಸಹ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ನವೀನ್ ಕೃಷ್ಣ ರವರು ಮೊದಲ ಬಾರಿಗೆ ಸಂಪೂರ್ಣವಾಗಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಅರುಣಾ ಬಾಲರಾಜ್, ಮುನಿ ಮತ್ತಿತರು ಸಹ ಅಭಿನಯಿಸಿದ್ದಾರೆ. ಜನಪ್ರಿಯ ಚಿತ್ರಕಥೆ ಸಂಭಾಷಣೆ ಮತ್ತು ಗೀತರಚನೆಕಾರರಾದ ಹರ್ಷಪ್ರಿಯ ರವರು ಮೊದಲಬಾರಿಗೆ ಆಕ್ಷನ್ ಕಟ್ ಹೇಳಿದ್ದು, ಕೆ ಎಸ್ ರಾಮ್ ಜಿ ಯವರೂ ಸಹ ಮೊದಲಬಾರಿಗೆ ಗಗನ ಎಂಟರ್ಪ್ರೈಸಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ ಚಿತ್ರಕ್ಕೆ ಅಮರ್ ಅವರ ಛಾಯಾಗ್ರಹಣವಿದ್ದು ಕಾರ್ತಿಕ್ ಭಟ್ ಸಂಭಾಷಣೆ ಬರೆದಿದ್ದಾರೆ.. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಚಿತ್ರದ ಶೀರ್ಶಿಕೆ ಬಿಡುಗಡೆ ಮಾಡಿದ್ದು ಸದ್ಯದಲ್ಲೇ ವಿಭಿನ್ನ ರೀತಿಯಲ್ಲಿ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ.