ಧೀರೇನ್ ರಾಮ್ ಕುಮಾರ್ ಅವರನ್ನು ಧೀರೇನ್ ಆರ್ ರಾಜ್ ಕುಮಾರ್ ಆಗಿ ಕೆ.ಆರ್.ಜಿ.ಸ್ಟೂಡಿಯೋಸ್ ಮರುಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನೂ ಕೂಡ ಕೆ.ಆರ್.ಜಿ ಘೋಷಿಸಿದೆ. ಚಿತ್ರದ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು.
READ MORE;
“Family is My Weakness” -Ragini Dwivedi ; Chittara Exclusive
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. “ರತ್ನನ್ ಪ್ರಪಂಚ” ಮೂಲಕ ರೋಹಿತ್ ಪದಕಿ, “
READ MORE; `Holiday is My biggest fear’ – Rishab Shetty
ಪೌಡರ್” ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, “ಗುರುದೇವ್ ಹೊಯ್ಸಳ” ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಗೆ ಇದ್ದು, ಈ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ.
ಪ್ರಸ್ತುತವಾಗಿ ಬಹು ನಿರೀಕ್ಷಿತ “ಉತ್ತರಕಾಂಡ” ಚಿತ್ರ ಸೆಟ್ಟೇರಿದ್ದು, “ಪೌಡರ್” ಚಿತ್ರದ ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗುತ್ತಿದೆ.