ನಟ, ನಿರ್ದೇಶಕ, ನಿರ್ಮಾಪಕರಾಗಿ ಎಷ್ಟೋ ನಟ-ನಟಿಯರನ್ನು ಬೆಳೆಸಿದ್ದ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ. ಅವರು ರಿಯಲ್ ಲೈಫ್ನಲ್ಲಿ ಎರಡು ಮದುವೆ ಆಗಿ, ಇಬ್ಬರ ಜೊತೆಯೂ ಜೀವನ ನಡೆಸಿದ್ದರು. ಅವರ ಮೊದಲ ಪತ್ನಿ ಅಂಬುಜಾ ಅವರು 2021ರಲ್ಲಿ ನಿಧನರಾದರು. ದ್ವಾರಕೀಶ್ ನಿಧನದ ಬಳಿಕ ಎರಡನೇ ಹೆಂಡತಿ ಶೈಲಜಾ ಮಾತನಾಡಿದ್ದಾರೆ.
ಇದನ್ನೂ ಓದಿ :ಕನ್ನಡ ಹಿರಿಯ ನಟ ದ್ವಾರಕೀಶ್ ನಿಧನ
ʻದಂಡಿ ದಂಡಿ ಪ್ರೀತಿ, ವಿಶ್ವಾಸ ತುಂಬಿದ ಮನೆಯಿದು, ಮುದ್ದಾದ ಐವರು ಮಕ್ಕಳು-ಸೊಸೆ ಎಲ್ಲರನ್ನು ಬಿಟ್ಟು ಹೋಗ್ತಿದ್ದಾರೆ. ಪ್ರೀತಿಗೆ ಇನ್ನೊಂದು ಹೆಸರೇ ಅವರು. ಎಲ್ಲರನ್ನೂ ಪ್ರೀತಿ ಮಾಡಿದವರು ಅವರು. ಅವರು ನನಗೆ ಯಾವತ್ತೂ ಮೋಸ ಮಾಡಲಿಲ್ಲ. ಅವರ ಪ್ರೀತಿ ನನಗೆ ಎಂದಿಗೂ ಇರತ್ತೆ. ದ್ವಾರಕೀಶ್ ಅವರು ಅಂಬುಜಕ್ಕನಿಗೆ ಎಷ್ಟು ಪ್ರೀತಿ ಕೊಟ್ಟರೋ ಅಷ್ಟೇ ಪ್ರೀತಿ ಕೊಟ್ಟರು. ದ್ವಾರಕೀಶ್ ನನಗೆ ಯಾವತ್ತೂ ಮೋಸ ಮಾಡಲಿಲ್ಲ, ಕಡೆಗಾಣಿಸಲಿಲ್ಲ. ಲೈಫ್ನಲ್ಲಿ ನಾನು ಮರೆಯೋಕೆ ಆಗದಷ್ಟು ಪ್ರೀತಿ ಕೊಟ್ಟಿದ್ದಾರೆ.
ಮಕ್ಕಳಿಗೆ ನಾನು ಎರಡನೇ ತಾಯಿಯಾದ್ರೂ ಕೂಡ ಅವರು ನನಗೆ ಸ್ವಂತ ತಾಯಿ ಹಾಗೆ ಪ್ರೀತಿ ಮಾಡ್ತಾರೆ. ಮಕ್ಕಳು ನನಗೆ ಆಂಟಿ ಅಂತ ಕರೆದರೂ ಅವರು ನನ್ನನ್ನು ತುಂಬ ಪ್ರೀತಿ ಮಾಡ್ತಾರೆ. ತುಂಬ ಮುದ್ದಾದ ಮಕ್ಕಳವು. ನಾನು ಪುಣ್ಯ ಮಾಡಿದ್ದೇ ಎಂದಿದ್ದಾರೆ.
ಇದನ್ನೂ ಓದಿ :Dwarakish :ತುಂಬು ಕುಟುಂಬದ ದೊರೆ ದ್ವಾರಕೀಶ್!
ಮೊದಲ ಪತ್ನಿ ಅಂಬುಜಾ ಅವರು ದ್ವಾರಕೀಶ್ ದೂರದ ಸಂಬಂಧಿ. ಚಿತ್ರದುರ್ಗ ಅವರ ಊರಾಗಿತ್ತು. ಅಂಬುಜನಾ ಪ್ರೀತಿಸುತ್ತಿದ್ದರು ದ್ವಾರಕೀಶ್. ಇದನ್ನು ಪತ್ರದ ಮೂಲಕ ಹೇಳಿಕೊಂಡಿದ್ದರು. ದ್ವಾರಕೀಶ್ ಪ್ರೀತಿಯನ್ನು ಅವರು ಒಪ್ಪಿದ್ದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಅಂಬುಜಾ ಬಳಿ ಹೇಳಿಕೊಂಡಿದ್ದರು ದ್ವಾರಕೀಶ್.
ಇದನ್ನೂ ಓದಿ :ದಪ್ಪ ಆಗಿದ್ದೀನಿ ಅಂದ್ರೆ ಯಾರದ್ದೋ ಜೊತೆಗೆ ಮಜಾ ಮಾಡ್ತಿದ್ದೀನಿ ಅಂದಿದ್ರು : ಜನರ ಮಾತಿಗೆ ನೀತೂ ಕಣ್ಣೀರ
ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಅಂಬುಜಾ. ಮದುವೆ ಆದ ಬಳಿಕ ದ್ವಾರಕೀಶ್ ಅವರ ಸಣ್ಣ ಸಣ್ಣ ಆಸೆಯನ್ನೂ ಅಂಬುಜಾ ಈಡೇರಿಸುತ್ತಿದ್ದರಂತೆ. ದಯಾನಂದ ಕಾಲೇಜಿನಲ್ಲಿ ಅಂಬುಜಾ ಪ್ರೊಫೆಸರ್ ಆಗಿದ್ದರು. 62 ವರ್ಷ ಇವರು ಸಂಸಾರ ನಡೆಸಿದ್ದರು.