Sandalwood Leading OnlineMedia

‘ಜುಗಲ್ ಬಂದಿ’ ಮೊದಲ ಹಾಡು ಬಿಡುಗಡೆ- ವೈಕಂ ವಿಜಯಲಕ್ಷ್ಮಿ ದನಿಯಲ್ಲಿ ‘ಇಂಥವರ ಸಂತಾನ ಭಾಗ್ಯ’ ಹಾಡು

ಹೊಸಬರ ವಿಭಿನ್ನ ಪ್ರಯತ್ನವಿರುವ ‘ಜುಗಲ್ ಬಂದಿ’ ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಡಿಂಡಿಮ ಪ್ರೊಡಕ್ಷನ್ಸ್ ನಡಿ ದಿವಾಕರ್ ಡಿಂಡಿಮ ನಿರ್ದೇಶನ ಮಾಡಿರುವ ಈ ಚಿತ್ರ ಇಂಟ್ರಸ್ಟಿಂಗ್ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿತ್ತು. ಇದೀಗ ಚಿತ್ರೀಕರಣ, ಡಬ್ಬಿಂಗ್ ಕಂಪ್ಲೀಟ್ ಮಾಡಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದರ ಜೊತೆಗೆ ‘ಜುಗಲ್ ಬಂದಿ’ ಸಿನಿಮಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಿದೆ.
 
 
ತಾಯಿ ಸೆಂಟಿಮೆಂಟ್ ಇರುವ ‘ಇಂಥವರ ಸಂತಾನ ಭಾಗ್ಯ’ ವೀಡೀಯೋ ಸಾಂಗ್ ಚಿತ್ರತಂಡ ಬಿಡುಗಡೆ ಮಾಡಿದೆ. ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ಈ ಹಾಡಿನ ಭಾಗವಾಗಿದ್ದಾರೆ. ವೈಕಂ ವಿಜಯಲಕ್ಷ್ಮಿ ದನಿಯಾಗಿರುವ ಈ ಹಾಡಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯ, ಪ್ರದ್ಯೋತ್ತನ್ ಸಂಗೀತ ನಿರ್ದೆಶನವಿದೆ.
 
 
ಮುರ್ನಾಲ್ಕು ಕಥೆಗಳನ್ನು ಒಳಗೊಂಡ ಸಿನಿಮಾವೇ ಈ ‘ಜುಗಲ್ ಬಂದಿ’ ಸಿನಿಮಾ. ಜುಗಲ್ ಬಂದಿ ದಿವಾಕರ್ ಡಿಂಡಿಮ ನಿರ್ದೇಶನದ ಮೊದಲ ಸಿನಿಮಾ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆಗೆ ಮೊದಲ ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ನಿರ್ದೇಶಕರು. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.
 
ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯ ಬರೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾ ತಂಡ ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ.

Share this post:

Related Posts

To Subscribe to our News Letter.

Translate »