ದರ್ಶನ್‌ಗೆ ಸದ್ಯಕ್ಕೆ ಸರ್ಜರಿ ಇಲ್ಲ. ಫಿಸಿಯೋಥೆರಪಿ ಹಾಗೂ ಔಷಧಿಯಿಂದಲೇ ಬೆನ್ನು ನೋವನ್ನು ಗುಣಪಡಿಸುವುದಕ್ಕೆ ವೈದ್ಯರು ಮುಂದಾಗಿರುವ ಬಗ್ಗೆ ವರದಿಯಾಗಿತ್ತು. ಆದ್ರೀಗ ದರ್ಶನ್‌ಗೆ ಬೆನ್ನು ನೋವು ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ದರ್ಶನ್ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಗೆ ನೀಡಿದ್ದಾರುವ ಬಗ್ಗೆ ವರದಿಯಾಗಿದೆ. ಇದೇ ಸಂಕ್ರಾಂತಿ ಬಳಿಕ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ UI Review: ಪ್ರೇಕ್ಷಕನನ್ನೇ ವಿಮರ್ಶೆಗೆ ಒಡ್ಡುವ ಉಪ್ಪಿ ಪ್ರಪಂಚ!
ಇನ್ನೇನು ಕೆಲವು ದಿನಗಳಲ್ಲಿ ದರ್ಶನ್ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೆ. ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಅಂತ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ವರದಿ ಪ್ರಕಾರ, ದರ್ಶನ್‌ಗೆ ಬೆನ್ನು ನೋವು ಇನ್ನೂ ಕಮ್ಮಿಯಾಗಿಲ್ಲ. ಫಿಸಿಯೋಥೆರಪಿ ಹಾಗೂ ಔಷಧಿಗಳಿಂದ ಗುಣವಾಗದೇ ಇದ್ದಿದ್ದರಿಂದ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಮೈಸೂರಿನ ವೈದ್ಯ ಅಜಯ್ ಹೆಗಡೆ ಚಿಕಿತ್ಸೆ ನೀಡುತ್ತಿದ್ದು, ದರ್ಶನ್ ಸರ್ಜರಿಗೆ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ.
ಸಂಕ್ರಾಂತಿ ಹಬ್ಬದ ಬಳಿಕ ದರ್ಶನ್ ಸರ್ಜರಿಗೆ ಒಳಗಾಗಲಿದ್ದಾರೆ. ಡಿಸ್ಕ್‌ನಲ್ಲಿ ಸಮಸ್ಯೆ ಹೆಚ್ಚಾಗಿದ್ದರಿಂದ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರೇ ಸೂಚನೆ ನೀಡಿದ್ದು, ಅದಕ್ಕೆ ದರ್ಶನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೈಸೂರಿನಲ್ಲಿಯೇ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹಾಗಿದ್ದರೆ ‘ಡೆವಿಲ್’ ಸಿನಿಮಾ ಕಥೆಯೇನು? ದರ್ಶನ್ ಇನ್ನೇನು ಕೆಲವೇ ದಿನಗಳಲ್ಲಿ ‘ಡೆವಿಲ್’ ಸಿನಿಮಾದ ಶೂಟಿಂಗ್ ಶುರು ಮಾಡುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಸಂಕ್ರಾಂತಿ ಬಳಿಕ ಶೂಟಿಂಗ್ ಶುರುವಾದರೆ, ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಆರಂಭ ಆಗುತ್ತೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿತ್ತು.
ಆದರೆ, ಯಾಕೆ ‘ಡೆವಿಲ್’ ಶುರುವಾದಲ್ಲಿಂದ ಒಂದೊಂದೇ ವಿಘ್ನಗಳು ಎದುರಾಗುತ್ತಿವೆ. ದರ್ಶನ್ ಬಂಧನ, ಬಳಿಕ ಬೆನ್ನು ನೋವು, ಈಗ ಸರ್ಜರಿ ಅಂತ ಮತ್ತೆ ಸಿನಿಮಾ ಶೂಟಿಂಗ್ ತಡವಾಗುತ್ತಿದೆ. ಹೀಗಾಗಿ ‘ಡೆವಿಲ್’ ನಸೀಬೇ ಸರಿಯಿಲ್ಲ ಅಂತ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗ ಕೂಡ ಮಾತಾಡಿಕೊಳ್ಳುತ್ತಿದೆ. ಇನ್ನು ಸಂಕ್ರಾಂತಿ ಬಳಿಕ ದರ್ಶನ್ ಸರ್ಜರಿಗೆ ಒಳಗಾದರೆ, ಒಂದರಿಂದ ಒಂದೂವರೆ ತಿಂಗಳು ಆಕ್ಷನ್ ಸೀನ್‌ಗಳನ್ನು ಮಾಡುವಂತಿಲ್ಲ. ಆದರೆ, ಚಿಕ್ಕ ಪುಟ್ಟ ದೃಶ್ಯಗಳಲ್ಲಿ ನಟಿಸಬಹುದು. ಒಂದೂವರೆ ತಿಂಗಳ ಬಳಿಕವೇ ಆಕ್ಷನ್ ಸೀನ್ ಮಾಡಬಹುದೆಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ. ಹೀಗಾಗಿ ‘ಡೆವಿಲ್’ ಶೂಟಿಂಗ್ ಮಾರ್ಚ್ ಬಳಿಕ ಶುರುವಾಗಬಹುದು ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ದರ್ಶನ್ ಕಡೆಯವರು ಈ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲ.