Sandalwood Leading OnlineMedia

ಯೋಗರಾಜ್ ಭಟ್ ಅವರಿಂದ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಹಾಡಿನ ಅನಾವರಣ.

ಯೋಗರಾಜ್ ಭಟ್ ಅವರಿಂದ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಹಾಡಿನ ಅನಾವರಣ.

ಕನ್ನಡ ಚಿತ್ರರಂಗದ ಖ್ಯಾತ ನರ್ದೇಶಕ ಯೋಗರಾಜ್ ಭಟ್ ಅವರು ರಿಷಬ್ ಶೆಟ್ಟಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ “ಜೂ ಮೊನಾಲಿಸಾ” ಹಾಡನ್ನು ಮಾಡಿದರು. ತ್ರಿಲೋಕ್ ತ್ರಿವಿಕ್ರಮ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಬಿಡುಗಡೆಯಾದ ಸ್ವಲ್ಪ ಹೊತ್ತಿಗೆ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಸಹಾಯಕ ನಿರ್ದೇಶಕರ ಬಗ್ಗೆ ಸಂದರ ಕ್ಷಣಗಳನ್ನು ಮೆಲಕು ಹಾಕಿಕೊಂಡ ಯೋಗರಾಜ್ ಭಟ್ ಅವರು, ಆ ಕುರಿತು ಕಥೆಯೊಂದನ್ನು ಹೇಳಿದರು. ತಾವು ಕೂಡ ಈ ಚಿತ್ರಕ್ಕೆ ಹಾಡು ಬರೆದಿದ್ದು, ಜೊತೆಗೆ ನಿರ್ದೇಶಕನ ಪಾತ್ರವನ್ನು ಸಹ ಮಾಡಿರುವುದಾಗಿ ಹೇಳಿದರು.‌ ಬಿಡುಗಡೆಯಾಗಿರುವ ಈ ಹಾಡು ಚೆನ್ನಾಗಿದೆ. ಒಳ್ಳೆಯದಾಗಲಿ ಎಂದು ಯೋಗರಾಜ್ ಭಟ್ ಹಾರೈಸಿದರು.

ಇದು ಫಿಲಂ ಮೇಕರ್ ಒಬ್ಬನ ಜೀವನದ ಕುರಿತಾದ ಕಥೆ. ಹಾಗಾಗಿ ಯೋಗರಾಜ್ ಭಟ್ ಅವರ ಕೈಯಿಂದ ಹಾಡು ಬಿಡುಗಡೆ ಮಾಡಿಸಿದ್ದೇವೆ. ಚಿತ್ರರಂಗದಲ್ಲಿ ಸಾಕಷ್ಟು ಅನುಭವವಿರುವ ಹೊನ್ನವಳ್ಳಿ ಕೃಷ್ಣ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಚನಾ ಇಂದರ್, ತಪಸ್ವಿನಿ ಪೊನ್ನಚ ಈ ಚಿತ್ರದ ನಾಯಕಿಯರು. ಸಂದೇಶ್ ಪ್ರೊಡಕ್ಷನ್ಸ್ ನ ಸಂದೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಜೂನ್ 23ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಎಂದರು ರಿಷಬ್ ಶೆಟ್ಟಿ.

ನಿರ್ಮಾಪಕ ಸಂದೇಶ್ ಸಹ ಚಿತ್ರದ ಕುರಿತು ಮಾತನಾಡಿದರು.

ಚಿತ್ರೀಕರಣದಲ್ಲಾದ ಅನುಭವಗಳನ್ನು ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹಂಚಿಕೊಂಡರು.

ನಿರ್ದೇಶಕರಾದ ಕರಣ್ ಅನಂತ್ ಹಾಗೂ ಅನಿರುಧ್ ಮಹೇಶ್ ಚಿತ್ರವನ್ನು ಬೆಂಬಲಿಸುವಂತೆ ಕೋರಿದರು.

ಹಾಡುಗಳ ಬಗ್ಗೆ ವಾಸುಕಿ ವೈಭವ್ ಹಾಗೂ ಛಾಯಾಗ್ರಹಣದ ಕುರಿತು ಚಂದ್ರಶೇಖರ್ – ರಂಗನಾಥ್ ಮಾಹಿತಿ ನೀಡಿದರು.

ಇದು ನನ್ನ ಪ್ರಥಮ ಚಿತ್ರ‌. ಅವಕಾಶ ನೀಡಿದ ನಿರ್ಮಾಪಕ – ನಿರ್ದೇಶಕರಿಗೆ ಧನ್ಯವಾದ ಎಂದರು ನಟಿ ತಪಸ್ವಿನಿ ಪೊನ್ನಚ.

 

Share this post:

Translate »