Sandalwood Leading OnlineMedia

ಪಾಂಡ್ಯರ ಮನೆ ತೊರೆದು ನತಾಶಾ ಎಲ್ಲಿಗೆ ಹೋದರು?

ಯಾಕೋ ಈ ವರ್ಷದ ಆರಂಭದಿಂದಲೂ ಹಾರ್ದಿಕ್‌ ಪಾಂಡ್ಯ ಟೈಮ್‌ ಸರಿಯಿಲ್ಲ ಅನ್ಸುತ್ತೆ. ಒಂದು ಕಡೆ ಕ್ರಿಕೆಟ್‌ ಜೀವನದಲ್ಲಿ ಫೇಲ್‌ ಆಗಿದ್ದಾರೆ. ಅತ್ತ ವೈಯಕ್ತಿಕ ಜೀವನದಲ್ಲೂ ಫೇಲ್‌ ಆಗಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ಸಂಬಂಧದ ಬಗ್ಗೆ ಸರಿಯಿಲ್ಲ ಎಂಬ ಊಹಾಪೋಹಗಳಿಂದ ತುಂಬಿತ್ತು. ಇತ್ತೀಚೆಗಷ್ಟೇ ನತಾಶಾ ಅವರು ತಮ್ಮ ಪತ್ನಿ ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ತಮ್ಮ ಇನ್ಸ್ಟಾಗ್ರಾಮ್ ನಿಂದ ಡಿಲೀಟ್ ಮಾಡಿದ್ದರು.

ಇದರಿಂದಾಗಿ ಈ ಸ್ಟಾರ್‌ ಜೋಡಿಯ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಹರಿಡಿದ್ದವು. ಆದರೆ, ಈ ವಿಚಾರದಲ್ಲಿ ಎಷ್ಟು ಸತ್ಯ ಅಡಗಿದೆ ಎಂಬುದಕ್ಕೆ ದಂಪತಿಗಳು ಯಾವುದೇ ನಿರ್ದಿಷ್ಟ ಉತ್ತರ ನೀಡಿರಲಿಲ್ಲ. ಈಗ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಮದುವೆಯಾಗಿ 4 ವರ್ಷಗಳಾಗಿವೆ. ಹಾರ್ದಿಕ್ ಪಾಂಡ್ಯ ಮೇ 2020ರಲ್ಲಿ ನತಾಶಾ ಅವರನ್ನು ವಿವಾಹವಾದರು. ಇದೀಗ ಈ ಜೋಡಿ ದೂರ ದೂರ ಆಗುತ್ತಿದ್ದಾರೆ.

ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾರ್ದಿಕ್‌ ಪಾಂಡ್ಯ ತಮ್ಮ ಆಸ್ತಿಯಲ್ಲಿ 70% ಭಾಗವನ್ನು ಪತ್ನಿ ನತಾಶಾ ಅವರಿಗೆ ನೀಡಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದರಲ್ಲಿ ಎಷ್ಟು ಸತ್ಯ ಇದೆ ಅಂತ ಈಗಲೇ ಹೇಳೋದಕ್ಕೆ ಆಗೋದಿಲ್ಲ.

ಆದರೆ ಮದುವೆಯಾಗುವ ಮುನ್ನವೇ ಹಾರ್ದಿಕ್ ಮತ್ತು ನತಾಶಾ ದಂಪತಿಗೆ ಗಂಡು ಮಗುವಾಗಿತ್ತು. ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದೆಲ್ಲದರ ನಡುವೆ ಹಾರ್ದಿಕ್ ಮತ್ತು ನತಾಶಾ ನಡುವೆ ಮನಸ್ತಾಪವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

News18 Kannada

ಹಾರ್ದಿಕ್ ಮತ್ತು ನತಾಶಾ ಸಂಬಂಧದ ಬಿರುಕು ಮಾರ್ಚ್ 4ರಂದು ಮುನ್ನೆಲೆಗೆ ಬಂದಿತ್ತು. ಆ ದಿನ ನತಾಶಾ ಹುಟ್ಟುಹಬ್ಬವಾಗಿತ್ತು. ಆದರೆ ನತಾಶಾ ಹುಟ್ಟುಹಬ್ಬದಂದು ಅವರ ಪತ್ನಿ ಏನನ್ನೂ ಪೋಸ್ಟ್ ಮಾಡಿಲ್ಲ. ಅಂದಿನಿಂದ ಇವರಿಬ್ಬರ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನ ಮೂಡಿತ್ತು.

Share this post:

Related Posts

To Subscribe to our News Letter.

Translate »