ಹ್ಯಾಪಿ ಬರ್ತ್ ಡೇ ಟು ಯು ಹೇಳುವುದನ್ನು ಕೇಳಿದ್ದೇವೆ. ಆದರೆ ನಮಗೆ ನಾವೇ ಹೇಳಿಕೊಳ್ಳುವುದು ತೀರಾ ಕಡಿಮೆ. ಅದರಲ್ಲೂ ಒಂಟಿಯಾಗಿದ್ದವರು, ಕೆಲವೊಂದು ಫುಲ್ ಜಾಲಿ ಮೂಡಿನಲ್ಲಿದ್ದವರು ಹ್ಯಾಪಿ ಬರ್ತ್ ಡೇ ಟು ಮಿ ಎಂದೇ ಕಿರುಚಿ ಹೇಳಿಕೊಳ್ಳುತ್ತಾರೆ. ಈ ವಿಚಾರ ಹೀಗ್ಯಾಕೆ ಅಂದ್ರೆ ಇದೇ ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿದೆ. ‘ಹ್ಯಾಪಿ ಬರ್ತಡೇ ಟು ಮಿ’ ಸಿನಿಮಾದ ಹೆಸರೇನೋ ಇಂಟರೆಸ್ಟಿಂಗ್ ಆಗಿದೆ.
READ MORE : ಮತ್ತೆ ಟಿ.ಎಸ್.ಎನ್ ಗರಡಿಯಲ್ಲಿ ಡಾಲಿ ; ಅಂದು `ಅಲ್ಲಮ’ ಇಂದು `ಕೆಂಪೇಗೌಡ’
ನಟಿ ಚೈತ್ರಾ ಆಚಾರ್ ಅವರು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹು ಬೇಡಿಕೆಯಲ್ಲಿರುವ ನಟ ಗೋಪಾಲ್ ದೇಶಪಾಂಡೆ ಸೇರಿದಂತೆ ಇನ್ನೂ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ ಈ ಚಿತ್ರವನ್ನು ನಿರ್ದೇಶಕ ರಾಕೇಶ್ ಕದ್ರಿ ಅವರು ನಿರ್ದೇಶಿಸಿದ್ದಾರೆ. ವಿಷ್ಣು ಪ್ರಸಾದ್ ಅವರು ಕ್ಯಾಮರಾ ವರ್ಕ್ ಮಾಡಿದ್ದಾರೆ. ವಿನಯ್ ಶಂಕರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಇಡೀ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕ ರಾಕೇಶ್ ಕದ್ರಿಯವರೇ ನಿರ್ವಹಿಸಿದ್ದಾರೆ.
READ MORE; ಅಗಸ್ಟ್ 9ಕ್ಕೆ ತೆರೆಯ ಮೇಲೆ ಬಲ `ಭೀಮ’ನ ದರ್ಶನ
ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ಸಿನಿಮಾಗಳು ಮೊದಲು ಥಿಯೇಟರ್‌ಗೆ ಕಾಲಿಟ್ಟು ಅಲ್ಲಿ ಒಂದಷ್ಟು ಸದ್ದು ಮಾಡಿದ ನಂತರವೂ ಓಟಿಟಿಗೆ ಬರಲು ಕಷ್ಟಪಡುತ್ತವೆ. ಅಂತದ್ದರಲ್ಲಿ ‘ಹ್ಯಾಪಿ ಬರ್ತಡೇ ಟು ಮಿ’ ಎಂಬ ಹೊಸ ಚಿತ್ರವನ್ನು ನೇರವಾಗಿ ಓಟಿಪಿಯಲ್ಲಿ ಸ್ಟ್ರೀಮಿಂಗ್ ಮಾಡಲು ಚಿತ್ರತಂಡ ಮುಂದಾಗಿದೆ. ಒಟಿಟಿ ನಿರ್ಧಾರ ಯಾಕೆ..? ಸಿನಿಮಾ ಮಾಡಿದ ಅನುಭವ ಈ ಎಲ್ಲವನ್ನು ನಿರ್ದೇಶಕ ರಾಕೇಶ್ ಕದ್ರಿ ʻಚಿತ್ತಾರʼದೊಂದಿಗೆ ಮಾತನಾಡಿದ್ದಾರೆ.
READ MORE; ಆಲ್ ಓಕೆ ಹೇಳಿದ ‘ಮರ್ಯಾದೆ ಪ್ರಶ್ನೆ’…ಸಕ್ಕತ್ ಸ್ಟುಡಿಯೋದ ಮತ್ತೊಂದು ಪ್ರಯತ್ನ
* ಓಟಿಟಿ ರಿಲೀಸ್ ನಿರ್ಧಾರ ಯಾಕೆ..?
ʻಈ ಸಿನಿಮಾ ಪ್ಲ್ಯಾನ್ ಆಗಿದ್ದು ಲಾಕ್ಡೌನ್ ಸಮಯದಲ್ಲಿ. ನಾವೂ ಸಿನಿಮಾ ಮಾಡಬೇಕು ಎಂದುಕೊಂಡಾಗಲೇ ಒಟಿಟಿ ರಿಲೀಸ್ ಮಾಡಬೇಕು ಅಂತಾನೇ ಶುರು ಮಾಡಿದೆವು. ಆಗ ಒಟಿಟಿ ಫ್ಲಾಟ್ ಫಾರ್ಮ್ ತುಂಬಾ ರೀಚ್ ಆಗುತ್ತಾ ಇತ್ತು. ಹೀಗಾಗಿ ಶೂಟಿಂಗ್ ಎಲ್ಲಾ ಮುಗಿದ ಮೇಲೆ ಒಟಿಟಿಗೆ ಅಪ್ರೋಚ್ ಮಾಡಲು ಹೋಗಿದ್ದೆವು. ಆಗ ಅವರು ಕಂಪಲ್ಸರಿ ನೀವೂ ಥಿಯೇಟರ್ ರಿಲೀಸ್ ಮಾಡಲೇಬೇಕು ಅಂತ ಹೇಳಿದರು. ಇಲ್ಲ ಎಂದರೆ ನಾವೂ ಕನ್ನಡ ಸಿನಿಮಾವನ್ನು ತೆಗೆದುಕೊಳ್ಳುವುದಿಲ್ಲ ಎಂದರು. ಥಿಯೇಟರ್ ರಿಲೀಸ್ ಮಾಡುವುದಕ್ಕೆ ನಮ್ಮ ಬಳಿ ಅಷ್ಟೊಂದು ಹಣವಿರಲಿಲ್ಲ. ಪ್ರಮೋಷನ್ ಎಲ್ಲಾ ಮಾಡುತ್ತೀವಿ ಅಂದ್ರೆ ಮಿನಿಮಮ್ ಇಪ್ಪತ್ತು ಲಕ್ಷ ಬೇಕಾಗುತ್ತದೆ. ಹೀಗೆ ಯೋಚನೆ ಮಾಡುವಾಗಲೇ ನಮಗೆ ಒಟಿಟಿಯಿಂದ ಮತ್ತೆ ಕರೆ ಬಂತು. ಮಾತುಕತೆಯೆಲ್ಲಾ ಮುಗಿಸಿ, ಫೈನಲಿ ಒಟಿಟಿಯಲ್ಲಿಯೇ ಸಿನಿಮಾ ರಿಲೀಸ್ ಮಾಡುತ್ತಾ ಇದ್ದೀವಿʼ.
* ʻಹ್ಯಾಪಿ ಬರ್ತ್ ಡೇ ಟು ಮೀʼ ಬಗ್ಗೆ ಹೇಳುವುದಾದರೆ..?
ʻಈ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗುವಂತ ಕಥೆ ಇದೆ. ಎಲ್ಲಾ ವರ್ಗದವರು ಕುಳಿತು ನೋಡುವಷ್ಟು ಚೆನ್ನಾಗಿದೆ. ನಮಗೂ ಥಿಯೇಟರ್ ಬರಬೇಕು ಅಂತಾನೇ ಆಸೆ ಇತ್ತು. ಆದರೆ ಬಜೆಟ್ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲʼ.
* ಸಿನಿಮಾ ಒಟಿಟಿ ಬಿಸಿನೆಸ್ ಮಾಡಿದ್ಯಾ..?
ʻನಮ್ಮ ಸಿನಿಮಾ ಅಂತ ಅಲ್ಲ ಸಣ್ಣ ಪುಟ್ಟ ಸಿನಿಮಾಗಳಿಗೆ ಬಿಸಿನೆಸ್ ಆಗುವುದೇ ಕಷ್ಟವಾಗಿದೆ. ಜನ ಥಿಯೇಟರ್ಗೆ ಬರಬೇಕು, ಸಿನಿಮಾ ನೋಡಬೇಕು ಆದರೆ ಅದು ಸಾಧ್ಯವೇ ಆಗುತ್ತಿಲ್ಲ. ದೊಡ್ಡ ದೊಡ್ಡ ಬ್ಯಾನರ್ಗಳನ್ನು ಕೇಳಿದ್ರೆ ಸ್ಟಾರ್ ಸಿನಿಮಾಗಳು ಬರಲಿ ಅಂತಾರೆ. ಬಜೆಟ್ ಹಾಕುವುದಷ್ಟೇ ನಿರೀಕ್ಷೆ ಮಾಡಿದ ರೀತಿ ಹಣ ವಾಪಾಸ್ ಬರುವುದಿಲ್ಲʼ.
* ಹಾಗಾದ್ರೆ ಇವತ್ತಿನ ಸಮಸ್ಯೆಯಲ್ಲಿ ನಿರ್ಮಾಪಕರು, ನಿರ್ದೇಶಕರ ಉಳಿವು ಹೇಗೆ..?
ʻಇವತ್ತಿನ ಮಾರ್ಕೆಟ್ ಅನ್ನು ಸ್ಟಡಿ ಮಾಡಿದಾಗ ನನಗೆ ಅನ್ನಿಸಿದ್ದು, ದೊಡ್ಡ ಬ್ಯಾನರ್, ದೊಡ್ಡ ಬ್ಯಾಕಪ್ ಬೇಕಾಗುತ್ತದೆ. ಅದು ಪ್ಲಸ್ ಪಾಯಿಂಟ್ ಆಗುತ್ತದೆ. ಆದರೆ ಹೊಸ ತಂಡಕ್ಕೆ ಆ ರೀತಿಯ ಬ್ಯಾನರ್ಗಳು ಸಪೋರ್ಟ್ ಮಾಡುವುದು ಕಷ್ಟ. ಅಥವಾ ಸಿನಿಮಾ ಮಾಡಿದ ಮೇಲೆ ಸಪೋರ್ಟ್ಗಾದರೂ ನಿಂತಾಗ ಮಾತ್ರ ಸಿನಿಮಾಗಳು ಗೆಲ್ಲುತ್ತವೆ. ಒಂದು ವೇಳೆ ಸಿನಿಮಾ ಚೆನ್ನಾಗಿದ್ದಾಗಲೂ ಹೊಸಬರು ಗೆದ್ದಿರುವ ಉದಾಹರಣೆಗಳು ಇದಾವೆʼ, ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.