Sandalwood Leading OnlineMedia

ಅಯೋಧ್ಯೆಗೆ ಭೇಟಿ ನೀಡಿದ ಹನು-ಮಾನ್ ಚಿತ್ರತಂಡ – ಶ್ರೀರಾಮನ ಆಶೀರ್ವಾದ ಪಡೆದ ಪ್ರಶಾಂತ್ ವರ್ಮಾ, ತೇಜ ಸಜ್ಜ

ಪ್ರಶಾಂತ್ ವರ್ಮಾ ನಿರ್ದೇಶನದ ತೇಜ ಸಜ್ಜ ನಟನೆಯ ಬಹು ನಿರೀಕ್ಷಿತ ತೆಲುಗು ಸಿನಿಮಾ ‘ಹನು-ಮಾನ್. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟೀಸರ್ ಮೂಲಕ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ ಸಿನಿಮಾ ತಂಡ ಬಿಡುಗಡೆಗೆ ಎದುರು ನೋಡುತ್ತಿದೆ. ಇದೇ ವೇಳೆ ನಿರ್ದೇಶಕ ಪ್ರಶಾಂತ್ ವರ್ಮಾ ಹಾಗೂ ನಾಯಕ ತೇಜ ಸಜ್ಜ ಚಿತ್ರತಂಡದೊಂದಿಗೆ ಅಯೋಧ್ಯೆಗೆ ಭೇಟಿ ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ.

 

 

ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ- ಡಿಸೆಂಬರ್ ಮೊದಲ ವಾರದಿಂದ ‘ಟಗರು ಪಲ್ಯ’ ಶೂಟಿಂಗ್ ಶುರು

ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ಪ್ರತಿಭಾವಂತ ನಟ ತೇಜ ಸಜ್ಜ ನಟಿಸುತ್ತಿದ್ದು, ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಟೀಸರ್ ಮೂಲಕ ಭರವಸೆ ಮೂಡಿಸಿರುವ ಚಿತ್ರತಂಡ ಸಿನಿಮಾದ ಮುಂದಿನ ಪ್ರಚಾರಕ್ಕೂ ಮುನ್ನ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ಆಶೀರ್ವಾದವನ್ನು ಪಡೆದುಕೊಂಡಿದೆ.

 

 

ಪ್ರಮೋದ್ ನಟನೆಯ, ಬಹುನಿರೀಕ್ಷಿತ ‘ಬಾಂಡ್ ರವಿ’ ಡಿಸೆಂಬರ್ 9ಕ್ಕೆ ರಿಲೀಸ್

ಚಿತ್ರದಲ್ಲಿ ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ. ಕೆ. ನಿರಂಜನ್ ರೆಡ್ಡಿ ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಡಿ ಅದ್ದೂರಿಯಾಗಿ, ಬಿಗ್ ಬಜೆಟ್ ನಲ್ಲಿ ‘ಹನು-ಮಾನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

 

 

 

 

Share this post:

Related Posts

To Subscribe to our News Letter.

Translate »