ಇತರರಿಗಿಂತ ನಟಿ ಹನ್ಸಿಕಾ ಮಾತ್ರ ತುಂಬಾ ಭಿನ್ನ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಿದ್ದಾಳೆ . ಆಕೆಯು ಗಳಿಸಿದ ಮೊತ್ತದಲ್ಲಿ ಸ್ವಲ್ಪ ಪ್ರಮಾಣವನ್ನು ಬಡವರಿಗೆ ನೀಡುವ ಕೆಲಸ ಮಾಡುತ್ತಿದ್ದಾಳೆ ಈ ನಟಿ.
ತನ್ನ ವಯಸ್ಸು ಕಿರಿಯದಾದರೂ ಆದರ್ಶದ ವಿಷಯದಲ್ಲಿ ತುಂಬಾ ದೊಡ್ಡತನ ಹೊಂದಿರುವ ಈ ಹೆಣ್ಣುಮಗಳು ಈಗಾಗಲೇ 32 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಳೆ. ಅವರ ರಕ್ಷಣೆ ಮಾಡುತ್ತಿರುವ ಈ ಮಹೋನ್ನತ ವ್ಯಕ್ತಿತ್ವವಾದ ಹನ್ಸಿಕ ತನಗೆ ವಿರಾಮ ದೊರೆತರೆ ಸಾಕು ಮಕ್ಕಳನ್ನು ಭೇಟಿ ಮಾಡಲು ಹೊರಟು ಹೋಗುತ್ತಾಳಂತೆ ನಟಿ ಹನ್ಸಿಕಾ ಮೊಟ್ವಾನಿ.
ಸಮಾಜ ಸೇವೆಯನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡಿದ್ದಾರೆ ಹಲವರು. ಅದರಲ್ಲೂ ಚಿತ್ರಕಲಾವಿದರು ತಮ್ಮ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಆದರೆ ಯಾವುದೇ ರೀತಿಯಲ್ಲೂ ಸಮಾಜಕ್ಕೆ ಕಿಂಚತ್ತು ಸಹಾಯ ಮಾಡುವ ಮನಸ್ಸಿಲ್ಲದೆ ಗಾಳಿ ಬಂದಾಗ ತೂರಿಕೋ ಎನ್ನುವಂತೆ ಮನಸ್ಥಿತಿ ಇರುವವರು ಸಹಿತ ಹೇರಳವಾಗಿದ್ದಾರೆ.
ಈಕೆ ಇತ್ತೀಚಿಗೆ ಜನ ಬಳಿ ಒಂದು ಮನವಿ ಮಾಡಿದ್ದಾಳೆ. ನಿಮ್ಮ ಹುಟ್ಟು ಹಬ್ಬದ ದಿನ ಇಲ್ಲವೇ ಯಾವುದಾದರು ವಿಶೇಷವಾದ ಸಂದರ್ಭದಲ್ಲಿ ಬಡವರಿಗೆ, ಅಂಗವಿಕಲರಿಗೆ ಅನ್ನದಾನ ಮಾಡಿ. ನಿಮ್ಮ ಗಳಿಕೆಯ ಸ್ವಲ್ಪ ಭಾಗ ಅಂತಹವರಿಗಾಗಿ ಮೀಸಲಿಡಿ. ನಾನು ಸಾಮಾನ್ಯವಾಗಿ ನನ್ನ ಹುಟ್ಟು ಹಬ್ಬಕ್ಕೆಂದು ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾಳೆ. ಈಕೆಯ ಸಮಾಜಮುಖಿ ವ್ಯಕ್ತಿತ್ವ ಸಮಾಜಕ್ಕೆ ಮಾದರಿ.