ಚಂದನವನದಲ್ಲಿ ಮನ ಮಿಡಿಯುವಂತಹ ಸುಂದರ ದೃಶ್ಯಕಾವ್ಯ ಚಿತ್ರಗಳಾದಂತಹ ಮೈನಾ , ಸಂಜು ವೆಡ್ಸ್ ಗೀತಾ ಚಿತ್ರಗಳನ್ನು ನೀಡಿದಂತಹ ನಿರ್ದೇಶಕ ನಾಗಶೇಖರ್ ಈಗ ತೆಲುಗುನಲ್ಲಿ ಸುಂದರ ದೃಶ್ಯ ಕಾವ್ಯವನ್ನು ನೀಡಲು ಸಜ್ಜಾಗಿದ್ದಾರೆ. ಕನ್ನಡದಲ್ಲಿ ಭರ್ಜರಿ ಯಶಸ್ಸನ್ನ ಕಂಡಂತಹ ಲವ್ ಮಾಕ್ ಟೈಲ್ ಚಿತ್ರದ ಅವತರಣಕೆಯಾಗಿ ತೆಲುಗು ನೇಟಿವಿಟಿಗೆ ಹೊಂದಿಕೊಳ್ಳುವ ಹಾಗೆ ಒಂದಷ್ಟು ಬದಲಾವಣೆ ಮಾಡಿಕೊಂಡು “ಗುರುತುಂದ ಸೀತಾ ಕಾಲಂ” ಚಿತ್ರವನ್ನು ಇದೇ 9ರಂದು ಪ್ರಪಂಚದಾದ್ಯಂತ ಬಿಡುಗಡೆ ಮಾಡಲು ಸಿದ್ದರಾಗಿದ್ದು, ಈ ಚಿತ್ರದ ಕುರಿತು ಮಾಹಿತಿ ನೀಡಲು ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಲಾಯಿತು.
ನವರಸ ನಾಯಕ ಜಗ್ಗೇಶ್ ಅವರಿಂದ ಬಿಡುಗಡೆಯಾಯಿತು “ಪದವಿಪೂರ್ವ” ಚಿತ್ರದ ಟೀಸರ್
ಬಹಳ ವರ್ಷದಿಂದ ನಾಪತ್ತೆಯಾಗಿದ್ದ, ನಿರ್ದೇಶಕ ನಾಗಶೇಖರ್ ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಎಂಬ ಪ್ರಶ್ನೆ ಉತ್ತರ ನೀಡಲು ಮಾತನಾಡುತ್ತಾ ನಾನು ಸಿನಿಮಾ ರಂಗಕ್ಕೆ ಕಲಾವಿದನಾಗಿ ಬಂದು ತದನಂತರ ನಿರ್ದೇಶನ ನಿರ್ದೇಶಕನಾಗಿ ನನ್ನದೇ ಆದ ಒಂದು ಸ್ಥಾನವನ್ನು ಕಂಡುಕೊಂಡೆ. ಒಂದಷ್ಟು ವಿಭಿನ್ನ ಚಿತ್ರಗಳನ್ನು ವೀಕ್ಷಕರಿಗೆ ನೀಡಿದ್ದೇನೆ. ಇದರ ನಡುವೆ ಸ್ಟಾರ್ ನಟನಿಗೆ ಸೀಲು ತುಟಿಯ ಕಥೆಯನ್ನ ಹೇಳಿದೆ. ಆದರೆ ಅವರು ಈ ಪಾತ್ರ ಮಾಡಿದರೇ ಮಾತಿನ ಧ್ವನಿ ಏರುಪೇರು ಆಗಬಹುದು ಒಮ್ಮೆ ಸೆನ್ಸರ್ ಶಿವು ಅವರನ್ನ ಕೇಳಿ ಎಂದರು. ಆಗ ಅವರೊಂದಿಗೆ ಮಾತಾಡಿದಾಗ ಕತೆಯನ್ನು ಇಷ್ಟಪಟ್ಟರು ಈ ಚಿತ್ರ ತಮಿಳಿನಲ್ಲಿ ಮಾಡಿದರೆ ಸೂಕ್ತ ಚಿತ್ರಕ್ಕೆ ನೀವೇ ಹೀರೋ ಆಗಿ ಆಕ್ಟ್ ಮಾಡಿ ಎಂದರು. ನಾನು ಹೀರೋ ಆದರೆ ಯಾರು ನನ್ನನ್ನ ನೋಡ್ತಾರೆ ಚಿತ್ರ ನಿರ್ಮಿಸಲು ಹಣ ಬೇಕಲ್ಲ ಎಂದಾಗ ಶಿವು ನಾನೇ ನಿರ್ಮಾಣ ಮಾಡುತ್ತೇನೆ ಎಂದು ಮುಂದಾದರು. ಹಾಗೆ ಶುರುವಾಗಿ ಚಿತ್ರ ಮುಗಿದು ಮುಂದಿನ ವರ್ಷ ಮಾರ್ಚ್ ಗೆ ಬಿಡುಗಡೆಗೆ ಸಿದ್ದವಾಗಿದೆ ಎಂದು ಹೇಳಿ ಚಿತ್ರದ ರಫ್ ಕಟ್ ಟ್ರೈಲರ್ ಅನ್ನು ತೋರಿಸಿದರು.
ಜನವರಿ 6ಕ್ಕೆ ಮರೆಯದೆ ನೋಡಿ “ಮರೆಯದೆ ಕ್ಷಮಿಸು “
ತದನಂತರ ಮಾತನಾಡುತ್ತಾ ಕೊರೋನಾ ಸಂದರ್ಭದಲ್ಲಿ ದುಡ್ಡಿಗಾಗಿ ಕಷ್ಟಪಟ್ಟ ವಿಚಾರವನ್ನು ಹೇಳುತ್ತಾ, ತೆಲುಗಿನ ಕೆಲವು ಸ್ನೇಹಿತರು, ನಿರ್ಮಾಪಕರು ಕನ್ನಡದಲ್ಲಿ ಸೂಪರ್ ಹಿಟ್ ಲವ್ ಮಾಕ್ ಟೈಲ್ ಚಿತ್ರದ ರಿಮೇಕ್ ಪಡೆಯಲು ಓಡಾಡುತ್ತಿದ್ದರು. ಆಗ ನಾನೇ ಹಕ್ಕನ್ನು ಪಡೆದು ಸ್ವಲ್ಪ ಹೆಚ್ಚಿನ ಹಣಕ್ಕೆ ಕೊಡೋಣ ಅಂದುಕೊಂಡು ರೈಟ್ಸ್ ಪಡೆದೆ. ಆದರೆ ಸಿನಿಮಾ ರೈಟ್ಸ್ ಪಡೆಯಲು ಯಾರು ಬರಲಿಲ್ಲ. ಆಗ ನಾನೇ ಆಲೋಚಿಸಿ ನನ್ನ ಗೆಳೆಯರ ಸಾಕಾರದೊಂದಿಗೆ ತೆಲುಗುನಲ್ಲಿ ನಾಗ್ ಶೇಖರ್ ಮೂವೀಸ್, ಮಣಿಕಂಠ ಎಂಟರ್ಟೈನ್ಮೆಂಟ್ , ಶ್ರೀ ವೇದಾಕ್ಷರ ಮೂವೀಸ್ ಮೂಲಕ ಭಾವನಾ ರವಿ, ನಾಗ್ ಶೇಖರ್ ಹಾಗೂ ರಾಮರಾವ್ ಚಿಂಟಪಲ್ಲಿ ಜೊತೆ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿ ನಾನೇ ನಿರ್ದೇಶನ ಮಾಡಬೇಕು ಎಂದು ತಂಡ ಹೇಳಿದರು. ಕನ್ನಡದಲ್ಲಿ ಯಶಸ್ಸು ಕಂಡಂತಹ ಈ ಚಿತ್ರವನ್ನು ತೆಲುಗುನಲ್ಲಿ ಮಾಡಬೇಕಾದರೆ ಅಷ್ಟೇ ಜವಾಬ್ದಾರಿ ಇರುತ್ತದೆ. ನನ್ನ ಚಿತ್ರಕ್ಕೆ ಗೆಳೆಯ ಸತ್ಯ ಹೆಗಡೆ ಕ್ಯಾಮೆರಾ ಕೆಲಸ ನಿರ್ವಹಿಸಿದ್ದು ಬಹಳ ಅದ್ಭುತವಾಗಿ ದೃಶ್ಯವನ್ನು ಸರಿ ಹಿಡಿದಿದ್ದಾರೆ. ಅಷ್ಟೇ ಸುಮಧುರ ನಾಲ್ಕು ಹಾಡುಗಳಿಗೆ ಕಾಲಭೈರವ ಸಂಗೀತವನ್ನು ನೀಡಿದ್ದಾರೆ.
‘ರೋಲೆಕ್ಸ್’ ಆದ ನಟ ಕೋಮಲ್ -ಶ್ರೀನಿವಾಸ್ ಮಂಡ್ಯ ನಿರ್ದೇಶನದ ನೂತನ ಚಿತ್ರ
ಇನ್ನು ಬಾಹುಬಲಿ ಚಿತ್ರಕ್ಕೆ ಸಂಕಲನ ಮಾಡಿದಂತಹ ಕೋಟಗಿರಿ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಚಿತ್ರವಾಗಿದ್ದು, ನಾಯಕನಾಗಿ ಸತ್ಯದೇವ ಕಾಂಚರನಾ ಆಯ್ಕೆಯಾದ ನಂತರ ಮೂರು ಹುಡುಗಿಯರ ಪಾತ್ರಗಳಿಗೆ ಕನ್ನಡದ ಕಾವ್ಯ ಶೆಟ್ಟಿ, ಮೇಘ ಆಕಾಶ್ ಸೇರಿಕೊಂಡರು. ಮತ್ತೊಂದು ಪ್ರಮುಖ ಪಾತ್ರಕ್ಕೆ ಯಾರು ಎಂಬ ಪ್ರಶ್ನೆ ಬಂದಾಗ ಸ್ಟಾರ್ ನಟಿಯನ್ನು ಹಾಕೋಣ ಎಂದು ನಿರ್ಧರಿಸಿ ತಮನ್ನಾ ಭಾಟಿಯಾ ಒಪ್ಪಿಸಿದ್ದು, ನಮ್ಮ ಚಿತ್ರಕ್ಕೆ ಒಂದು ದೊಡ್ಡ ಶಕ್ತಿ, ಚೈತನ್ಯ ಸಿಕ್ಕಂತಾಯಿತು. ವಿಶೇಷ ಪಾತ್ರದಲ್ಲಿ ಹಿರಿಯ ನಟಿ ಸು ಸುಹಾಸಿನಿ ಮಣಿರತ್ನ ಕೂಡ ಅಭಿನಯಿಸಿದ್ದಾರೆ. ಇದೇ ವಾರ ಬಿಡುಗಡೆಯಾಗುತ್ತಿರುವ ಈ ಚಿತ್ರದ ಬಗ್ಗೆ ಹಾಗೂ ತಂಡಕ್ಕೆ ಶುಭ ಕೊರಲು ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕರ್, ಪತ್ರಕರ್ತ ಚಂದ್ರು ಚೂಡು, ಆನಂದ್ ಆಡಿಯೋ ಮಾಲೀಕರಾದ ಶ್ಯಾಮ್, ಗೆಳೆಯರಾದ ಸ್ಟೀಲ್ ಶ್ರೀನಾಥ್, ನಿರ್ದೇಶಕ ರವಿವರ್ಮ ಆಗಮಿಸಿದ್ದು, ವಿಶೇಷ ಪ್ರದರ್ಶನದಲ್ಲಿ ಈ ಚಿತ್ರವನ್ನು ವೀಕ್ಷಿಸಿದ ಎಲ್ಲರೂ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.