Sandalwood Leading OnlineMedia

Guru Shishyaru Movie Review : ಖೊಖೊ ಲೋಕದಲ್ಲೊಂದು ಜಾಲಿ ಟ್ರಿಪ್

ಕ್ರೀಡೆಯನ್ನೇ ಆಧಾರವಾಗಿಟ್ಟುಕೊಂಡು ನಿರ್ಮಾಣದವಾದ ಚಿತ್ರಗಳು ಕನ್ನಡವನ್ನು ಹೊರತು ಪಡಿಸಿ ಬೇರೆ ಭಾಷೆಗಳಲ್ಲಿ ಸಾಕಷ್ಟಿದೆ. ಈ ನೆಲದ ಸೊಗಡಿನ ದೇಸಿ ಕ್ರೀಡೆಗಳು ಇಲ್ಲಿನ ನಿರ್ಮಾಪಕ/ನಿರ್ದೇಶಕರ ಕಣ್ಣಿಗೆ ಬಿದ್ದಿರೋದು ಅಪರೂಪ. ಆದರೆ ಇದಕ್ಕೆ ಅಪವಾದವೆಂಬAತೆ ಖೊಖೊ ಆಟವನ್ನೇ ಪ್ರಧಾನವಾಗಿ ಇಟ್ಟುಕೊಂಡು ಮೂಡಿಬಂದ ‘ಗುರು ಶಿಷ್ಯರು’ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದ್ದು, ತಮ್ಮ ವೃತ್ತಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗುವಂತಹ ಪಾತ್ರವನ್ನು ಮಾಡಿದ್ದಾರೆ ಶರಣ್. 

 

 

ಮತ್ತೆ ಒಂದಾದ ‘ಪಂಚರಂಗಿ’ ಜೋಡಿ

 

ಖೊಖೊ ಆಟವೇ ಜೀವಾಳವಾಗಿರುವ ‘ಗುರು ಶಿಷ್ಯರು’ ಕಥೆ ಇಂಟರ್ವಲ್ ಹಂತಕ್ಕೆ `ಮುಂದೇನು?’ ಎಂಬ ಕೂತುಹಲವನ್ನು ಮೂಡಿಸಿವಲ್ಲಿ ಸಫಲವಾಗಿ, ನಿರ್ದೇಶಕ ಜಡೇಶ್.ಕೆ.ಹಂಪಿ ಬಗ್ಗೆ ಹೆಮ್ಮೆ ಅನ್ನಿಸುತ್ತದೆ.  ದೇಸಿ ಮೆರುಗಿನೊಂದಿಗೆ ಜಡೇಶ್ ಕಟ್ಟಿಕೊಟ್ಟಿರುವ ‘ಗುರು ಶಿಷ್ಯರು’ ಆಪ್ತವಾಗುತ್ತದೆ. ‘ಗುರು ಶಿಷ್ಯರು’ ಎಂಬ ಟೈಟಲ್ ಕೇಳಿದ ತಕ್ಷಣ ಮೊದಲು ನೆನಪಾಗುವುದೇ ಕಾಮಿಡಿ. ಶರಣ್ ಸಿನಿಮಾ ಎಂದರೆ ಅಭಿಮಾನಿಗಳು ಮೊದಲು ಬಯಸುವುದೇ ಕಾಮಿಡಿ. ಆದರೂ ಕೂಡ ನಿರ್ದೇಶಕರು ಈ ಸಿನಿಮಾದಲ್ಲಿ ಕಾಮಿಡಿಗಿಂತಲೂ ಹೆಚ್ಚಾಗಿ ಖೊಖೊ ಆಟಕ್ಕೆ ಹೆಚ್ಚಿನ ಮಹತ್ವ ನೀಡಿರೋದು ಚಿತ್ರದ ಪ್ಲಸ್ ಪಾಯಿಂಟ್. ಈ ಚಿತ್ರದ ಮೊದಲಾರ್ಧದಲ್ಲಿ ಎಂದಿನ ಕಾಮಿಡಿ ಕಿಂಗ್ ಶರಣ್ ಕಂಡರೆ,  ದ್ವಿತೀಯಾರ್ಧದಲ್ಲಿ ಈ ವರೆಗೆ ನೋಡಿರದ ಶರಣ್ ಪ್ರತಿಭೆ ಅನಾವರಣವಾಗುತ್ತದೆ. ಕ್ಲೈಮ್ಯಾಕ್ಸ್ನಲ್ಲಂತೂ ಶರಣ್ ಅಭಿನಯಕ್ಕೆ ಪ್ರೇಕ್ಷಕ ಸಂಪೂರ್ಣವಾಗಿ ಶರಣಾಗುತ್ತಾನೆ.

 

ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ನಲ್ಲಿ ಮಿಂಚಿದ ಕನ್ನಡತಿ ಇತಿ ಆಚಾರ್ಯ

ಅಪೂರ್ವ ಕಾಸರವಳ್ಳಿ ವಿಲನ್ ಪಾತ್ರದಲ್ಲಿ ಗಮನ ಸೆಳೆಯುವಂತೆ ಅಭಿನಯಿಸಿದ್ದು, ಜಡೇಶ್ ವಿಲನ್ ಅನ್ನು ಹೀಗೂ ತೋರಿಸಬಹುದು ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನ `ಆಣೆ ಮಾಡಿ ಹೇಳುತ್ತೀನಿ…’ ಎಂದು ವರ್ಲ್ಡ್ ಫೇಮಸ್ ಆಗಿದ್ದ ನಿಶ್ವಿಕಾ ನಾಯ್ಡು ಅವರಿಗೆ ಚಿತ್ರದಲ್ಲಿ ಜಡೇಶ್ ಇನ್ನಷ್ಟು ಮಹತ್ವದ ಪಾತ್ರ ಸೃಷ್ಟಿಸಬಹುದಿತ್ತು. ಸಿಕ್ಕ ಅವಕಾಶವನ್ನು ಆಕಾಶ ಎಂದು ಪರಿಗಣಿಸಿ ಪಾತ್ರಕ್ಕೆ ನ್ಯಾಯ ಒದಗಿರಿಸುವ ನಿಶ್ವಿಕಾ, ತಮ್ಮ ಮುಂದಿನ ಚಿತ್ರಗಳ ಪಾತ್ರಗಳನ್ನು ಯೋಚಿಸಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಶಾಲಾ ಮಕ್ಕಳ ಪಾತ್ರ ಮಾಡಿರುವ ಅಷ್ಟೂ ಚಿಣ್ಣರು ಅಭಿನಯದಲ್ಲಿ ಡಿಷ್ಟಿಂಗ್‌ನಲ್ಲಿ ಪಾಸ್ ಆಗಿದ್ದಾರೆ. ಚಿಣ್ಣರ ಈ ಅಸಾಮಾನ್ಯ ಅಭಿನಯದ ಹಿಂದಿರುವ ನಿರ್ದೇಶಕರ ತಾಳ್ಮೆ ಮತ್ತು ಶ್ರದ್ಧೆಗೆ ಉಘೇ ಉಘೇ. ಮಸಲ್ ಮಣಿ ಇತರೇ ಭಾಷೆಯ ಕಾಮಿಡಿ ನಟರನ್ನು ಕಾಪಿ ಮಾಡುವದನ್ನು ತುಸು ಕಡಿಮೆ ಮಾಡಿದರೆ ಉತ್ತಮ ನಟರಾಗುವ ಎಲ್ಲಾ ಸಾಧ್ಯತೆ ಇದೆ. ತರೆ ಮೇಲೆ ಒಂದಷ್ಟು ಹೊತ್ತ ಕಾಣಿಸಿಕೊಳ್ಳುವ ದತ್ತಣ್ಣ, ಎಂದಿನAತೆ ನೋಡುಗನನ್ನು ಮೋಡಿ ಮಾಡುವಲ್ಲಿ ಸಫಲರಾಗುತ್ತಾರೆ.

ರಕ್ತದೋಕುಳಿ’ ಟೀಸರ್ ಲಾಂಚ್ ಮಾಡಿದ ಧೀರೇನ್ ರಾಮ್ ಕುಮಾರ್

 

ಚಿತ್ರಮಂದಿರದಲ್ಲಿ ಕುಳಿತು ರೋಚಕವಾದ ಖೊಖೊ ಪಂದ್ಯಗಳನ್ನು ನೋಡಿದ ಅನುಭವ ನೀಡುವ ‘ಗುರು ಶಿಷ್ಯರು’, ಈಗಾಗಲೇ ಖೊಖೊ ಕ್ರೀಡೆಯನ್ನು ಬಾಲ್ಯದಲ್ಲಿ ಆಡಿದವರಿಗೆ ಅಲ್ಲಲ್ಲಿ ರೋಮಾಂಚನವನ್ನುAಟುಮಾಡಿದರೆ, ಖೊಖೊದ ಬಗ್ಗೆ ಏನೂ ಗೊತ್ತಿಲ್ಲದವರ ಮನಸ್ಸಿನಲ್ಲಿ `ಹೀಗೂ ಉಂಟೇ?’ ಎಂಬ ಪ್ರಶ್ನೆಯನ್ನು ಸೃಷ್ಟಿಸಿ ಹೊಸ ಅನುಭವನ್ನು ನೀಡುತ್ತದೆ. ಡಿಜಿಟಲ್ ಯುಗದಲ್ಲಿ ಅಳಿವಿನಂಚಿನಲ್ಲಿರುವ ಖೊಖೊ ಆಟದ ಉಳಿವಿನ ಬಗ್ಗೆಯೂ ಮಾತಾಡುವ ಚಿತ್ರ, ಇಂದಿನ ಯುವ ಪೀಳಿಗೆಯಲ್ಲಿ ಖೊಖೊ ಆಟದ ಬಗ್ಗೆ ಎಷ್ಟರ ಮಟ್ಟಿಗೆ ಆಸಕ್ತಿ ಮೂಡಿಸುತ್ತದೆ ಅನ್ನೋದು ಯಕ್ಷಪ್ರಶ್ನೆ!

 

 

ಮತ್ತೆ ಒಂದಾದ ‘ಪಂಚರಂಗಿ’ ಜೋಡಿ

 

ಅಜನೀಶ್.ಬಿ.ಲೋಕನಾಥ್ ಅವರ ಸಂಗೀತ ಚಿತ್ರದ ದೊಡ್ಡ ಶಕ್ತಿ ಅನ್ನೋದು ಸಿನಿಮಾ ರಿಲೀಸ್‌ಗೂ ಮುನ್ನವೇ ಹಾಡುಗಳ ಮೂಲಕ ಪ್ರೂವ್ ಆಗಿದ್ದರೂ, ಮೂಲಕ ಅದು ಇನ್ನಷ್ಟು ಪ್ರೂವ್ ಆಗುತ್ತದೆ. ಖೊಖೊ ಆಟದ ದೃಶ್ಯಗಳಲ್ಲಿ ಅರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣ ಜಡೇಶ್ ಕನಸನ್ನು ನನಸು ಮಾಡಿದೆ. ಮಾಸ್ತಿ ಬರೆದಿರುವ ಸಂಭಾಷಣೆಗಳು ‘ಗುರು ಶಿಷ್ಯರು’ನ ಅಸಲಿ ಆಸ್ತಿ. ಒಟ್ಟಿನಲ್ಲಿ ಏಕಾತಾನತೆಯ `ಫಾರ್ಮುಲಾ’ ಚಿತ್ರಗಳನ್ನು ನೋಡಿ ಬೇಸತ್ತ ಪ್ರೇಕ್ಷಕರಿಗೆ ‘ಗುರು ಶಿಷ್ಯರು’ ಸಿನಿಮಾ ಬೆಸ್ಟ್ ಚಾಯ್ಸ್. ಕೊನೆಯದಾಗಿ, ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಗಮನಾರ್ಹ ಪ್ರಯತ್ನ ಮಾಡಿರುವ ಜಡೇಶ್ ಬೆನ್ನಿಗೆ ನಿಂತ ಶರಣ್&ತರುಣ್ ಚಿತ್ರದ ನಿಜವಾದ ಹೀರೋಗಳು ಅಂದರೆ ತಪ್ಪಾಗಲಾರದು.

 

Share this post:

Related Posts

To Subscribe to our News Letter.

Translate »