ಅಂಡರ್ ವಲ್ಡ್ ಮತ್ತು ಪ್ರೀತಿಯ ಕಥಾಹಂದರ ಹೊಂದಿರುವ “ಗನ್ಸ್ ಅಂಡ್ ರೋಸಸ್” ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.
ಕೆಂಗೇರಿ ಸುತ್ತಮುತ್ತ, ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಇನ್ನೂ ಓದಿ ಸೆ.28 ರಾಮ್ ಪೋತಿನೇನಿ ಹಾಗೂ ಶ್ರೀಲೀಲಾ ನಟನೆಯ ‘ಸ್ಕಂದ’ ಸಿನಿಮಾ ರಿಲೀಸ್
ರಾಜಕೀಯದಲ್ಲಿ ಸಕ್ರಿಯರಾಗಿರುವ ಉದ್ಯಮಿ ಹೆಚ್ ಆರ್ ನಟರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಹೆಚ್ ಎಸ್ ಶ್ರೀನಿವಾಸಮೂರ್ತಿ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಶರತ್ ಎಸ್ ಅವರದು. ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನೂ ಓದಿ *ಶ್ರೀಕೃಷ್ಣ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿ ಬಂತು ತಿಮ್ಮನ ಮೊಟ್ಟೆಗಳು*
ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಶೋಭ್ ರಾಜ್, ಅವಿನಾಶ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ವೀಣಾ ಸುಂದರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.