Sandalwood Leading OnlineMedia

*ಕನ್ನಡದಲ್ಲಿಯೂ ಬರ್ತಿದೆ ಗುಜರಾತಿ ಸಿನಿಮಾ, ಜುಲೈ 7ಕ್ಕೆ ‘ರಾಯರು ಬಂದರು ಮಾವನ ಮನೆಗೆ’ ದರ್ಶನ*

ರಾಯರು ಬಂದರು ಮಾವನ ಮನೆಗೆ’..ಇದು ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲೊಂದು..ಸುಧಾರಾಣಿ ಹಾಗೂ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದ ಮೈಸೂರು ಮಲ್ಲಿಗೆ ಸಿನಿಮಾದ ಅತ್ಯುತ್ತಮ ಗೀತೆ. ಇದೇ ರಾಯರು ಬಂದರು ಮಾವನ ಮನೆಗೆ ಎಂಬ ಶೀರ್ಷಿಕೆಯಡಿ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ವಿಶೇಷ ಏನಂದರೆ ಇದು ಗುಜರಾತಿ ಸಿನಿಮಾ. ವರ ಪಧಾರವೋ ಸಾವಧಾನ ಎಂಬ ಟೈಟಲ್ ನಡಿ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡದಲ್ಲಿಯೂ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದನ್ನು ಕನ್ನಡದಲ್ಲಿಯೂ ರಿಲೀಸ್ ಮಾಡುವ ಪ್ರಯತ್ನಕ್ಕೆ ಕೈ ಹಾಕಿರೋದು ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿದ್ದ ಜಾಕ್ ಮಂಜು.. ಸುದೀಪ್ ಆಪ್ತರಾಗಿರುವ ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ನಡಿ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಸಿರಿಗನ್ನಡಂ ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ.

 

 

ಅಂಬಿ ಪುತ್ರನ ಮದುವೆಯಲ್ಲಿ ತಾರೆಯರ ದಂಡು , ಇಲ್ಲಿದೆ exclusive photos

ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್ ಚಿತ್ರ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು, ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧುತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾಬಳಗದಲ್ಲಿದ್ದಾರೆ. ಜುಲೈ 7ಕ್ಕೆ ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ ಸಿನಿಮಾ ಬಿಡುಗಡೆಯಾಗ್ತಿದ್ದು, ಈ ನಿಟ್ಟಿಯಲ್ಲಿ ಇಡೀ ಚಿತ್ರತಂಡ ಬೆಂಗಳೂರಿನಲ್ಲಿಯೂ ಪ್ರಚಾರ ಕಾರ್ಯ ನಡೆಸಲಿದೆ.  

ಇದೇ 9ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಇಡೀ ತಂಡ ಭಾಗಿಯಾಗಲಿದೆ. ಅಂದಹಾಗೇ ರಾಯರು ಬಂದರು ಮಾವನ ಮನೆಗೆ ಸಿನಿಮಾ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ. ಕುಟುಂಬ, ಸಂಬಂಧಗಳ ಸುತ್ತಾ ಇಡೀ ಸಿನಿಮಾ ಸಾಗಲಿದೆ. ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗ್ತಿರುದು ಖುಷಿ ವಿಚಾರವೇ.. ಎಲ್ಲಾ ಚಿತ್ರಗಳನ್ನ ಅಪ್ಪಿಕೊಳ್ಳುವ ಪ್ರೇಕ್ಷಕರ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಮೆಚ್ಚಿಕೊಂಡು ಹರಸಿ ಹಾರೈಸಬೇಕು ಅಷ್ಟೇ..

 

 

 

 

Share this post:

Related Posts

To Subscribe to our News Letter.

Translate »