Sandalwood Leading OnlineMedia

ಕುತೂಹಲ ಮೂಡಿಸಿದೆ “ಗ್ರೇ ಗೇಮ್ಸ್” ಚಿತ್ರದ ಟೀಸರ್

ವಿಭಿನ್ನ ಕಥಾಹಂದರ ಹೊಂದಿರುವ “ಗ್ರೇ ಗೇಮ್ಸ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. “ಗ್ರೇ ಗೇಮ್ಸ್” ಒಂದು ರೋಮಾಂಚಕ ಕೌಟುಂಬಿಕ ಚಿತ್ರವಾಗಿದ್ದು, ಇದರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್ ರಾಘವೇಂದ್ರ, ಶ್ರುತಿ ಪ್ರಕಾಶ್, ಭಾವನಾ ರಾವ್, ಅಪರ್ಣಾ, ರವಿ ಭಟ್ ಮತ್ತು ಪ್ರಮುಖ ಪಾತ್ರದಲ್ಲಿ ಜೈ ಅಭಿನಯಿಸಿದ್ದಾರೆ. ಈ ಕಥೆಯು ನಿಮ್ಮ ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಗಳನ್ನು ನಿರಂತರ ಬದಲಾವಣೆ ಮತ್ತು ಯೋಚಿಸಲು ಒಳಪಡಿಸುತ್ತಿದೆ ಮತ್ತು ವಾಸ್ತವದ ನಿಮ್ಮ ಗ್ರಹಿಕೆಗೆ ಸವಾಲು ಹಾಕುತ್ತದೆ. ಗ್ರೇ ಗೇಮ್ಸ್‌ನ  ಜಗತ್ತಿನಲ್ಲಿ ಹೆಜ್ಜೆ ಹಾಕಿ, ಲೆಟ್ ದ ಗೇಮ್ ಬಿಗಿನ್ಸ್!

ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ  “ಶಿವಾಜಿ ಸುರತ್ಕಲ್ 2” ಟ್ರೇಲರ್

ಗ್ರೇ ಗೇಮ್ಸ್ ಆನ್‌ಲೈನ್ ಗೇಮಿಂಗ್ ಗೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಸುತ್ತ ಸುತ್ತುತ್ತದೆ. ವಿಜಯ್ ರಾಘವೇಂದ್ರ (ಮನಶ್ಶಾಸ್ತ್ರಜ್ಞ), ಭಾವನಾ ರಾವ್ (ಪೊಲೀಸ್ ಅಧಿಕಾರಿ), ಮತ್ತು ಶ್ರುತಿ ಪ್ರಕಾಶ್ (ಚಿತ್ರನಟಿ) ಯಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಚಲನಚಿತ್ರವು ಹೊಸ ಪ್ರತಿಭೆ ಜೈ (ಗೇಮರ್) ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ತಂತ್ರಜ್ಞಾನ ಯುಗದಲ್ಲಿ ನಮ್ಮ ಮೇಲಾಗುವ ಮಾನಸಿಕ ಒತ್ತಡವನ್ನು ಆಧರಿಸಿದೆ. ಚಿತ್ರದಲ್ಲಿ ಮೂರು ಹಾಡುಗಳು ಮತ್ತು ಹೊಸ ಕಥಾವಸ್ತುವಿನ ಜೊತೆಗೆ ಭಾವನಾತ್ಮಕ ತಿರುವುಗಳೊಂದಿಗೆ, ನಿಮ್ಮನ್ನು ಮಾನಸಿಕವಾಗಿ  ಸೆಳೆಯುತ್ತದೆ.

ಡಾಲಿ ಧನಂಜಯ ಅವರಿಂದ ಅನಾವರಣವಾಯಿತು “ದೈವ” ಚಿತ್ರದ ಮೊದಲ ಪೋಸ್ಟರ್

ಈ ಚಿತ್ರದ ಟೀಸರ್ ಆನಂದ್ ಆಡಿಯೋದಲ್ಲಿ ಲಭ್ಯವಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಂಗಾಧರ ಸಾಲಿಮಠ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಒಂದು ರೋಚಕ ಕಥೆಯನ್ನು ರಚಿಸಿದ್ದಾರೆ. ಚಿತ್ರದ ಛಾಯಾಗ್ರಾಹಕ ವರುಣ ಡಿಕೆ ಕ್ಯಾಮೆರಾದಲ್ಲಿ ಕಥೆಗೆ ಜೀವ ತುಂಬಿದ್ದಾರೆ. ಚಿತ್ರವನ್ನು ಆನಂದ ಹೆಚ್.ಮುಗದ್ ನಿರ್ಮಿಸಿದ್ದಾರೆ ಮತ್ತು ಸತೀಶ ಗ್ರಾಮಪುರೋಹಿತ, ಅರವಿಂದ ಜೋಶಿ, ಮತ್ತು ಡೋಲೇಶ್ವರ್ ರಾಜ್ ಸುಂಕು ಸಹ-ನಿರ್ಮಾಣ ಮಾಡಿದ್ದಾರೆ.   “ರಿಯಾಲಿಟಿ ಮತ್ತು ವರ್ಚುವಾಲಿಟಿ ಜಗತ್ತಿನ ಕಥೆಯುಳ್ಳ, ನುರಿತ ಕಲಾವಿದರು ಅಭಿನಯಿಸಿರುವ ಈ ಚಿತ್ರ, ಪ್ರೇಕ್ಷಕರನ್ನು ಮನರಂಜನೆಯ ಜೊತೆಗೆ ಅವರ ವಾಸ್ತವದ ಗ್ರಹಿಕೆಗೆ ಸವಾಲು ಹಾಕುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ ಗಂಗಾಧರ ಸಾಲಿಮಠ.

 

 

 

Share this post:

Related Posts

To Subscribe to our News Letter.

Translate »