ತನ್ನ ಅದ್ದೂರಿ ಮೇಕಿಂಗ್ ಹಾಗೂ ಟೈಟಲ್ ಟೀಸರ್ ಮೂಲಕವೇ ಹೆಚ್ಚು ಸುದ್ದಿಯಾಗಿರುವ ಗೌಳಿ ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಈ ವಿಚಾರವನ್ನು ಖುಷಿಯಿಂದ ಹಂಚಿಕೊಂಡ ನಿರ್ಮಾಪಕ ರಘು ಸಿಂಗಂ ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಶ್ರೀನಗರ ಕಿಟ್ಟಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇತರೆ ಭಾಷೆಯವರ ಗಮನ ಸೆಳೆದಿದೆ. ಅಲ್ಲದೆ ಟ್ರೈಲರ್ ರಿಲೀಸ್ ಸಮಯದಲ್ಲಿ ಗೌಳಿ ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಬಹಿರಂಗಪಡಿಸುವುದಾಗಿಯೂ ನಿರ್ಮಾಪಕರು ಹೇಳಿದ್ದಾರೆ.
ಕಣ್ಮನ ಸೆಳೆಯುತ್ತಿದೆ “ಕಡಲತೀರದ ಭಾರ್ಗವ” ಚಿತ್ರದ “ಸಮಯವೇ” ಸಾಂಗ್
`ಗೌಳಿ’ ಚಿತ್ರ ಸೂರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಹಿಂದೆ ಬಿಡುಗಡೆಯಾದ ಮಹಾರಕ್ಕಸ ಹಾಡಿನ ಮೇಕಿಂಗ್ ಮೆಚ್ಚಿ ನಟ ಶಿವರಾಜ್‌ಕುಮಾರ್, ದುನಿಯಾ ವಿಜಯ್, ಪ್ರಜ್ವಲ್ ಸೇರಿದಂತೆ ಬಹುತೇಕ ಕಲಾವಿದರು ಚಿತ್ರತಂಡವನ್ನು ಅಭಿನಂದಿಸಿದ್ದರು. ಇನ್ನು ಗೌಳಿ ಚಿತ್ರದಲ್ಲಿ ನಾಯಕ ಶ್ರೀನಗರ ಕಿಟ್ಟಿ ಅವರು ಈ ಹಿಂದೆಂದೂ ಕಾಣಿಸಿರದಂಥ ರಗಡ್ ಹಾಗೂ ಫ್ಯಾಮಿಲಿ ಮ್ಯಾನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ನಾಯಕಿ ಪಾವನಾಗೌಡ ಮೊದಲಬಾರಿಗೆ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ,
“ಠಾಣೆ” ಚಿತ್ರದ ಚಿತ್ರದ ಚಿತ್ರೀಕರಣ ಮುಕ್ತಾಯ
ಮರುಡಯ್ಯ, ಗೋವಿಂದೇಗೌಡ ಹೀಗೆ ಒಂದಷ್ಟು ಪಾತ್ರಗಳ ಲುಕ್ಕೇ ಈ. ಚಿತ್ರದಲ್ಲಿ ವಿಭಿನ್ನವಾಗಿದೆ. ಶಶಾಂಕ್ ಶೇಷಗಿರಿ ಅವರ ಸಂಗೀತ ಸಂಯೋಜನೆಯ ೩ ಹಾಡುಗಳು ಈ ಚಿತ್ರದಲ್ಲಿವೆ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ, ಉಮೇಶ್ ಅವರ ಸಂಕಲನ, ರಘು ಎಂ. ಅವರ ಕಲಾನಿರ್ದೇಶನ, ವಿಕ್ರಂಮೋರ್, ಅರ್ಜುನ್ ರೈ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು ಈ. ವರ್ಷದ ಮತ್ತೊಂದು ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣವನ್ನು ಈ ಚಿತ್ರ ಈಗಾಗಲೇ ತೋರಿಸಿದೆ.