Sandalwood Leading OnlineMedia

*ಗೋಪಿಚಂದ್ 31ನೇ ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ – ಸೆಟ್ಟೇರಿತು ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಿನಿಮಾ*

‘ಭಜರಂಗಿ’, ‘ವಜ್ರಕಾಯ’, ‘ವೇದ’ ಸೂಪರ್ ಹಿಟ್ ಸಿನಿಮಾ ಖ್ಯಾತಿಯ ಎ.ಹರ್ಷ ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ ಸ್ಟಾರ್ ನಟ ಗೋಪಿಚಂದ್ 31 ಚಿತ್ರಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಎ.ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದು ಗೋಪಿಚಂದ್ ಹಾಗೂ ಹರ್ಷ ಕಾಂಬಿನೇಶನ್ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದ್ದು, ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ನಡಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.  ಎ.ಹರ್ಷ ಹೆಣೆದ  ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಹೊಸ ಅವತಾರದಲ್ಲಿ ತೆರೆ ಮೇಲೆ ಬರ್ತಿದ್ದಾರೆ ಗೋಪಿಚಂದ್. ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ ಇದಾಗಿದ್ದು, .ಕೆ.ರಾಧಾಮೋಹನ್ ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

 

*ಡಬ್ಬಿಂಗ್ ನಲ್ಲಿ ನಿರತವಾದ ವಸಿಷ್ಠ ಸಿಂಹ ನಟನೆಯ ‘ಲವ್ ಲಿ’  ಚಿತ್ರತಂಡ*

ನಿರ್ಮಾಪಕ ಕೆ.ಕೆ.ರಾಧಾಮೋಹನ್ ಮಾತನಾಡಿ ಗೋಪಿಚಂದ್ ಹಾಗೂ ಎ.ಹರ್ಷ ಜೊತೆ ಸೇರಿ ಸಿನಿಮಾ ಮಾಡುತ್ತಿರೋದಕ್ಕೆ ತುಂಬಾ ಖುಷಿಯಾಗುತ್ತಿದೆ.  ಇದು ನಮ್ಮ ನಿರ್ಮಾಣ ಸಂಸ್ಥೆಯ 14ನೇ ಸಿನಿಮಾ. ನಿರ್ದೇಶಕರು ಪವರ್ ಫುಲ್ ಸಬ್ಜೆಕ್ಟ್ ಇರುವ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೋಪಿಚಂದ್ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಸಿಗಲಿದ್ದಾರೆ. ಇದೇ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.  ಸ್ವಾಮಿ.ಜೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ಸದ್ಯದಲ್ಲೇ ಸಿನಿಮಾದ ತಾರಾಬಳಗ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

 

 

Share this post:

Related Posts

To Subscribe to our News Letter.

Translate »