Left Ad
200 ರೂ ಏಕರೂಪ ಟಿಕೆಟ್ ದರ ಜಾರಿ – ಸಿನಿಮಾ ಅಭಿಮಾನಿಗಳಿಗೆ ರಾಜ್ಯ ಸರ್ಕಾರದ ಉಡುಗೊರೆ - Chittara news
# Tags

200 ರೂ ಏಕರೂಪ ಟಿಕೆಟ್ ದರ ಜಾರಿ – ಸಿನಿಮಾ ಅಭಿಮಾನಿಗಳಿಗೆ ರಾಜ್ಯ ಸರ್ಕಾರದ ಉಡುಗೊರೆ

ದುಬಾರಿ ಸಿನಿಮಾ ಟಿಕೆಟ್ ದರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 12ರಿಂದಲೇ ಏಕರೂಪ ಟಿಕೆಟ್ ದರ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ಹೊಸ ನಿಯಮದಂತೆ, ರಾಜ್ಯದ ಎಲ್ಲ ಏಕಪರದೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ಮೂಲ ಬೆಲೆ 200 ರೂಪಾಯಿ ಮೀರಬಾರದು. ಜೊತೆಗೆ ಶೇ.18 ಜಿಎಸ್‌ಟಿ ಸೇರಿ ಗರಿಷ್ಠ 236 ರೂಪಾಯಿ ಆಗಲಿದೆ. ಈ ನಿರ್ಧಾರದಿಂದ ಸಾಮಾನ್ಯ ಪ್ರೇಕ್ಷಕರಿಗೆ ಟಿಕೆಟ್ ದರದಲ್ಲಿ ಕೊಂಚ ತಗ್ಗುವಿಕೆಯ ಅನುಭವ ದೊರೆಯಲಿದೆ.

ಆದರೆ, ಮಲ್ಟಿಪ್ಲೆಕ್ಸ್‌ಗಳ ಗೋಲ್ಡ್ ಕ್ಲಾಸ್ ಆಸನಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಅಂತಹ ಪ್ರೀಮಿಯಂ ಆಸನಗಳಿಗೆ ಚಿತ್ರಮಂದಿರಗಳು ತಮ್ಮ ಇಷ್ಟದಂತೆ ದರ ನಿಗದಿ ಮಾಡಬಹುದು. ಆದರೆ, ಹೆಚ್ಚಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ ರಿಕ್ಲೈನ್ ಸೀಟುಗಳಿಗೆ ಈ 200 ರೂಪಾಯಿ ಮಿತಿಯೇ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.

ಸದ್ಯ ಈ ಆದೇಶದ ಪ್ರತಿಗಳು ಎಲ್ಲಾ ಚಿತ್ರಮಂದಿರಗಳಿಗೆ ತಲುಪುವ ಪ್ರಕ್ರಿಯೆಯಲ್ಲಿದೆ. ಆದೇಶ ಸಂಪೂರ್ಣ ಜಾರಿಗೆ ಬಂದ ನಂತರ ಪ್ರೇಕ್ಷಕರು ಕಡಿಮೆ ದರದಲ್ಲಿ ಸಿನಿಮಾವನ್ನು ಆನಂದಿಸಲು ಸಾಧ್ಯವಾಗಲಿದೆ.

Spread the love
Translate »
Right Ad